ಸಿನಿಮಾ

ಮತಗಟ್ಟೆಗೆ ಸೌಲಭ್ಯ ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸಿ

ಕುಕನೂರು: ಮತಗಟ್ಟೆಗೆ ಮೂಲ ಸೌಲಭ್ಯ ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸಿ ಎಂದು ತಾಪಂ ಇಒ ರಾಮಣ್ಣ ದೊಡ್ಮನಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಬನ್ನಿಕೊಪ್ಪ ಗ್ರಾಪಂ ವ್ಯಾಪ್ತಿಯ ನಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ವೀಕ್ಷಣೆ ಮಾಡಿ ಗುರುವಾರ ಮಾತನಾಡಿದರು.

ಇದನ್ನೂ ಓದಿ: ಕಳೆದ‌ ಮೂರೂವರೆ ವರ್ಷಗಳಿಂದ ಅಭಿವೃದ್ಧಿ ಆಗಿಲ್ಲ: ಪ್ರಿಯಾಂಕಾ ಗಾಂಧಿ

ಬಿಸಿಲು ಹೆಚ್ಚಿರುವುದರಿಂದ ಮತದಾನ ದಿನದಂದು ಮತದಾರರಿಗೆ ಶುದ್ಧ ಕುಡಿವ ನೀರು, ನೆರಳಿನ ವ್ಯವಸ್ಥೆ ಮಾಡಬೇಕು. ಅಂಗವಿಕಲರು, ಹಿರಿಯ ನಾಗರಿಕರು ಮತಗಟ್ಟೆಗೆ ಬರಲು ವೀಲ್‌ಚೇರ್ ಸೌಕರ್ಯ ಒದಗಿಸಬೇಕು ಎಂದು ತಿಳಿಸಿದರು.

ನಂತರ ಸಾರ್ವಜನಿಕ ಶೌಚಗೃಹ ಕಾಮಗಾರಿ ಪ್ರಾರಂಭಿಸಲು ತಾಂತ್ರಿಕ ಸಹಾಯಕರೊಂದಿಗೆ ಸ್ಥಳ ಪರಿಶೀಲನೆ ಮಾಡಿದರು. ಪಿಡಿಒ ಸುರೇಶ್ ರಾಠೋಡ್, ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ತಾಂತ್ರಿಕ ಸಹಾಯಕ ಶರಣಯ್ಯ ಇತರರಿದ್ದರು.

Latest Posts

ಲೈಫ್‌ಸ್ಟೈಲ್