ಕುಕನೂರು: ಪಟ್ಟಣದ ಶ್ರೀಮಹಾಮಾಯಿ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ.26 ರಿಂದ ಅ.5 ವರೆಗೆ ನಡೆಯಲಿದೆ.
ಶರನ್ನವರಾತ್ರಿ ನಿಮಿತ್ತ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸೆ.26ರಂದು ಗರುಡಪಟ, ಧ್ವಜಾರೋಹಣ, ಘಟಸ್ಥಾಪನಾ, ಗಣಹೋಮ, ಪುಷ್ಪಯಾನ, ಸೆ.27ರಂದು ಮಯೂರ ವಾಹನ ಪೂಜಾ ಅಲಂಕಾರ, ಸೆ.28ರಂದು ಹಂಸವಾಹನ ಅಲಂಕಾರ, 29ರಂದು ಶೇಷವಾಹನ ಅಲಂಕಾರ, 30ರಂದು ಲಲಿತಾ ಪಂಚಮಿ, ಶ್ರೀಲಕ್ಷ್ಮೀವೆಂಕಟೇಶ್ವರ ಕಲ್ಯಾಣೋತ್ಸವ ಗರುಡವಾಹನ ಹಾಗೂ ಸಿಂಹವಾಹನ ಅಲಂಕಾರ, ಅ.1ರಂದು ವೃಷಭ ವಾಹನ ಅಲಂಕಾರ, ಅ.2 ರಂದು ಚಂಡಿಹೋಮ, ಪುಸ್ತಕೇಷಿ ಸರಸ್ವತಿ ಆಹ್ವಾನ, ಅ.3ರಂದು ದುರ್ಗಾಷ್ಟಮಿ, ಸರಸ್ವತಿ ಪೂಜಾ, ಅ.4ರಂದು ಶ್ರೀಮಹಾಮಾಯಾ ರಥೋತ್ಸವ ಆಯುಧ ಪೂಜಾ ಸರಸ್ವತಿ ವಿಸರ್ಜನೆ, ಅ.5 ರಂದು ಶ್ರೀಲಕ್ಷ್ಮೀ ವೆಂಕಟೇಶ್ವರ ರಥೋತ್ಸವ, ಬನ್ನಿ ಮುಡಿವ ಕಾರ್ಯಕ್ರಮ ನಡೆಯಲಿದೆ ಎಂದು ಧರ್ಮಾಧಿಕಾರಿಗಳಾದ ವಲ್ಲಭರಾವ್ ದೇಸಾಯಿ, ಬಂಡೆರಾಯಗೌಡ ದೇಸಾಯಿ ತಿಳಿಸಿದರು.