ಐಪಿಎಲ್‌ನಲ್ಲಿ 9 ವರ್ಷಗಳ ಬಳಿಕ ಕೃನಾಲ್ ಅರ್ಧಶತಕ: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

blank

ನವದೆಹಲಿ: ಕೃನಾಲ್ ಪಾಂಡ್ಯ (73* ರನ್, 47 ಎಸೆತ, 5 ಬೌಂಡರಿ, 4 ಸಿಕ್ಸರ್ ಹಾಗೂ 28ಕ್ಕೆ 1 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ರಜತ್ ಪಾಟೀದಾರ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಟೂರ್ನಿಯ ಮೊದಲ ಮುಖಾಮುಖಿಯ ತವರಿನ ಅಂಗಣದಲ್ಲಿನ ಸೋಲಿಗೆ ಮುಯ್ಯಿ ತೀರಿಸಿಕೊಂಡಿದೆ.

blank

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ (33ಕ್ಕೆ 3) ಸಹಿತ ಇತರ ಬೌಲರ್‌ಗಳ ಬಿಗಿ ದಾಳಿಯ ನಡುವೆಯೂ ಕನ್ನಡಿಗ ಕೆಎಲ್ ರಾಹುಲ್ (41 ರನ್, 39 ಎಸೆತ, 3 ಬೌಂಡರಿ) ಹಾಗೂ ಸ್ಲಾಗ್ ಓವರ್‌ಗಳಲ್ಲಿ ಟ್ರಿಸ್ಟಾನ್ ಸ್ಟಬ್ಸ್ (34 ರನ್, 18 ಎಸೆತ, 5 ಬೌಂಡರಿ, 1 ಸಿಕ್ಸರ್) ಆಸರೆಯಲ್ಲಿ 8 ವಿಕೆಟ್‌ಗೆ 162 ರನ್‌ಗಳ ಪೈಪೋಟಿಯುತ ಮೊತ್ತ ಪೇರಿಸಿತು.

ಪ್ರತಿಯಾಗಿ 26 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಆರ್‌ಸಿಬಿ ಆಘಾತ ಎದುರಿಸಿತು. ಆಗ ವಿರಾಟ್ ಕೊಹ್ಲಿ (51 ರನ್, 47 ಎಸೆತ, 4 ಬೌಂಡರಿ) ಹಾಗೂ ಕೃನಾಲ್ ಪಾಂಡ್ಯ ಜೋಡಿ ಶತಕದ ಜತೆಯಾಟದ ಮೂಲಕ ಚೇಸಿಂಗ್ ಜೀವಂತವಿರಿಸಿದರು. ಅಂತಿಮವಾಗಿ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 165 ರನ್‌ಗಳಿಸಿತು. ಇದರೊಂದಿಗೆ ತವರಿನಾಚೆಗಿನ ಅಜೇಯ ಓಟವನ್ನು ಸತತ 6ನೇ ಪಂದ್ಯಕ್ಕೂ ವಿಸ್ತರಿಸಿತು.

9. ಕೃನಾಲ್ ಪಾಂಡ್ಯ 9 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಒಟ್ಟಾರೆ 2ನೇ ಅರ್ಧಶತಕ ಸಿಡಿಸಿದರು. 2016ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮುಂಬೈ ಪರ ಚೊಚ್ಚಲ ಅರ್ಧಶತಕ ಬಾರಿಸಿದ್ದರು.

 

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…