ಕೆಎಸ್‌ಒಯುನತ್ತ ವಿದ್ಯಾರ್ಥಿಗಳು

«ದ.ಕ. 203, ಉಡುಪಿ 219 ದಾಖಲಾತಿ * ಒಟ್ಟು ಅಡ್ಮಿಷನ್‌ನಲ್ಲಿ ಇಳಿಮುಖ  *ಮುಂದಿನ ವರ್ಷ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ»

ಭರತ್ ಶೆಟ್ಟಿಗಾರ್ ಮಂಗಳೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಯುಜಿಸಿ ಮಾನ್ಯತೆ ಮತ್ತೆ ಸಿಗುವ ಮೂಲಕ ಮೂರು ವರ್ಷಗಳಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಅದರಂತೆ 2018-19ನೇ ಸಾಲಿನ ವಿವಿಧ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದಿದೆ. ದ.ಕ. ಉಡುಪಿ ಜಿಲ್ಲೆಗಳಲ್ಲಿಯೂ ವಿದ್ಯಾರ್ಥಿಗಳು ಕೆಎಸ್‌ಒಯುನತ್ತ ಮುಖ ಮಾಡಿದ್ದಾರೆ.
ಆದರೆ ರಾಜ್ಯದ ವಿವಿಧೆಡೆ ಈ ಬಾರಿ ಮುಕ್ತ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕರಾವಳಿಯಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 203 ಹಾಗೂ ಉಡುಪಿಯಲ್ಲಿ 219 ಮಂದಿ ವಿವಿಧ ಕೋರ್ಸ್‌ಗಳಿಗೆ ಅಡ್ಮಿಷನ್ ಮಾಡಿಸಿಕೊಂಡಿದ್ದಾರೆ. ಯುಜಿಸಿ ಗೊಂದಲವುಂಟಾಗುವುದಕ್ಕೂ ಮುನ್ನ ಅಂದರೆ 2012-13ರ ವರೆಗೆ ಜಿಲ್ಲೆಯಲ್ಲಿ ಯುಜಿ/ಪಿಜಿ ಕೋರ್ಸ್‌ಗಳಿಗೆ ಮೊದಲ ವರ್ಷಕ್ಕೆ ಎರಡರಿಂದ ಮೂರು ಸಾವಿರ ಮಂದಿ, ಉಡುಪಿಯಲ್ಲಿ ಸುಮಾರು ಒಂದು ಸಾವಿರ ಮಂದಿ ಅರ್ಜಿ ಸಲ್ಲಿಸುತ್ತಿದ್ದರು.
ಯುಜಿಸಿ ಮಾನ್ಯತೆ ಸಿಗುವಾಗ ತಡವಾಗಿದ್ದರಿಂದ ಈ ಬಾರಿ ನೋಟಿಫಿಕೇಶನ್‌ಗೆ ಕೇವಲ ಒಂದೂವರೆ ತಿಂಗಳು ಅವಕಾಶ ಸಿಕ್ಕಿದ್ದು, ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಕೆಎಸ್‌ಒಯು ಪ್ರಾದೇಶಿಕ ಕಚೇರಿಯ ಅಧಿಕಾರಿಗಳು.

ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ
ದಕ್ಷಿಣ ಕನ್ನಡ: ಬಿಎ-58, ಬಿಕಾಂ-7, ಬಿ.ಲಿಬ್ ಸೈನ್ಸ್-6, ಎಂಎ (ಕನ್ನಡ)-19, ಎಂಎ (ಇಂಗ್ಲಿಷ್)-27,ಎಂಎ (ಹಿಂದಿ)-4, ಎಂಎ(ಇತಿಹಾಸ)-14, ಎಂಎ(ಅರ್ಥಶಾಸ್ತ್ರ)-9, ಎಂಎ (ರಾಜ್ಯಶಾಸ್ತ್ರ)-6, ಎಂಎ (ಪಬ್ಲಿಕ್ ಎಡ್ಮಿನಿಸ್ಟ್ರೇಷನ್)-4, ಎಂಎ(ಸಮಾಜಶಾಸ್ತ್ರ)-12, ಎಂಎ ಸಂಸ್ಕೃತ-3, ಎಂಸಿಜೆ -3, ಎಂಕಾಂ-15, ಎಂಎಸ್ಸಿ (ಬಯೋಟೆಕ್ನಾಲಜಿ)-2, ಎಂಎಸ್ಸಿ (ರಸಾಯನಶಾಸ್ತ್ರ)-2, ಕ್ಲಿನಿಕಲ್ ನ್ಯೂಟ್ರೀಶನ್ ಆ್ಯಂಡ್ ಡಯಟ್ರೀಸ್-3, ಕಂಪ್ಯೂಟರ್ ಸೈನ್ಸ್- 2, ಜಿಯಾಗ್ರಫಿ-2, ಮ್ಯಾಥಮೆಟಿಕ್ಸ್ -4, ಫಿಸಿಕ್ಸ್- 2, ಸೈಕಾಲಜಿ- 1.
ಉಡುಪಿ: ಬಿಎ-63, ಬಿಕಾಂ-19, ಬಿ.ಲಿಬ್ ಸೈನ್ಸ್-7, ಎಂಎ(ಕನ್ನಡ)-15, ಎಂಎ (ಇಂಗ್ಲಿಷ್)-17, ಎಂಎ (ಹಿಂದಿ)-4, ಎಂಎ (ಇತಿಹಾಸ)-11, ಎಂಎ (ಅರ್ಥಶಾಸ್ತ್ರ)-9, ಎಂಎ (ರಾಜ್ಯಶಾಸ್ತ್ರ)-5, ಎಂಎ(ಸಮಾಜಶಾಸ್ತ್ರ)-15, ಎಂಸಿಜೆ-5, ಎಂಎ (ಸಂಸ್ಕೃತ)-2, ಎಂಕಾಂ-35, ಎಂ.ಲಿಬ್ ಸೈನ್ಸ್ -1, ಎಂಎಸ್ಸಿ (ಮ್ಯಾಥ್ಸ್)-3, ಎಂಎಸ್ಸಿ (ಎನ್ವಿರಾನ್‌ಮೆಂಟಲ್ ಸೈನ್ಸ್)-2, ಎಂಎಸ್ಸಿ (ಫಿಸಿಕ್ಸ್)-1, ಕ್ಲಿನಿಕಲ್ ನ್ಯೂಟ್ರೀಶನ್ ಆ್ಯಂಡ್ ಡಯಟ್ರೀಸ್-3, ಕಂಪ್ಯೂಟರ್ ಸೈನ್ಸ್ 1, ಸೈಕಾಲಜಿ-1.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಬಿಎಡ್, ಎಂಬಿಎ, ಎಂಎ ಉರ್ದು, ಎಂಎಸ್ಸಿ ಜೀವರಸಾಯನ ಶಾಸ್ತ್ರ, ಜೈವಿಕ ತಂತ್ರಜ್ಞಾನ, ಮಾಹಿತಿ ವಿಜ್ಞಾನ, ಎಂ.ಲಿಬ್.ಸೈನ್ಸ್ ಕೋರ್ಸ್‌ಗಳಿಗೆ ಅರ್ಜಿಸಲ್ಲಿಸಲು ಇನ್ನೂ ಅವಕಾಶವಿದೆ. ಡಿಸೆಂಬರ್ 31ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಸಲ್ಲಿಸಿದವರು ಜ.10ರೊಳಗೆ ಅಸೈನ್ಮೆಂಟ್‌ಗಳನ್ನು ಸಲ್ಲಿಸಬೇಕು. ಎಂಎ/ಎಂಕಾಂನವರು ಮೈಸೂರಿನ ಕೆಎಸ್‌ಒಯು ಎಕ್ಸಾಂ ಬ್ರಾೃಂಚ್‌ಗೆ ಕಳುಹಿಸಬೇಕು. ಬಿಎ/ಬಿಕಾಂ ಅಭ್ಯರ್ಥಿಗಳು ತಮ್ಮ ಸ್ಟಡಿ ಸೆಂಟರ್‌ನಲ್ಲಿ ನಿಯೋಜಿಸಲಾಗಿರುವ ಅಧಿಕಾರಿಗಳಿಗೆ ಸಲ್ಲಿಸಬೇಕು.

 

ಕೆಎಸ್‌ಒಯು ಮಾನ್ಯತೆ ವಿಚಾರವಾಗಿ ಹಿಂದೆ ಉಂಟಾಗಿದ್ದ ಗೊಂದಲದಿಂದ ಹಿಂದಿನ 2-3 ವರ್ಷ ವಿದ್ಯಾರ್ಥಿಗಳ ದಾಖಲಾತಿ ನಡೆದಿರಲಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರಬಹುದು. ಈಗ ಗೊಂದಲ ನಿವಾರಣೆಯಾಗಿರುವುದರಿಂದ ವಿದ್ಯಾರ್ಥಿಗಳು ಮತ್ತೆ ಕೆಎಸ್‌ಒಯುನತ್ತ ಬರುತ್ತಿದ್ದಾರೆ. ದೂರಶಿಕ್ಷಣದ ಮೂಲಕ ಪದವಿ-ಸ್ನಾತಕೋತ್ತರ ಪದವಿ ಪಡೆಯಲು ಇರುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು.
ಡಾ.ಮಹಾಲಿಂಗ, ಉಡುಪಿ ಪ್ರಾದೇಶಿಕ ನಿರ್ದೇಶಕ

One Reply to “ಕೆಎಸ್‌ಒಯುನತ್ತ ವಿದ್ಯಾರ್ಥಿಗಳು”

Comments are closed.