ಮುಂದಿನ ಪೀಳಿಗೆಗೆ ಪರಿಸರ ಉಳಿಸಿ – ಶ್ರೀ ಮಹಾದೇವ ದೇವರು ಸಲಹೆ

ಕುಕನೂರು: ಮನುಷ್ಯನ ಜೀವನಕ್ಕೆ ಬೇಕಾದ ಗಾಳಿ, ನೆರಳು, ನೀರು ಸಂರಕ್ಷಿಸಬೇಕು ಎಂದು ಪಟ್ಟಣದ ಅನ್ನದಾನೀಶ್ವರ ಶಾಖಾ ಮಠದ ಶ್ರೀ ಮಹಾದೇವ ದೇವರು ಶ್ಲಾಸಿದರು.

ಪಟ್ಟಣದ ಸರ್ಕಾರಿ ಮಾಧ್ಯಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ವಿಜಯವಾಣಿ, ದಿಗ್ವಿಜಯ ನ್ಯೂಸ್ ಹಸಿರು ಕರ್ನಾಟಕ ಅಭಿಯಾನದಡಿ ಕೊಪ್ಪಳ, ಯಲಬುರ್ಗಾ, ಅರಣ್ಯ ಇಲಾಖೆ ಮುನಿರಾಬಾದ್ ವಲಯ ಶನಿವಾರ ಹಮ್ಮಿಕೊಂಡಿದ್ದ ಸಸಿ ನಡೆವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಪರಿಸರ ಜಾಗೃತಿಗೆ ಮುಂದಾಗಿರುವುದು ಇತತರಿಗೆ ಮಾದರಿ ಎಂದರು.

ತಾಪಂ ಮಾಜಿ ಅಧ್ಯಕ್ಷೆ ಮಹಾದೇವಿ ಕಂಬಳಿ ಮಾತನಾಡಿ, ಹಸಿರಿದ್ದರೆ ಮಾತ್ರ ಉಸಿರು. ಗಿಡಗಳನ್ನು ಪ್ರತಿಯೊಬ್ಬರೂ ಬೆಳೆಸಬೇಕು. ಮಕ್ಕಳು ಪರಿಸರ ಕುರಿತು ಕಾಳಜಿ ವಹಿಸಬೇಕು ಸಲಹೆ ನೀಡಿದರು. ಮುಖಂಡ ಶಿವಕುಮಾರ ನಾಗಲಾಪುರ ಮಾತನಾಡಿದರು. ಶಾಲೆ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿ ನೆಟ್ಟು ಮಕ್ಕಳಿಗೆ ಅವುಗಳ ಪೋಷಣೆ ಜವಾಬ್ದಾರಿ ನೀಡಲಾಯಿತು.

ಮುಖಂಡರಾದ ಅನಿಲ್ ಆಚಾರ್, ಯಲಬುರ್ಗಾ ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ, ಅರಣ್ಯಾಧಿಕಾರಿ ಷರೀಫ್, ಪ್ರಮುಖರಾದ ಕಳಕಪ್ಪ ಕಂಬಳಿ, ಸಿದ್ಲಿಂಗಯ್ಯ ಉಳ್ಳಾಗಡ್ಡಿ ಇತರರಿದ್ದರು.

Leave a Reply

Your email address will not be published. Required fields are marked *