ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ವಾರ್ಷಿಕ ಜಾತ್ರೋತ್ಸವದ ನಿಮಿತ್ತ ಮಂಗಳವಾರ ರಾತ್ರಿ ಮಯೂರ ವಾಹನೋತ್ಸವ ಜರುಗಿತು. ಶ್ರೀ ದೇವರ ಮಹಾಪೂಜೆಯ ಬಳಿಕ ಉತ್ಸವ ಆರಂಭವಾಯಿತು. ನಂತರ ಶ್ರೀ ದೇವರ ಬಂಡಿ ರಥೋತ್ಸವ ಬಳಿಕ ಪಾಲಕಿ ಉತ್ಸವ ನಡೆಯಿತು. ಚಂದ್ರಮಂಡಲ ರಥದಲ್ಲಿ ಶ್ರೀದೇವರ ಮಯೂರವಾಹನೋತ್ಸವ ನೆರವೇರಿ ಬಳಿಕ ಸವಾರಿ ಮಂಟಪದ ಸವಾರಿ ಕಟ್ಟೆಯಲ್ಲಿ ಪೂಜೆ ನಡೆಯಿತು.
ಭಾನುವಾರ ರಾತ್ರಿ ಶೇಷವಾಹನೋತ್ಸವ, ಸೋಮವಾರ ರಾತ್ರಿ ಅಶ್ವವಾಹನೋತ್ಸವ ನಡೆದಿದೆ. ಸೋಮವಾರ ಶ್ರೀ ಕ್ಷೇತ್ರದಲ್ಲಿ ನಿರಂತರ ಮಳೆಯಾಗಿದ್ದರೂ ಅಡಚಣೆಯಾಗದೆ ಶ್ರೀ ದೇವರ ಉತ್ಸವ ಸಾಂಗವಾಗಿ ನೆರವೇರಿದೆ. ಇದೇ ರೀತಿ ಜಾತ್ರೋತ್ಸವದ ಪ್ರಧಾನ ದಿನಗಳಾದ ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಳೆ ಬಾರದೆ ಉತ್ಸವಗಳು ಸಾಂಗವಾಗಿ ನೆರವೇರಬೇಕೆಂದೂ ಭಕ್ತರು ಪ್ರಾರ್ಥನೆ ಮಾಡಿದ್ದಾರೆ.
ಪಠ್ಯೇತರ ಚಟುವಟಿಕೆಗೆ ಪ್ರೇರಣೆ ಅವಶ್ಯ : ನಂದಳಿಕೆ ಸುಹಾಸ್ ಹೆಗ್ಡೆ ಅಭಿಮತ