ರಟ್ಟಿಹಳ್ಳಿ: ತಾಲೂಕಿನ ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದಿಂದ ನೀಡಲಾಗುವ ಪ್ರತಿಷ್ಠಿತ ಶ್ರೀ ಮೂಕೇಶ್ವರ ಸೇವಾ ಸಮ್ಮಾನ ಪ್ರಶಸ್ತಿಗೆ ಕುಮಾರಗೌಡ್ರು ರಾಜಶೇಖರಗೌಡ್ರು ಪಾಟೀಲ ಆಯ್ಕೆಯಾಗಿದ್ದಾರೆ.

ಮೇ 27ರಂದು ನಡೆಯಲಿರುವ ಶ್ರೀಗುರು ಮೂಕಪ್ಪ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ತ ಜರುಗಲಿರುವ ಚಿಂತನಾ ಧರ್ಮಸಭೆಯಲ್ಲಿ ಆನಂದಪುರದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬ್ಯಾಡಗಿ ಪಟ್ಟಣದ ಗಣ್ಯ ವರ್ತಕರು, ಸಮಾಜ ಸೇವಕರು, ಮಠದ ಭಕ್ತರು ಆಗಿರುವ ಕುಮಾರಗೌಡ್ರು ಪಾಟೀಲ ಅವರ ಸಮಾಜ ಸೇವೆ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಮಠದ ಆಡಳಿತಾಧಿಕಾರಿ ಡಾ.ಆರ್.ಜಿ. ಚಿಕ್ಕಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.