ಕುಕನೂರು: ತಾಲೂಕಿನ ಮಂಗಳೂರು ಆರೋಗ್ಯ ಕೇಂದ್ರದಲ್ಲಿ ವಿಶ್ವ ರೇಬಿಸ್ ದಿನ ಹಾಗೂ ಸಪ್ತಾಹವನ್ನು ಬುಧವಾರ ಆಚರಿಸಿದರು.
.ಸಿ.ಎಂ.ಹಿರೇಮಠ ಮಾತನಾಡಿ, ನಾಯಿ, ಕರಡಿ, ಬೆಕ್ಕು, ತೋಳ, ಇನ್ನಿತರ ಪ್ರಾಣಿಗಳು ಕಡಿದಾಗ ತಪ್ಪದೇ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಮತ್ತು ಲಸಿಕೆ ಪಡೆಯಬೇಕು. ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲರಿಗೂ ಉಚಿತ ಮತ್ತು ವಾರದ 24 ಗಂಟೆ ಲಸಿಕೆ ಸೇವೆ ಲಭ್ಯ ಇದೆ.\
ಇದರ ಉಪಯೋಗ ಪಡೆಯುವ ಮೂಲಕ ರೇಬಿಸ್ ನಿಂದಾಗುವ ಸಾವುಗಳನ್ನು ತಡೆಗಟ್ಟಬೇಕು. ಬಾಯಲ್ಲಿ ಜೊಲ್ಲು ಸುರಿಯುವಿಕೆ, ಸಿಟ್ಟಾಗುವುದು, ಬೆಳಕು ಮತ್ತು ನೀರು ಕಂಡರೆ ಭಯ ಪಡುವುದು. ಕತ್ತಲೆ ಕಡೆ ಹೋಗುವುದು. ಜ್ವರ ಸುಸ್ತು ಆಗುವದು ಕೊನೆ ಅವಧಿಯಲ್ಲಿ ನಾಯಿಯ ಹಾಗೆ ಬೊಗಳುವುದು ರೇಬಿಸ್ ಲಕ್ಷಣಗಳಾಗಿವೆ. ಗಾಯದ ತೀವ್ರತೆ ಆಧಾರದ ಮೇಲೆ ಕೆಟಗರಿ ಮಾಡಲಾಗುತ್ತದೆ ವಿವಿಧ ಕೆಟಗರಿಯಲ್ಲಿ ಚಿಕಿತ್ಸೆ ನೀಡಲಾಗುವದು ಎಂದರು.