ಹಾಸ್ಟೆಲ್ ಸಮಸ್ಯೆ ಶೀಘ್ರ ಬಗೆಹರಿಸಿ

ಕುಕನೂರು: ಮಂಗಳೂರು ಗ್ರಾಮದ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ವಸತಿ ನಿಲಯದಲ್ಲಿ ಶೌಚಕ್ಕೆ ಬಯಲನ್ನೇ ಅವಲಂಭಿಸಿದ್ದು, ಸಮಸ್ಯೆ ಬಗೆಹರಿಸಲು ನಿಲಯಪಾಲಕಿ ರೇಣುಕಾಗೆ ಮಂಗಳೂರು ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಭಾನುವಾರ ಮನವಿ ಸಲ್ಲಿಸಿದ್ದಾರೆ.

ಸತತ 3 ವರ್ಷದಿಂದ ವಸತಿ ನಿಲಯದಲ್ಲಿ ಶೌಚಕ್ಕೆ ತೊಂದರೆ ಆಗಿದೆ. ಬಯಲಿಗೆ ತೆರಳಿದರೆ ಜನರ ಬೈಗುಳ ಎದುರಿಸಬೇಕು. ಅಲ್ಲದೆ, ವಿಷ ಜಂತುಗಳ ಕಾಟ. ವೈಜ್ಞಾನಿಕವಾಗಿ ಶೌಚಗೃಹಗಳ ಗುಂಡಿ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತ್ತಾಗುತ್ತದೆ. ಈ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಬಗ್ಗೆ ಶೀಘ್ರವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಇಲ್ಲದಿದ್ದರೆ ಹಾಸ್ಟೆಲ್ ಎದುರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ವಾರ್ಡನ್ ರೇಣುಕಾ, ಹಾಸ್ಟಲ್‌ನ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ವೇದಿಕೆ ಅಧ್ಯಕ್ಷ ಮಂಗಳೇಶ ಕುಂಬಾರ, ಉಪಾಧ್ಯಕ್ಷ ಕಿರಣಕುಮಾರ ಪೂಜಾರ, ಪ್ರಮುಖರಾದ ವೀರೇಂದ್ರ ಈಳಿಗೇರ, ಕಳಕೇಶ ಪಟ್ಟಣಶೆಟ್ಟಿ, ಕಾಸೀಂಸಾಬ್ ಬೆಣಕಲ್, ಮಂಜುನಾಥ ತಳವಾರ, ಮುತ್ತಣ್ಣ ನಾಯಕ, ಪ್ರಭುರಾಜ ಇಲಕಲ್, ಮಂಜುನಾಥ ಶಿಡ್ನಳ್ಳಿ, ಶಶಿಕುಮಾರ ಪೂಜಾರ ಇತರರಿದ್ದರು.

Leave a Reply

Your email address will not be published. Required fields are marked *