Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಚೀನಾಕ್ಕೆ ಕರ್ನಾಟಕ ಚಾಲೆಂಜ್

Friday, 06.07.2018, 3:05 AM       No Comments

ಕರ್ನಾಟಕ ಸಹಿತ ಭಾರತದ ಮಾರುಕಟ್ಟೆಯ ಬಹುಭಾಗ ಆಕ್ರಮಿಸಿರುವ ಚೀನಾ ಉತ್ಪಾದಿತ ವಸ್ತುಗಳಿಂದಾಗಿ ದೇಶೀಯ ಉದ್ದಿಮೆಗಳು ಮುಚ್ಚುವ ಸ್ಥಿತಿಗೆ ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ‘ಚೀನಾದೊಂದಿಗೆ ಸ್ಪರ್ಧೆ’ (ಕಾಂಪೀಟ್ ವಿತ್ ಚೀನಾ) ಎಂಬ ವಿನೂತನ ಯೋಜನೆಯನ್ನು ಘೋಷಿಸಿದೆ.

ಚೀನಾ ವಸ್ತುಗಳಿಗೆ ತೀವ್ರ ಸ್ಪರ್ಧೆ ನೀಡುವಂಥ ಉತ್ಪನ್ನಗಳನ್ನು ಕರ್ನಾಟಕದಲ್ಲಿಯೇ ತಯಾರಿಸುವ ಯೋಜನೆ ಇದಾಗಿದೆ. ಬಹುಬೇಡಿಕೆ ಇರುವ ಉತ್ಪನ್ನಗಳ ಬಿಡಿಭಾಗಗಳನ್ನು ಹಳ್ಳಿಗಳ ಮಟ್ಟದಲ್ಲಿ ಉತ್ಪಾದಿಸಿ ಅವುಗಳನ್ನು ತಾಲೂಕು ಮಟ್ಟದಲ್ಲಿ ಜೋಡಣೆ ಮಾಡಲಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಮಾಲ್​ಗಳನ್ನು ತೆರೆದು, ಈ ವಸ್ತುಗಳನ್ನು ಮಾರಾಟ ಮಾಡುವುದು ಈ ಯೋಜನೆಯ ಒಟ್ಟಾರೆ ತಿರುಳು.

ಈ ಉದ್ದೇಶಕ್ಕಾಗಿ ಜಿಲ್ಲೆಗಳಲ್ಲಿ ‘ಪ್ಲಗ್ ಆಂಡ್ ಪ್ಲೇ’ ಕೈಗಾರಿಕಾ ಶೆಡ್​ಗಳನ್ನು ನಿರ್ವಿುಸುವುದು ಹಾಗೂ ಯೋಜನೆಗೆ ಪೂರಕವಾಗಿ ಮಾನವ ಸಂಪನ್ಮೂಲ ವೃದ್ಧಿಗೊಳಿಸಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಕರ್ನಾಟಕದ ಯಶಸ್ವಿ ಉದ್ಯಮಿಗಳ ನೇತೃತ್ವದಲ್ಲಿ ಪ್ರತಿ ಕಾರ್ಯಕ್ರಮಕ್ಕೂ ಯೋಜನಾ ಗುರಿ ಘಟಕ (ಪ್ರೋಗ್ರಾಂ ಮಿಷನ್ ಯೂನಿಟ್) ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ.

ಚೀನಾಕ್ಕೆ ಸೆಡ್ಡು

ಚೀನಾ ಉತ್ಪನ್ನಗಳಿಗೆ ಸೆಡ್ಡು ಹೊಡೆಯಲು ಕರ್ನಾಟಕದಲ್ಲಿ ಆಯಾ ಪ್ರದೇಶದ ಸಂಪನ್ಮೂಲ, ವೃತ್ತಿ ಕೌಶಲ ಆಧರಿಸಿ ಅಲ್ಲಿಯೇ ಉತ್ಪನ್ನಗಳನ್ನು ತಯಾರಿಸುವುದು ಸರ್ಕಾರದ ಆಲೋಚನೆ. ಯೋಜನೆ ಮುಖ್ಯಾಂಶ ಇಲ್ಲಿದೆ.

ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬಳಸುವ ಐಸಿಬಿ ಮತ್ತು ಐಸಿ ಚಿಪ್​ಗಳಿಗೆ ವಿಶ್ವಾದ್ಯಂತ ಭಾರಿ ಬೇಡಿಕೆ ಇದೆ. ಐಸಿಬಿ ಚಿಪ್​ಗಳನ್ನು ಮಾರಾಟ ಮಾಡುವ ಹಲವು ಕಂಪನಿಗಳು ಮೈಸೂರು, ಬೆಂಗಳೂರು ನಡುವೆ ಇದೆ. ಆದರೆ ಪ್ರಪಂಚದ ಶೇ 80 ಚಿಪ್​ಗಳು ತೈವಾನ್​ನಿಂದ ಆಮದು ಆಗುತ್ತಿವೆ. ಆದ್ದರಿಂದ ಮೈಸೂರು ಜಿಲ್ಲೆಯಲ್ಲಿ ಐಸಿಬಿ ಚಿಪ್ ತಯಾರಿಸುವ ಕಂಪನಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

 • ಚೀನಾದಿಂದ ಆಮದಾಗುವ ಎಲ್​ಇಡಿ ಲೈಟ್​ಗಳು ಭಾರತದ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಭಾರತದಲ್ಲಿ ವಿದ್ಯುದ್ದೀಪ ಉದ್ಯಮ ಸುಮಾರು  46 ಸಾವಿರ ಕೋಟಿ ಮೌಲ್ಯ ಹೊಂದಿದ್ದು, ಎಲ್​ಇಡಿ ಲೈಟ್​ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಚಿತ್ರದುರ್ಗದಲ್ಲಿ ಇದರ ಉತ್ಪಾದನೆ ಘಟಕ ಆರಂಭಿಸಲು ಸರ್ಕಾರ ಮುಂದಾಗಿದೆ.
 • ಸ್ನಾನಗೃಹದ ಟೈಲ್ಸ್, ಸ್ಯಾನಿಟರಿ ಉಪಕರಣದಲ್ಲಿ ‘ಚೀನಾ ಮೇಡ್’ ಹೆಚ್ಚಿನ ಪ್ರಮಾಣದಲ್ಲಿದೆ. ಹಾಸನ ಜಿಲ್ಲೆಯನ್ನು ಉತ್ಪಾದಕ ಜಿಲ್ಲೆಯಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ.
 • ಚೀನಾದಲ್ಲಿ ತಯಾರಾಗುವ ಬಗೆಬಗೆಯ ಬ್ಯಾಟರಿ ಮತ್ತು ವಿದ್ಯುತ್​ಚಾಲಿತ ಆಟಿಕೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ಇಂಥ ಆಟಿಕೆ ತಯಾರಿಕಾ ಕ್ಲಸ್ಟರ್ ನಿರ್ವಿುಸಲು ಸರ್ಕಾರ ಚಿಂತಿಸಿದೆ.
 • ಚೀನಾದಿಂದ ಆಮದಾಗುವ ಫೋನ್​ಗಳು ಕಡಿಮೆ ದರದಲ್ಲಿ ಸಿಗುವ ಕಾರಣ ಬೇಡಿಕೆ ಹೆಚ್ಚಿದೆ. ಭಾರತ ಪ್ರತಿ ವರ್ಷ 5 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಫೋನ್ ಆಮದು ಮಾಡಿಕೊಳ್ಳುತ್ತಿದೆ. ಜನರು ಇ-ತ್ಯಾಜ್ಯದ ರೂಪದಲ್ಲಿ ಎಸೆಯುವ ಕೆಟ್ಟುಹೋದ ಪ್ರತಿ ಸ್ಮಾರ್ಟ್​ಫೋನನ್ನು ಬಿಡಿಭಾಗಗಳನ್ನಾಗಿ ಪ್ರತ್ಯೇಕಿಸಿದರೆ ಪ್ರತಿ ಫೋನ್​ಗೆ  4000 ದೊರೆಯುತ್ತದೆ ಎಂದು ಲೆಕ್ಕಾಚಾರ ಹಾಕಿರುವ ಸರ್ಕಾರ, ರಾಜ್ಯದಲ್ಲಿ ಒಟ್ಟು 3 ಕೋಟಿ ಫೋನ್​ಗಳ ಬಿಡಿಭಾಗ ಬೇರ್ಪಡಿಸುವ ಅವಕಾಶ ಇದೆ ಎಂದು ಅಂದಾಜಿಸಿದೆ. ಇದಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಫೋನ್ ಬಿಡಿ ಘಟಕಗಳ ಉದ್ಯಮ ಸ್ಥಾಪಿಸಲು ನಿರ್ಧರಿಸಲಾಗಿದೆ.

 

ಭರಪೂರ ಕೊಡುಗೆ

ವಿವಿಧ ಜಿಲ್ಲೆಗಳಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸುವ ಜೊತೆಗೆ ಉದ್ಯೋಗ ಸೃಷ್ಟಿಯನ್ನೂ ಮಾಡುವ ಬೃಹತ್ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ನಮ್ಮ ರಾಜ್ಯದ ಉತ್ಪನ್ನಗಳು ದೇಶ-ವಿದೇಶಗಳಲ್ಲಿ ಹೆಸರು ಮಾಡಬೇಕು ಎನ್ನುವ ಇದರ ಉದ್ದೇಶ.

 • ಸ್ಪೋರ್ಟ್ ಮತ್ತು ಫಿಟ್​ನೆಸ್ ವಸ್ತುಗಳನ್ನು ರಾಜ್ಯದಲ್ಲಿಯೇ ತಯಾರಿಸಲು ತುಮಕೂರು ಜಿಲ್ಲೆಯನ್ನು ಸರ್ಕಾರ ಆಯ್ದುಕೊಂಡಿದೆ. ಒಟ್ಟು 23 ಕ್ರೀಡೆಗಳಿಗೆ ಬೇಕಾಗುವ ವಸ್ತುಗಳನ್ನು ಇಲ್ಲಿ ಉತ್ಪಾದಿಸುವ ಗುರಿ ಹೊಂದಲಾಗಿದೆ.  2 ಸಾವಿರ ಕೋಟಿ ಬಂಡವಾಳದಲ್ಲಿ ಸ್ಪೋರ್ಟ್ಸ್ ಮತ್ತು ಫಿಟ್​ನೆಸ್ ವಸ್ತುಗಳನ್ನು ತಯಾರಿಸಿ, 1 ಲಕ್ಷ ಉದ್ಯೋಗ ಸೃಷ್ಟಿಸುವುದ ಸರ್ಕಾರದ ಉದ್ದೇಶ.
 • ಕೃಷಿ ಉಪಕರಣಗಳನ್ನು ಹೆಚ್ಚಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಕೃಷಿಗೆ ತಕ್ಕಂತೆ ಅಗತ್ಯವಿರುವ ಉಪಕರಣ ನಾವೇ ತಯಾರಿಸಿಕೊಂಡರೆ ಒಳ್ಳೆಯದು ಎಂದು ನಿರ್ಧರಿಸಿರುವ ಸರ್ಕಾರ, ಇಂತಹ ಯಂತ್ರಗಳನ್ನು ಬೀದರ್​ನಲ್ಲಿ ತಯಾರಿಸಲು ಯೋಜನೆ ರೂಪಿಸಿದೆ. ಯಂತ್ರ ತಯಾರಿಕೆಗೆ ಮುಂದೆ ಬರುವ ಕಂಪನಿಗಳಿಗೆ 2 ಸಾವಿರ ಕೋಟಿ ಬಂಡವಾಳ ಹೂಡಲು ಸರ್ಕಾರ ಸಿದ್ಧವಾಗಿದೆ.
 • ಕಲಬುರಗಿ ಜಿಲ್ಲೆಯನ್ನು ಭಾರತದ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರ ಚಿಂತಿಸಿದೆ. ಸೌರವಿದ್ಯುತ್ ಉತ್ಪಾದಿಸಲು ಅಗತ್ಯವಿರುವ ಸೋಲಾರ್ ಪ್ಯಾನಲ್, ಇನ್​ವರ್ಟರ್, ಕೆಪ್ಯಾಸಿಟರ್ ಮತ್ತು ಲುಮಿನೇಟರ್​ಗಳನ್ನು ಕಲಬುರಗಿ ಜಿಲ್ಲೆಯಲ್ಲಿಯೇ ಉತ್ಪಾದಿಸುವ ಗುರಿ ಹೊಂದಲಾಗಿದೆ.
 • ವಿಶ್ವ ವಾಣಿಜ್ಯ ಸಂಸ್ಥೆಯು ಬಹುವಸ್ತ್ರ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಅನೇಕ ಅವಕಾಶಗಳು ದೊರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮ ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿದೆ. ಈ ಕೈಗಾರಿಕಾ ಕ್ರಾಂತಿಯಿಂದ ಒಟ್ಟು ಎಂಟು ಲಕ್ಷ ಉದ್ಯೋಗ ಜಿಲ್ಲಾ ವಲಯಗಳಲ್ಲಿ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಗಣಿಗಾರಿಕೆಗೆ ತರಬೇತಿ ಕಡ್ಡಾಯ

ಗಣಿಗಳು ಮತ್ತು ಭೂವಿಜ್ಞಾನ ಇಲಾಖೆಯ ಕಾಯ್ದೆ ಹಾಗೂ ನಿಯಮ, ಗಣಿ ರಕ್ಷಣಾ ಕ್ರಮಗಳು, ಸಿಡಿಮದ್ದು ಕಾರ್ಯಾಚರಣೆಯ ವಿಧಿವಿಧಾನಗಳು ಹಾಗೂ ಪರಿಸರ ಸಂರಕ್ಷಣೆ ಕುರಿತು ಎಲ್ಲ ಕಲ್ಲುಗಣಿ ಗುತ್ತಿಗೆದಾರರು, ಅವರ ಪ್ರತಿನಿಧಿಗಳಿಗೆ ಅಲ್ಪಾವಧಿ ತರಬೇತಿ. ‘ಗಣಿಗಾರಿಕೆ ಮತ್ತು ಗಣಿ ರಕ್ಷಣಾ ವಿಧಿವಿಧಾನಗಳ ತರಬೇತಿ ಸರಣಿ’ ಆಯೋಜಿಸಲು ಹಾಗೂ ಪ್ರಮಾಣಪತ್ರಗಳನ್ನು ನೀಡಲು ನಿರ್ಧಾರ. ಕಲ್ಲುಗಣಿ ಗುತ್ತಿಗೆದಾರರು ಮತ್ತು ಹೊಸ ಪರವಾನಗಿ ಪಡೆಯುವ ಗುತ್ತಿಗೆದಾರರು ಈ ತರಬೇತಿ ಪಡೆಯುವುದು ಕಡ್ಡಾಯ.

ಅನುಷ್ಠಾನಕ್ಕೆ ತರಬೇತಿ

ಈ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆರು ತಿಂಗಳಿ ನಿಂದ ಎರಡು ವರ್ಷ ಕೈಗಾರಿಕೆ ತರಬೇತಿ ಅಗತ್ಯ ಇರುವ ಕಾರಣ, ಮೊದಲ ಹಂತದಲ್ಲಿ ತರಬೇತಿ ಶಾಲೆಗಳನ್ನು ತೆರೆಯಲಾಗುವುದು. ಇದಕ್ಕಾಗಿ ಏಳು ಜಿಲ್ಲೆಗಳಿಗೆ 500 ಕೋಟಿ ಮೀಸಲಿಡಲಾಗಿದೆ.

 • ಜವಳಿ ಮತ್ತು ಸಿದ್ಧ ಉಡುಪು ವಲಯಕ್ಕೆ ಒತ್ತು ನೀಡಲು ಹಾಗೂ ಇಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಜವಳಿ ನೀತಿ ಘೋಷಣೆ.
 • ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಡಿಸೈನ್ ಮೂಲಕ ಅತ್ಯಾಧುನಿಕ ಕೈಮಗ್ಗ ಕೇಂದ್ರ ಸ್ಥಾಪಿಸಿ ನೇಕಾರರಿಗೆ ಹೊಸ ವಿನ್ಯಾಸದ ತಂತ್ರಜ್ಞಾನ ವರ್ಗಾವಣೆ.
 • ಶತಮಾನದ ಹಿಂದೆಯೇ ಸ್ಥಾಪನೆಗೊಂಡಿರುವ ಹಾಸನದ ‘ಕಿಮ್ಕೊ’ ಪುನರುಜ್ಜೀವನ ಮತ್ತು ಆಧುನೀಕರಣಕ್ಕೆ 10ಕೋಟಿ.
 • ಸಾರ್ವಜನಿಕ ಉದ್ಯಮಗಳ ಲಾಭಾಂಶ ಸಾರ್ವ ಜನಿಕರೊಂದಿಗೆ ಹಂಚಿಕೆ, ಜನರು ಇಂತಹ ಕಂಪನಿಗಳ ಕುರಿತು ಆಸಕ್ತಿ ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ 3 ಕಂಪನಿಗಳನ್ನು ಷೇರು ಮಾರುಕಟ್ಟೆಯ ‘ಲಿಸ್ಟೆಡ್ ಕಂಪನಿ’ ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮ.

ಕುಶಲಕರ್ವಿುಗಳಿಗೆ ಪ್ರೋತ್ಸಾಹ ವೇತನ

ತೆಂಗಿನ ನಾರಿನ ವಲಯಕ್ಕೆ ಉತ್ತೇಜನ ನೀಡಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿ ಕುಶಲಕರ್ವಿುಗೆ ವಾರ್ಷಿಕ 10ಸಾವಿರ ಪ್ರೋತ್ಸಾಹ ವೇತನ ಮತ್ತು ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆಗೆ ಶೇ.10 ದರದಲ್ಲಿ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ ನೀಡುವುದಾಗಿ ಸರ್ಕಾರ ಹೇಳಿದೆ.


ಸ್ವಲ್ಪ ಸಿಹಿ ಜಾಸ್ತಿ ಕಹಿ

|ರಮೇಶ ಪಾಟೀಲ, ಹುಬ್ಬಳ್ಳಿ ವಾಣಿಜ್ಯೋದ್ಯಮಿ ಮತ್ತು ಕರ್ನಾಟಕ, ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ

ಮುಂಗಡಪತ್ರವು ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಸ್ವಲ್ಪವೇ ಸಿಹಿ, ಹೆಚ್ಚು ಕಹಿ ಎಂಬಂತಿದೆ. ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಿದಾಗ ಅಂತಿಮ ಹಂತದ ದರ ನಿಗದಿ, ಕೃಷಿ ಭೂಮಿ ಖರೀದಿ ಸರಳೀಕರಣಕ್ಕೆ ನಿಯಮ, ಹೊಸ ಜವಳಿ ನೀತಿ ಭರವಸೆ ಇವು ಸಿಹಿ ಅಂಶಗಳು. ತೆಂಗಿನ ನಾರಿನ ವಲಯದಲ್ಲಿ ಕುಶಲಕರ್ವಿುಗೆ ವಾರ್ಷಿಕ 10 ಸಾವಿರ ರೂ. ಪ್ರೋತ್ಸಾಹ ಧನ, ಕಲ್ಲುಗಣಿ ಮತ್ತು ಕ್ರಷರ್ ಮಾಹಿತಿಗೆ ಆಪ್ ಅಭಿವೃದ್ಧಿ ಇವು ಸಮಾಧಾನಕರ ಸಂಗತಿ. ಮರಳಿನ ವಿಷಯದಲ್ಲಿ ಸರ್ಕಾರ ಬದ್ಧತೆ ತೋರಿದ ನಂತರವಷ್ಟೇ ನಂಬಬಹುದು.

ಉತ್ತರ ಕರ್ನಾಟಕಕ್ಕೆ ತಾರತಮ್ಯವಾಗಿರುವುದು ಕಹಿ ಅಂಶ. ಕಾಂಪೀಟ್ ವಿತ್ ಚೈನಾ ಪರಿಕಲ್ಪನೆ ಚೆನ್ನಾಗಿದೆ. ಆದರೆ ಅಸ್ಪಷ್ಟತೆ ಮತು ಗೊಂದಲಗಳಿವೆ. ರಾಜ್ಯಕ್ಕೆ ಬರುವ ಚೀನಾ ವಸ್ತು ತಡೆಯಲು ಸ್ಪರ್ಧೆಯೆ? ಚೀನಾದಂತೆ ಹೊರದೇಶದ ಮಾರುಕಟ್ಟೆ ಗುರಿಯೆ? ರಾಶಿ ರಾಶಿ (ಗುಣಮಟ್ಟವಿಲ್ಲದ) ವಸ್ತು ತಯಾರಿಸಿ ಡಂಪ್ ಮಾಡುವುದೆ? ಎಂಬ ಯಾವ ಮಾಹಿತಿಯೂ ಇಲ್ಲ. ಘಟಕ ಸ್ಥಾಪನೆಗೆ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಏನೂ ಹೇಳಿಲ್ಲ.

ಮುಂದಿನ ವರ್ಷಗಳಲ್ಲಿ ಸರ್ಕಾರದಿಂದ 14 ಸಾವಿರ ಕೋಟಿ ರೂ. ಹೂಡಿಕೆ ಎನ್ನುವ ಭರವಸೆ ಯಾವ ಲೆಕ್ಕಾಚಾರ ಆಧರಿಸಿದ್ದು? ಮುಂದಿನ ಎಷ್ಟು ವರ್ಷಗಳಲ್ಲಿ ಹೂಡಿಕೆ? ಯಾವ ರೀತಿಯಲ್ಲಿ ಸರ್ಕಾರದ ಭಾಗೀದಾರಿಕೆ? ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬೆಲ್ಲ ಪ್ರಶ್ನೆಗಳಿವೆ. ಮುಂದಿನ ವರ್ಷ ಎನ್ನುವ ಶಬ್ದವೇ ಈ ಸಲ ಏನೂ ಕೊಡುವುದಿಲ್ಲ ಎನ್ನುವುದನ್ನು ಪುಷ್ಟೀಕರಿಸುತ್ತದೆ! ಅಂದರೆ ಈ ಆರ್ಥಿಕ ವರ್ಷದಲ್ಲಿ ಈ ಯೋಜನೆಗಳ ಜಾರಿ ಅನುಮಾನ.

ಬೃಹತ್ ಕೈಗಾರಿಕೆ ಸ್ಥಾಪನೆಯಿಂದ ದೀರ್ಘಾವಧಿ ಉದ್ಯೋಗ ಸೃಜನೆಯಾಗುತ್ತದೆ. ಆ ಕುರಿತು ಯಾವ ಭರವಸೆಯೂ ಇಲ್ಲ. ಹಾಲಿ ಇರುವ ಕೈಗಾರಿಕಾ ವಸಾಹತುಗಳಲ್ಲಿಯ ಮೂಲ ಸೌಕರ್ಯ ಸುಧಾರಣೆ ಪ್ರಸ್ತಾಪಿಸಿಲ್ಲ. ಆತಂಕದ ಸಂಗತಿ ಎಂದರೆ, ವಿದ್ಯುತ್ ದರ ಹೆಚ್ಚಳ ಪ್ರಸ್ತಾಪ. ಇದು ಹಾಲಿ ಇರುವ ಕೈಗಾರಿಕೆಗಳ ತಲೆಬಿಸಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

 

 

ಪ್ರವಾಸೋದ್ಯಮ ಉದ್ಯೋಗ ತಾಣ

ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ತರ ಯೋಜನೆಗಳು ಸಿಗದಿದ್ದರೂ, ಮೂಲ ಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಹೊಸದಾಗಿ ಘೋಷಿಸಲಾಗಿದೆ.

ವಾಸೋದ್ಯಮ ವಲಯದ ಸಮಗ್ರ ಅಭಿವೃದ್ಧಿಗೆ ಒತ್ತು ಹಾಗೂ ಉದ್ಯೋಗ ಸೃಷ್ಟಿಗೆ ಗಮನ. ್ಝ ಉದ್ಯೋಗಾವಕಾಶಗಳ ಸೃಷ್ಟಿಗೆ ಕೌಶಲಾಭಿವೃದ್ಧಿ, ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಹಾಗೂ ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ ರಿಫ್ರೆಷರ್ ಕೋರ್ಸ್. ಪ್ರವಾಸೋದ್ಯಮ ಸಂಬಂಧಿತ ವಿಷಯಗಳಲ್ಲಿ ಎರಡು ವರ್ಷಗಳ ಡಿಪ್ಲೊಮಾ ವ್ಯಾಸಂಗ ಆರಂಭಕ್ಕೆ ಚಿಂತನೆ. ಬೇಲೂರು, ಹಂಪಿ ಮತ್ತು ವಿಜಯಪುರದಂಥ ಪ್ರವಾಸಿ ತಾಣಗಳಲ್ಲಿ, ವಿವಿಧ ಭಾಷೆಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳಾಗಿ (Guides) ಕಾರ್ಯನಿರ್ವಹಿಸಲು ಮುಂದೆ ಬರುವ ಯುವಕ-ಯುವತಿಯರಿಗೆ ತರಬೇತಿ ನೀಡಲು ಕೌಶಲಾಭಿವೃದ್ಧಿ ಯೋಜನೆ. ಎರಡು ವರ್ಷದ ಡಿಪ್ಲೊಮಾ ತರಬೇತಿ ನೀಡಲು ಮುಂದೆ ಬರುವ ಖಾಸಗಿ ಸಂಸ್ಥೆಗಳಿಗೆ ಷೇರು ಬಂಡವಾಳದ ರೂಪದಲ್ಲಿ ತಲಾ 60 ಲಕ್ಷ ರೂ. ನೀಡಿಕೆ ಹಾಗೂ ಪರಿಸರ ಮತ್ತು ಆಹಾರದ ಶುದ್ಧತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಸರ್ಕಾರಿ ಸಂಸ್ಥೆಗಳಿಗೆ ನೆರವಾಗಲು 20 ಕೋಟಿ ರೂ. ನಿಗದಿ.ರಾಜ್ಯದ ವಿವಿಧ ಪ್ರವಾಸಿತಾಣಗಳಲ್ಲಿ ಗುಣಮಟ್ಟದ ಹೋಟೆಲ್​ಗಳ ಸೌಲಭ್ಯ ಒದಗಿಸುವ ಚಿಂತನೆ. 500 ಕೊಠಡಿಗಳ ಸೌಲಭ್ಯವಿರುವ ‘3 ಸ್ಟಾರ್ ಹೋಟೆಲ್​ಗಳನ್ನು’ ತೆರೆಯಲು ಮುಂದೆಬರುವ ಖಾಸಗಿ ಕಂಪನಿಗಳಿಗೆ ಷೇರು ಬಂಡವಾಳವಾಗಿ 3 ಕೋಟಿ ರೂ. ನೀಡಿಕೆ. ಸರ್ವೀಸ್ ಅಪಾರ್ಟ್​ವೆುಂಟ್ ಕಟ್ಟಲು ಮುಂದೆ ಬರುವ ಸಂಸ್ಥೆಗಳಿಗೆ, Term Sheet ಆಧಾರದ ಮೇಲೆ ಶೇ. 30 ಷೇರು ಬಂಡವಾಳ ನೀಡಿಕೆ.

ಕೆಎಸ್​ಟಿಡಿಸಿಗೆ 80 ಕೋಟಿ ರೂ.

ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂ. ನಿಗದಿ. ಸರ್ಕಾರದ ಎಲ್ಲ ಹೂಡಿಕೆಗಳನ್ನು 4 ವರ್ಷದ ನಂತರ ಹಿಂತೆಗೆದುಕೊಂಡು ಮತ್ತೆ ಸರ್ಕಾರಕ್ಕೆ ಜಮಾ ಮಾಡುವ ನಿರ್ಧಾರ. ಪ್ರವಾಸಿ ತಾಣಗಳಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಹೂಡಿಕೆ ಮಾಡಲು ಮುಂದೆ ಬರುವ ಉದ್ದಿಮೆದಾರರು, ಸ್ಥಳೀಯ ಕಾನೂನು ಹಾಗೂ ಎಲ್ಲ ಪ್ರಾಧಿಕಾರಗಳ ಅನುಮೋದನೆ ಪಡೆಯುವುದು ಅವಶ್ಯಕ. ಹೂಡಿಕೆಗಳಿಗೆ ನೆರವು ನೀಡಲೆಂದು ಕರ್ನಾಟಕ ಸರ್ಕಾರ ಈಗಾಗಲೇ KITVEN ಫಂಡ್ ಮ್ಯಾನೇಜರ್​ಗಳನ್ನು ನೇಮಕ ಮಾಡಿರುವುದರಿಂದ, ಅವರನ್ನು ಹೂಡಿಕೆದಾರರು ಬಳಸಿಕೊಳ್ಳಬಹುದು.ಹೋಟೆಲ್ ಸೌಲಭ್ಯ ಕಲ್ಪಿಸುವುದಕ್ಕೆ ಕೆ.ಎಸ್.ಟಿ.ಡಿ.ಸಿ ಸಂಸ್ಥೆಗೆ 80 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ.ಪ್ರವಾಸಕ್ಕೆ ತೆರಳುವವರು ಪ್ರಮುಖ ಹೆದ್ದಾರಿಗಳ ಆಸುಪಾಸಿನಲ್ಲಿ ಊಟೋಪಚಾರ, ವಿಶ್ರಾಂತಿ ಮಾಡಿಕೊಂಡು ಪ್ರಯಾಣ ಮುಂದುವರಿಸಲು ಅನುಕೂಲವಾಗುವಂತೆ ಪ್ರಸಕ್ತ ವರ್ಷದಲ್ಲಿ ಮೂರು ‘ಮಾದರಿ ರಸ್ತೆಬದಿ ಸೌಲಭ್ಯಗಳ’ (Model Way Side Facilities) ನಿರ್ವಣಕ್ಕೆ ಚಿಂತನೆ. ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಜಲಪಾತ ಹಾಗೂ ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತಗಳು ಪ್ರವಾಸಿ ಆಕರ್ಷಣೆಯ ತಾಣಗಳಾಗಿದ್ದು, ಇಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸುವ ನಿರ್ಧಾರ. ್ಝಾಮನಗರ ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬಲೆಂದು, ರಾಮನಗರ ಬಳಿ ’’Arts and Craft Village’ ಹಾಗೂ ಕಣ್ವ ಜಲಾಶಯ ಪ್ರದೇಶದಲ್ಲಿChildren’s World’ ಯೋಜನೆಯನ್ನು ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸುವ ನಿರ್ಧಾರ.

 

Leave a Reply

Your email address will not be published. Required fields are marked *

Back To Top