ಎರಡು ಬೈಕ್​ಗಳ ಮಧ್ಯೆ ಡಿಕ್ಕಿ, ಇಬ್ಬರ ಸಾವು

ಕುಳಗೇರಿ ಕ್ರಾಸ್: ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ಬಳಿ ಬುಧವಾರ ರಾತ್ರಿ 10.40 ಗಂಟೆಗೆ ಎರಡು ಬೈಕ್​ಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸಾವಿಗೀಡಾಗಿದ್ದಾರೆ. ರಾಮದುರ್ಗ ತಾಲೂಕಿನ ಕಲ್ಮಡ ಗ್ರಾಮದ ರಮೇಶ ಸುಭಾಸ ರಾಠೊಡ (34) ಹಾಗೂ ಬೀಳಗಿ ತಾಲೂಕಿನ ಅರಕೇರಿ ಗ್ರಾಮದ ಶಿದ್ದು ಕಿಲಾರಿ (28) ಮೃತಪಟ್ಟವರು. ನಾನು ಮುಂದೆ, ನೀನು ಮುಂದೆ ಎಂದು ಇಬ್ಬರೂ ಬೈಕ್ ಓಡಿಸುತ್ತಿ ದ್ದಾಗ ರಸ್ತೆ ಬದಿಯಲ್ಲಿನ ಗೋವಿನ ಜೋಳ ರಾಶಿಯ ಮಗ್ಗಲಿನ ಕಲ್ಲಿಗೆ ಡಿಕ್ಕಿ ಹೊಡೆದಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.