ಕುಕನೂರು: ಜಾಗತಿಕ ತಾಪಮಾನ ತಡೆಗೆ ಸಸ್ಯ ಸಂಪತ್ತು ಬೆಳೆಸುವುದು ಅತಿ ಮುಖ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ಡಾ.ಶಕುಂತಲಾ ಅಂಗಡಿ ಹೇಳಿದರು. ತಾಲೂಕಿನ ಬೆಣಕಲ್ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಸಸಿ ನೆಟ್ಟು ಗುರುವಾರ ಮಾತನಾಡಿದರು.
ಇದನ್ನೂ ಓದಿ: ಪ್ಲಾಸ್ಟಿಕ್ ಕಪ್ ಬಳಸಿದರೆ ಪರವಾನಗಿ ರದ್ದು
ತಾಪಮಾನ ಏರಿಕೆ, ಮಾಲಿನ್ಯದಂತ ಸಮಸ್ಯೆಗಳಿಗೆ ಪರಿಸರ ಹಾನಿ ಕಾರಣ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಭೂಮಿ ಮೇಲ್ಮೈ ಅಲ್ಲದೇ ಸಮುದ್ರ ಜೀವಿಗಳೂ ತೊಂದರೆಗೆ ಸಿಲುಕುವಂತಾಗಿದೆ. ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿವೆ.
ಇದರಿಂದ ಹೊರ ಬರಬೇಕು. ಮುಂದಿನ ಪೀಳಿಗೆಗೆ ಪರಿಸರ ಉಳಿಸಲು ಎಲ್ಲರೂ ಗಿಡ ನೆಟ್ಟು ಪೋಷಿಸಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮವ ನಡವಲಮನಿ, ಪ್ರಮುಖರಾದ ಸಂತೋಷ್ ಲಕ್ಷ್ಮೇಶ್ವರ, ಸೋಮರಡ್ಡಿ ಗಡಾದ, ಶಂಭುಲಿಂಗೇಶ, ಮಣಿಕಂಠ, ಬಸವಣ್ಣವ್ವ ಬಳೆಗಾರ, ಮಂಜುಳಾ, ಸುನಿತಾ ಪತ್ತಾರ್ ಇತರರಿದ್ದರು.
ವಿದ್ಯಾಶ್ರೀ ಶಿಕ್ಷಣ ಸಂಸ್ಥೆ
ಇಲ್ಲಿಯೂ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಜಸ್ವಂತ್ ರಾಜ್ ಜೈನ್ ಮಾತನಾಡಿದರು. ಮುಖ್ಯಶಿಕ್ಷಕ ಮಧುಸೂದನ ದೇಸಾಯಿ, ಶಿಕ್ಷಕರಾದ ರಾಜಶೇಖರ್ ಹೊಸಮನಿ, ಶ್ರೀಕೃಷ್ಣ ವಿದ್ಯಾಪತಿ, ಪ್ರಭು ಬುಕಟ್ಗಾರ್, ಅನ್ವರ್ ಪಾಷಾ, ರಾಘವೇಂದ್ರ ದೇಶಪಾಂಡೆ, ಪವನ್ ಕುಲಕರ್ಣಿ ಇತರರಿದ್ದರು.