More

    ಸಕಾರಾತ್ಮಕ ಆಲೋಚನೆ ಬಲಪಡಿಸುವ ಕ್ಷೇಪನಾ ಮುದ್ರೆ

    ಸಕಾರಾತ್ಮಕ ಆಲೋಚನೆ ಬಲಪಡಿಸುವ ಕ್ಷೇಪನಾ ಮುದ್ರೆಕ್ಷೇಪನ ಮುದ್ರೆಯು ಹತಾಶೆ ಅಥವಾ ಒತ್ತಡದ ಸಮಯದಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ. ಮಾನಸಿಕ ಕಿರಿಕಿರಿಯನ್ನು ಶಮನಗೊಳಿಸಲು, ಆಶಾವಾದ ಅಥವಾ ಸಕಾರಾತ್ಮಕ ಆಲೋಚನೆಗಳನ್ನು ಬಲಪಡಿಸಲು ಇದನ್ನು ಬಳಸಲಾಗುತ್ತದೆ. ಕ್ಷೇಪನ ಮುದ್ರೆಯು ಪವಿತ್ರವಾದ ಕೈ ಸೂಚಕ ಅಥವಾ ಮುದ್ರೆ. ಇದನ್ನು ಸುರಿಯುವ ಮತ್ತು ಬಿಡುವ ಸೂಚಕ ಎಂದು ಕೂಡ ಕರೆಯಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಬರಿದುಮಾಡುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಸಾಧನವಾಗಿ ಬಳಕೆಯಾಗುತ್ತದೆ.

    ಕ್ಷೇಪನ ಮುದ್ರೆಯು ಹಸ್ತ ಮುದ್ರೆಗಳು ಅಥವಾ ಕೈ ಸನ್ನೆಗಳು ಅಥವಾ ಮುದ್ರೆಗಳ ಒಂದು ವಿಧವಾಗಿದೆ. ಕ್ಷೇಪನ ಮುದ್ರೆಯು ಅದರ ಶುದ್ಧೀಕರಣ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ನಮ್ಮ ದೇಹದಿಂದ ವಿಷ ಮತ್ತು ಅನಗತ್ಯ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡá-ತ್ತದೆ. ಅದರ ನಿಮೂಲನ ಗುಣಲಕ್ಷಣಗಳು ಸೀಮಿತವಾದವಲ್ಲ; ಇದು ನಕಾರಾತ್ಮಕ ಆಲೋಚನೆಗಳನ್ನು ಬಿಡಲು ಸಹ ಸಹಾಯಮಾಡುತ್ತದೆ. ಜೀವನದಲ್ಲಿ ಕೆಲವೊಮ್ಮೆ ಉಂಟಾಗುವ ವೇದನೆ ಪರಿಹರಿಸಲು ಕೂಡ ಈ ಮುದ್ರೆ ಸಹಕಾರಿಯಾಗುತ್ತದೆ. ಈ ಮುದ್ರೆಯು ಎಲ್ಲಾ ರೀತಿಯ ಆತಂಕದ ಭಾವನೆಗಳನ್ನು ಬಿಡುಗಡೆಗೊಳಿಸಲು ಸಹಾಯ ಮಾಡುತ್ತದೆ. ಈ ಮುದ್ರೆಯಲ್ಲಿ ದೊಡ್ಡ ಕರುಳು, ಚರ್ಮ ಮತ್ತು ಶ್ವಾಸಕೋಶಕ್ಕೆ ಪ್ರಚೋದನೆ ದೊರೆತು ಮಲಿನ ವಸ್ತುಗಳು ಹೊರಕ್ಕೆ ಹಾಕಲು ಸಹಾಯ ಮಾಡುತ್ತದೆ. (ಚರ್ಮದಲ್ಲಿ ಬೆವರಿನ ಮೂಲಕ, ನಿಶ್ವಾಸದ ಮೂಲಕ ಶ್ವಾಸಕೋಶಗಳ ಮೂಲಕ.

    ಮುದ್ರೆಯಲ್ಲಿ ಋಣಾತ್ಮಕ ಶಕ್ತಿ ನಿವಾರಣೆಯಾಗಿ ಧ್ಯಾನ ಅಭ್ಯಾಸ ಮಾಡಲು ಸುಲಭವಾಗುತ್ತದೆ. ಧ್ಯಾನ ಮಾಡುವಾಗ ಮನಸ್ಸಿಗೆ ಕೆಟ್ಟ ವಿಚಾರ ಅಥವಾ ಅನಗತ್ಯ ಯೋಚನೆಗಳು ಬರಬಾರದು. ಅಂತಹ ಯೋಚನೆಗಳು ಬರುತ್ತಿ ದ್ದರೆ ಈ ಮುದ್ರೆಯನ್ನು ಸ್ವಲ್ಪ ಹೊತ್ತು ಅಭ್ಯಾಸ ಮಾಡಬೇಕು.

    ಕ್ಷೇಪನ ಮುದ್ರೆ ಮಾಡುವ ವಿಧಾನ: ಎರಡು ಕೈಗಳ ತೋರು ಬೆರಳನ್ನು ಮಾತ್ರ ಜೊತೆಯಾಗಿ ರ್ಸ³ಸಿ ಉಳಿದ ಎಲ್ಲಾ ಬೆರಳುಗಳನ್ನು ಪರಸ್ಪರ ಹೆಣೆದು ಕೊಳ್ಳಬೇಕು. (ಚಿತ್ರದಲ್ಲಿರುವಂತೆ) ಹಸ್ತದ ಮದ್ಯೆ ಸ್ವಲ್ಪ ಅಂತರವಿರಲಿ (ಟೊಳ್ಳಿನಂತೆ) ಸುಮಾರು 3 ರಿಂದ 5 ನಿಮಿಷ ಅಭ್ಯಾಸ ಮಾಡಿ. ಕ್ಷೇಪನ ಮುದ್ರೆಯಲ್ಲಿ ಇಷ್ಟ ದೇವರ ಮಂತ್ರವನ್ನು 108 ಬಾರಿ ಪಠಿಸಿ.

    ಪ್ರಯೋಜನವೇನು?: ಈ ಮುದ್ರೆಯಲ್ಲಿ ಮನಸ್ಸಿನ ಆರೋಗ್ಯ ಹಾಗೂ ಶ್ವಾಶಕೋಶದ ಮತ್ತು ಚರ್ಮದ ಆರೋಗ್ಯ ವೃದ್ಧಿ ಯಾಗುತ್ತದೆ. ಮನಸ್ಸಿಗೆ ಬರುವ ಕೆಟ್ಟ ವಿಚಾರಗಳನ್ನು ತಡೆಯುತ್ತದೆ ಮತ್ತು ಶುದ್ಧೀಕರಣ ಕ್ರಿಯೆಯಲ್ಲಿ ಪರಿಣಾಮ ಬೀರುತ್ತದೆ. ಮನಸ್ಸು ಶುದ್ಧಿಗೊಳ್ಳುತ್ತದೆ. ಜೊತೆಗೆ, ಕರುಳು ಮತ್ತು ಅಂಗಾಂಶಗಳಿಂದ ಕಲ್ಮಶಗಳನ್ನು ತೊಡೆದುಹಾಕಲು ಕ್ಷೇಪನ ಮುದ್ರೆಯು ಸಹಾಯಮಾಡುತ್ತದೆ. ಆದ್ದರಿಂದ ಈ ಮುದ್ರೆಯನ್ನು ನಿರ್ವಿಶೀಕರಣಕ್ಕೆ ಅತ್ಯಂತ ಸೂಕ್ತವಾದ ಮುದ್ರೆಗಳಲ್ಲಿ ಒಂದೆಂದು ಪರಿಗಣಿಸಬಹುದು. ಈ ಮುದ್ರೆಯು ಕೆಟ್ಟ ಪರಿಸರದಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮುಂದಿನ ಬಾರಿ ನಿಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ನೀವು ಅನುಭವಿಸಿದಾಗ, ಕ್ಷೇಪನ ಮುದ್ರೆಯನ್ನು ಅಭ್ಯಾಸಮಾಡಿ ಮತ್ತು ಅವುಗಳನ್ನು ತೊಡೆದುಹಾಕಲು ಪ್ರಯತ್ನಿಸಿ. ನೀವು ಪ್ರತಿದಿನ ಈ ಮುದ್ರೆಯನ್ನು ಅಭ್ಯಾಸ ಮಾಡಿದರೆ, ನಿಮ್ಮ ಜೀವನದಲ್ಲಿ ನೀವು ಹೆಚ್ಚು ಸಕಾರಾತ್ಮಕತೆಯನ್ನು ಅನುಭವಿಸುವಿರಿ.

    ಮನಸ್ಸಿಗೆ ಬರುವ ಕೆಟ್ಟ ವಿಚಾರಗಳನ್ನು ತಡೆಯುತ್ತದೆ. ಹಾಗೂ ಕೆಲವೊಮ್ಮೆ ಟ್ರಾಫಿಕ್ ಜಾಮ್ ಪದೇ ಪದೇ ಬರುವ ಮೊಬೈಲ್ ಕಾಲ್ ಇತ್ಯಾದಿಗಳಿಂದ ಉಂಟಾಗುವ ಮನಸ್ಸಿನ ತಳಮಳ ನಿವಾರಣೆ ಗೊಳ್ಳುತ್ತದೆ. ಈ ಮುದ್ರೆಯ ಅಭ್ಯಾಸದಿಂದ ಮನಸ್ಸು ಬಲುಬೇಗನೆ ಮುದಗೊಳ್ಳುತ್ತದೆ.

    ನಿಮ್ಮಂಥ ನಾಯಕರಿರುವ ದೇಶದಲ್ಲಿ ನಾನು ಸುರಕ್ಷಿತ: ನಟಿ ರಶ್ಮಿಕಾ ಮಂದಣ್ಣ

    ನಾವು ಸನಾತನ ಧರ್ಮವನ್ನು ಎಂದೆಂದಿಗೂ ವಿರೋಧಿಸುತ್ತೇವೆ: ಕಾನೂನುಕ್ರಮಕ್ಕೆ ಸಿದ್ಧ ಎಂದು ಮತ್ತೆ ನಾಲಗೆ ಹರಿಬಿಟ್ಟ ಉದಯನಿಧಿ

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts