ಕುಕನೂರು: ತಾಲೂಕಿನ ಮಂಗಳೂರಿನಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಕುಕನೂರು ಘಟಕದಿಂದ ಬಸ್ ಆರಂಭಿಸಿದ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿದರು.
ಗ್ರಾಮಸ್ಥರ ಹಲವು ದಿನಗಳ ಬೇಡಿಕೆಯನ್ನು ರಸ್ತೆ ಸಾರಿಗೆಯ ಜಿಲ್ಲಾಧಿಕಾರಿ ಬೇಡಿಕೆ ಈಡೇರಿಸಿದ್ದಾರೆ. ಮಂಗಳೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಸವದತ್ತಿ ಯಲ್ಲಮ್ಮ ದರ್ಶನ ಪಡೆಯಲು ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಹೇಳಿದರು.
ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರ, ಪ್ರಮುಖರಾದ ಕೊಟ್ರಪ್ಪ ತೋಟದ, ರೇವಣಸಿದ್ದಯ್ಯ ಅರಳಲೆಹಿರೇಮಠ, ಈರಣ್ಣ ಎಮ್ಮಿ, ಸುರೇಶ ಮ್ಯಾಗಳೇಶಿ, ಶರಣಪ್ಪ ಎಮ್ಮಿ, ಯಂಕಣ್ಣ ಉಪ್ಪಾರ, ಮಂಗಳೇಶ ಬಂಡಿ, ರುದ್ರಗೌಡ್ರ ಪಾಟೀಲ, ಮಂಜುನಾಥ ಬಂಡಿ, ಸುಭಾಸ್ ಮದಕಟ್ಟಿ ರವೀಂದ್ರ ತೋಟದ, ರವಿ ಆಗೋಲಿ ಇತರರಿದ್ದರು.