ಚುಟುಕು ಸಾಹಿತ್ಯ ಜನಕ್ಕೆ ಹತ್ತಿರ – ಹಿರಿಯ ಸಾಹಿತಿ ಡಾ.ಕೆ.ಬಿ ಬ್ಯಾಳಿ ಹೇಳಿಕೆ

ಕುಕನೂರು: ಚುಟುಕು ಜನಕ್ಕೆ ಹತ್ತಿರವಾದ ಸಾಹಿತ್ಯ ಎಂದು ಹಿರಿಯ ಸಾಹಿತಿ ಡಾ.ಕೆ.ಬಿ ಬ್ಯಾಳಿ ಹೇಳಿದರು. ಪಟ್ಟಣದ ಶಿಕ್ಷಕ ಹಾಗೂ ಸಾಹಿತಿ ಶಾಂತವೀರ ಬನ್ನಿಕೊಪ್ಪ ಅವರು ಕೊಪ್ಪಳ ಜಿಲ್ಲಾ 10ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆದ ಹಿನ್ನಲೆಯಲ್ಲಿ ಅವರ ಮನೆಯಲ್ಲಿ ಜಿಲ್ಲಾ ಚುಸಾಪ ಹಮ್ಮಿಕೊಂಡಿದ್ದ ಅಧಿಕೃತ ಆಹ್ವಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವಿಷಯ ಹಾಗೂ ವಸ್ತು ಚಿಕ್ಕದಾದರೂ ಚುಟುಕು ರಚಿಸಿ ಅದರ ವರ್ಣನೆ ಮಾಡಬಹುದು. ಸಾಹಿತ್ಯದ ಮೂಲಕ ಚಟಾಕಿ ಹಾರಿಸಬೇಕಾದರೆ ಚುಟುಕು ರಚಿಸಬೇಕು. ಚುಟುಕು ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಅವಿರತ ಜರುಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.

ಚುಸಾಪ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಂಡಗಿ ಮಾತನಾಡಿ, ಜಿಲ್ಲೆಯ ಎಷ್ಟೋ ಸಾಹಿತಿಗಳು ಎಲೆ ಮರೆ ಕಾಯಿಯಂತೆ ಬದುಕುತ್ತಿದ್ದಾರೆ. ಅಪಾರ ಸಾಹಿತ್ಯ ಜ್ಞಾನ ಹೊಂದಿದ್ದರೂ ಸಮಾಜದ ಮುನ್ನೆಲೆಯಲ್ಲಿ ಕಾಣುತ್ತಿಲ್ಲ. ಆ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿಯೊಬ್ಬ ಸಾಹಿತಿಯನ್ನು ಗುರುತಿಸುವ ಹಾಗೂ ಅಭಿನಂದಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ. ಸಾಹಿತ್ಯ ಹಾಗೂ ಬರಹಗಳಿಗೆ ಸದಾ ಕಾಲ ಮನ್ನಣೆ ಉಂಟು ಎಂದರು. ಶಿಕ್ಷಕ ಶಾಂತವೀರ ಬನ್ನಿಕೊಪ್ಪ ಹಾಗೂ ಕುಟುಂಬದವರನ್ನು ಸನ್ಮಾನಿಸುವ ಮೂಲಕ 10ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪರಿಸರವಾದಿ ಜಿ.ಎನ್ ಹಳ್ಳಿ, ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ, ನಿವೃತ್ತ ಶಿಕ್ಷಕ ಕಲ್ಲಪ್ಪ ಬನ್ನಿಕೊಪ್ಪ, ಶಿಕ್ಷಕರಾದ ಮಹಾಂತೇಶಗೌಡ, ಶಿವಪುತ್ರಪ್ಪ, ಮಂಜುನಾಥ, ಕಾನಿಪ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ, ಪತ್ರಕರ್ತರಾದ ಅಲ್ಲಾವುದ್ದೀನ್ ಎಮ್ಮಿ, ಮಂಜುನಾಥ ಅಂಗಡಿ, ಪ್ರಮುಖರಾದ ಹೇಮರೆಡ್ಡಿ ಕೋಳೂರು, ಶರಣಪ್ಪ ಆದಾಪೂರ, ಉಮೇಶ ಕಂಬಳಿ ಇತರರಿದ್ದರು.

Leave a Reply

Your email address will not be published. Required fields are marked *