More

    ಕಡಲೆಗೆ ಬೆಂಬಲ ಬೆಲೆ ನೀಡಲು ಒತ್ತಾಯಿಸಿ ತಹಸೀಲ್ದಾರ್ ಕಿರಣಕುಮಾರ್ ಕುಲಕರ್ಣಿರಿಗೆ ರೈತರ ಮನವಿ

    ಕುಕನೂರು: ಕಡಲೆ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಂದಪ್ಪ ಕೋಳೂರು ತಹಸೀಲ್ದಾರ್ ಕಿರಣಕುಮಾರ್ ಕುಲಕರ್ಣಿರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ರೈತರು, ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಕಡಲೆ ಬೆಳೆ ಮಾರಾಟ ಮಾಡುತ್ತಿದ್ದಾರೆ. ಬೆಳೆಗೆ ವ್ಯಯಿಸಿದ ಹಣವೂ ಹಿಂತುರುಗುತ್ತಿಲ್ಲ. ಹೀಗಿರುವಾಗ ಜಿಲ್ಲೆಯಲ್ಲಿ 78 ಸಾವಿರ ಹೆಕ್ಟೆರ್ ಕಡಲೆ ಬೆಳೆ ರೈತರು ಬೆಳೆದಿದ್ದು, 5 ಸಾವಿರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಿ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು. ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಮನವಿ ಸಲ್ಲಿಸಿದರು.

    ವಕೀಲ ರಮೇಶ ಗಜಕೋಶ, ಪತ್ರಕರ್ತ ಬಸವರಾಜ ಕೊಡ್ಲಿ, ರೈತರಾದ ದೇವರೆಡ್ಡಿ ನಾಗರೆಡ್ಡಿ, ಸುರೇಶ ಚಟ್ಟಿ, ಮಲ್ಲಿಕಾರ್ಜುನ, ಉಮೇಶಪ್ಪ, ಬಸವರಾಜ ಪುಣ್ಯದ ಇತರರಿದ್ದರು.

    ಸ್ಪಂದನೆ: ರೈತರ ಸಂಕಷ್ಟಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಸ್ಪಂದಿಸಿದ್ದು, ಕಡಲೆಗೆ ಯಾಕಿಲ್ಲ ಬೆಂಬಲ ಬೆಲೆ? ಎಂಬ ಶೀರ್ಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದ್ದು,ಇಲ್ಲಿ ಸ್ಮರಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts