ಕುಕನೂರು: ಸಂತ ಶ್ರೀ ಸೇವಾಲಾಲ್ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉದ್ಯಮಿ ಅನಿಲ್ ಆಚಾರ್ ಹೇಳಿದರು. ಕಕ್ಕಿಹಳ್ಳಿ ತಾಂಡಾದಲ್ಲಿ ಸದ್ಗುರು ಶ್ರೀ ಸೇವಾಲಾಲ್ ಉತ್ಸವ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಸಂತ ಸೇವಾಲಾಲ್, ಸಮಾಜಕ್ಕಾಗಿ ಜೀವನವನ್ನೇ ಅರ್ಪಿಸಿಕೊಂಡಿದ್ದರು. ಅವರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತೀರುವುದು ಶ್ಲಾಘನೀಯ ಎಂದರು. ಸಂತ ಸೇವಾಲಾಲ್ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಹಿಳೆಯರು ಗೋಧಿ ಸಸಿಯ ಬುಟ್ಟಿ ಹೊತ್ತುಕೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದುರ್ಗಾದೇವಿ ದೇವಸ್ಥಾನ ತಲುಪಿದರು. ಗೋರ್ ಸೇನಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಮುಖಂಡರಾದ ಶಿವಕುಮಾರ ನಾಗಲಾಪುರಮಠ, ಮೇಘರಾಜ ಬಳಗೇರಿ, ಬಸವಂತಪ್ಪ ನಾಯಕ, ಗ್ರಾಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ, ಹೋಬಣ್ಣ ಚವ್ಹಾಣ್, ಕುಮಾರ ಬಳಗೇರಿ, ಯಲ್ಲಪ್ಪ ಕಾರಬಾರಿ, ವಿಶ್ವನಾಥ ಕುಣಿಕೇರಿ, ಶರಣಪ್ಪ ಚವ್ಹಾಣ್, ಕಳಕೇಶ ಲಮಾಣಿ ಇತರರಿದ್ದರು.