ಕುಕನೂರು: ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಿಂದ ಹಾಲುಮತ ಸಾಂಸ್ಕೃತಿಕ ವೈಭವ-2025 ಕಾರ್ಯಕ್ರಮವನ್ನು ಜ.12, 13, 14 ರ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಎಂದು ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾಲುಮತ ಸಾಂಸ್ಕೃತಿಕ ವೈಭವದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಂಗಳವಾರ ಮಾತನಾಡಿದರು. ಮೂರು ದಿನಗಳ ಕಾಲ ಸಮಾವೇಶ, ಚಿಂತನಮಂತನ, ಧಾರ್ಮಿಕ ಸಭೆ ಸೇರಿ ಇತರ ಕಾರ್ಯಕ್ರಮಗಳು ಜರುಗಲಿವೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದರು.
ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ತಿಂಥಣಿ ಬ್ರಿಜ್ ಪೀಠದ ತಾಲೂಕು ಸಮಿತಿಯ ತಾಲೂಕು ಅಧ್ಯಕ್ಷ ಗಗನ್ ನೋಟಗಾರ, ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಂಜುನಾಥ ಕಡೆಮನಿ, ಪ್ರಮುಖರಾದ ಹನುಮಂತಗೌಡ ಚಂಡೂರ, ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ರಹಿಮಾನ್‌ಸಾಬ್ ಮಕಪ್ಪನವರ್, ಲಕ್ಷ್ಮಣ್ ಬೆದವಟ್ಟಿ, ಬಸವರಾಜ ಅಡವಿ, ಮಲ್ಲಪ್ಪ ಚಳ್ಳಮರದ, ಮಹೇಶ್ ಕವಲೂರ್, ಶಿವಣ್ಣ ರಾಜೂರು, ಮಂಜುನಾಥ್ ಯಡೆಯಾಪುರ ಇತರರಿದ್ದರು.