ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶಂಸೆ
ಮದ್ದೂರು : ಆಪರೇಷನ್ ಸಿಂಧೂರದ ಮೂಲಕ ಭಾರತವು ಪಾಕ್‌ಗೆ ದಿಟ್ಟ ಉತ್ತರವನ್ನು ನೀಡಿದೆ. ಆ ಮೂಲಕ ಧರ್ಮ ಕೇಳಿ ಹತ್ಯೆ ಮಾಡಿ ದವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದು ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪಟ್ಟಣದ ಹಳೇ ಬಸ್ ಸ್ಟಾೃಂಡ್ ಬಳಿಯಿರುವ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ನೀಚ ಬುದ್ಧಿಯ ಪಾಕಿಸ್ತಾನವು ಭಯೋ ತ್ಪಾದಕರನ್ನು ತನ್ನ ದೇಶದಲ್ಲಿ ಬೆಳೆಸಿ ನಮ್ಮ ದೇಶದಲ್ಲಿ ಕುಚೋದ್ಯದ ಕೆಲಸಗಳನ್ನು ಮಾಡಲು ಬಿಡುತ್ತದೆ. ಇದಕ್ಕೆ ನಮ್ಮ ದೇಶದ ಸೈನಿಕರು ಸರಿಯಾದ ಶಾಸ್ತಿ ಮಾಡಿ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಸರಿಯಾದ ಬುದ್ಧಿ ಕಲಿಸಬೇಕು : ಈ ದಿಟ್ಟ ನಿಲುವನ್ನು ತಾಳಿದ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆಮ್ಮೆಯ ಸೈನಿಕರನ್ನು ಪ್ರಶಂಸಿ ಸುತ್ತೇವೆ. ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನವು ಮತ್ತೆ ತಲೆ ಎತ್ತದಂತೆ ಸರಿಯಾದ ಬುದ್ಧಿ ಕಲಿಸಬೇಕು. ಯಾವ ಧರ್ಮವೂ ‘ಇನ್ನೊಂದು ಧರ್ಮವನ್ನು ನಾಶಮಾಡಿ’ ಎಂದು ಹೇಳುವುದಿಲ್ಲ. ಆದರೆ, ನಮ್ಮ ದೇಶದ ಬಗ್ಗೆ ಪಾಕಿಸ್ತಾನವು ಮೊದಲಿನಿಂದಲೂ ಹಗೆಯನ್ನು ಸಾಧಿಸುತ್ತಲೇ ಬರುತ್ತಿದ್ದು, ಮುಂದೆ ಹೀಗಾದರೆ ಆ ದೇಶದ ಅವನತಿಯಾಗುತ್ತದೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ರಾವ್ ಮಾತನಾಡಿ, ಪಟ್ಟಣದ ಪುರಾಣ ಪ್ರಸಿದ್ಧ ದೇವಾಲಯಕ್ಕೆ ಹಲವು ವರ್ಷಗಳ ಇತಿಹಾಸವಿದೆ. ದೇಗುಲಕ್ಕೆ ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿರುವುದು ಸಂತೋಷ ತಂದಿದೆ. ದೇಗುಲಕ್ಕೆ ಧಾರ್ಮಿಕ ಮಹನೀ ಯರು, ಗಣ್ಯ ವ್ಯಕ್ತಿಗಳು ಹಾಗೂ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಶಿ ವಿಶ್ವನಾಥನ ಕೃಪೆಗೆ ಪಾತ್ರ ರಾಗುತ್ತಿದ್ದಾರೆ. ಭಗವಂತ ಭಕ್ತರ ಇಷ್ಟಾರ್ಥಗಳನ್ನು ಈಡೇರಿ ಸುವ ಮೂಲಕ ಭಕ್ತರ ಪಾಲಿನ ಆರಾಧ್ಯದೈವ ವಿಶೇಶ್ವರಸ್ವಾಮಿ ಎನಿಸಿದ್ದಾರೆ ಎಂದರು.
ನಿತ್ಯ ಧಾರ್ಮಿಕ ಕಾರ್ಯ: : ದೇಗುಲದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗದ ಭಕ್ತರು ಆಗಮಿಸುತ್ತಿರುವುದು ವಿಶೇಷ ಎಂದು ರಾಘವೇಂದ್ರ ರಾವ್ ಹೇಳಿದರು. ತಾಲೂಕು ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಸತ್ಯ ನಾರಾಯಣರಾವ್, ಸುಧೀರ್ ಕುಮಾರ್, ಶಂಕರ ಸಭಾದ ಅಧ್ಯಕ್ಷ ಗುರುಸ್ವಾಮಿ, ರಾಯರ ಮಠದ ಅಧ್ಯಕ್ಷ ರಾಮಚಂದ್ರ, ನಿರ್ದೇಶಕರಾದ ಕೋಟೆಬೀದಿ ಮೋಹನ್, ನರಸಿಂಹಪ್ರಸಾದ್, ಶಿಕ್ಷಕಿ ವಿಜಯಲಕ್ಷ್ಮೀ, ಜಯರಾಮಯ್ಯ, ಮಮತಾ ರಾಂಕ ಇತರರು ಹಾಜರಿದ್ದರು.