ಬತ್ತಿದ ಕೂಡ್ಲಿ ದೇವಳ ಸರೋವರ

ಬ್ರಹ್ಮಾವರ: ಮೋಕ್ಷ ಸದ್ಗತಿಯ ಕ್ಷೇತ್ರ ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದ ತೀರ್ಥ ಸರೋವರ ಈ ವರ್ಷ ಬತ್ತಿದೆ. ಪ್ರಾಚೀನ ಪರಂಪರೆ ಹೊಂದಿದ ಈ ಸರೋವರದಲ್ಲಿ ಎಲ್ಲ ಋತುವಿನಲ್ಲೂ ನೀರು ಲಭ್ಯವಾಗುತ್ತಿತ್ತು.

ಕೆಲ ಸಮಯದಿಂದ ಇಲ್ಲಿ ನೀರಿಲ್ಲದೆ ಅಪರ ಕರ್ಮಾಂಗ ಇಲ್ಲ. ದೂರದ ಊರಿಂದ ಬಂದವರ ಒತ್ತಾಯಕ್ಕೆ ನೀರಿನ ಟ್ಯಾಂಕ್ ಒಂದನ್ನು ನಿರ್ಮಿಸಿ ಅಲ್ಲಿ ಮುಳುಗೇಳುವ ಕಾರ್ಯ ಮಾಡಲಾಗುತ್ತಿದೆ. ಸರೋವರ ಮೆಟ್ಟಿಲುಗಳು ದುರಸ್ತಿ ಕಾಣದೆ ಕುಸಿದಿವೆ. ಸುತ್ತಲೂ ಕಟ್ಟಲಾದ ಕಲ್ಲುಗಳು ಜಾರಿದ್ದು, ಸರೋವರದ ಅವಶೇಷ ಕೂಡ ಇಲ್ಲದಂತಾಗಿದೆ. ಸರೋವರ ತೀರ್ಥಸ್ನಾನಕ್ಕಷ್ಟೇ ಅಲ್ಲ, ಹೆಚ್ಚುವರಿ ನೀರು ಸನಿಹದ ಕೃಷಿ ಭೂಮಿಗೂ ಬಳಕೆಯಾಗುತ್ತಿತ್ತು.

ದೇವಸ್ಥಾನದ ವತಿಯಿಂದ ಈ ಸರೋವರವನ್ನು ನವೀಕರಿಸುವ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೆ ಸ್ಪಂದನೆ ದೊರಕಿಲ್ಲ. ಸಾರ್ವಜನಿಕರು, ಸಂಘ ಸಂಸ್ಥೆ ನೆರವಿನಿಂದ ಸರೋವರ ನವೀಕರಣ ಮಾಡುವ ಯೋಚನೆ ಇದೆ.
– ಕೆ.ಕೆ. ನಾಯ್ಕ, ಅಧ್ಯಕ್ಷ, ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನ

Leave a Reply

Your email address will not be published. Required fields are marked *