ನೆರೆ ವಿಚಾರದಲ್ಲಿ ರಾಜಕೀಯ ಇಲ್ಲ

ಸುಬ್ರಹ್ಮಣ್ಯ: ಜನರು ನೆರೆಯಿಂದ ಬೀದಿಗೆ ಬಂದಿದ್ದಾರೆ.ನೆರೆಯಂತಹ ಗಂಭೀರ ವಿಷಯಕ್ಕೆ ರಾಜಕೀಯ ಬೆರೆಸಲು ಇಷ್ಟಪಡುವುದಿಲ್ಲ.ಜನರ ಸಂಕಷ್ಟಕ್ಕೆ ಪರಿಹಾರ ಸಿಗಬೇಕು.ಅದುವೇ ಪ್ರಧಾನ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಾನುವಾರ ಭೇಟಿ ನೀಡಿ ದೇವರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೃತಿ ವಿಕೋಪದಿಂದ ಪರಿಸ್ಥಿತಿ ಎದುರಿಸುವುದು ಸರ್ವರಿಗೂ ಸವಾಲು.ನೆರೆ ಸಂತ್ರಸ್ತರಿಗೆ ಸಹಕಾರ ನೀಡುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.ದೇವಳದ ಅರ್ಚಕರು ಕುಮಾರಸ್ವಾಮಿ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.ಬಳಿಕ ಕುಮಾರಸ್ವಾಮಿ ಹೊಸಳಿಗಮ್ಮನ ದರ್ಶನ ಪಡೆದರು.

ಬಿಜೆಪಿ ಸರ್ಕಾರದ ಮಂತ್ರಿಮಂಡಲ ರಚನೆ ಸಂದರ್ಭ ಭಿನ್ನಾಭಿಪ್ರಾಯ ಉದ್ಭವಿಸುತ್ತದೋ ಇಲ್ಲವೋ ಎನ್ನುವ ಚರ್ಚೆಗೆ ನಾನು ಮಹತ್ವ ನೀಡುವುದಿಲ್ಲ.ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನರಿಗಾಗಿ ಉತ್ತಮ ಕೆಲಸ ಮಾಡಬೇಕು.ಮುಂದೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸ್ಪರ್ಧೆ ಬಗ್ಗೆ ಹಿರಿಯರು ತೀರ್ಮಾನಿಸುತ್ತಾರೆ.ಸರ್ಕಾರ ವಿಸರ್ಜನೆಯಾಗಿ 24ಕ್ಷೇತ್ರಗಳಿಗೂ ಚುನಾವಣೆ ನಡೆದರೂ ಅಚ್ಚರಿಯಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Leave a Reply

Your email address will not be published. Required fields are marked *