More

    ಕೆಆರ್‌ಪಿಪಿ ಗೆಲುವಿನಲ್ಲಿ ಸ್ತ್ರೀಯರ ಪಾತ್ರ ಪ್ರಮುಖ

    ಗಂಗಾವತಿ: ಪ್ರಸಕ್ತ ಚುನಾವಣೆಯಲ್ಲಿ ಮಹಿಳಾ ಶಕ್ತಿ ಪ್ರದರ್ಶನಗೊಂಡಿದ್ದು, ಕೆಆರ್‌ಪಿಪಿ ಗೆಲುವಿನಲ್ಲಿ ಸ್ತ್ರೀಯರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಕೆಆರ್‌ಪಿಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸುರೇಶ ಹೇಳಿದರು.

    ಪದಾಧಿಕಾರಿಗಳು, ಕಾರ್ಯಕರ್ತರ ಸಮಾಲೋಚನೆ ಸಭೆ

    ನಗರದ ಕೆಅರ್‌ಪಿಪಿ ಕಚೇರಿಯಲ್ಲಿ ಮಹಿಳಾ ಘಟಕದಿಂದ ಶನಿವಾರ ಆಯೋಜಿಸಿದ್ದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಕೆಆರ್‌ಪಿಪಿ ಪ್ರಚಾರದಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಗಾಲಿ ಜನಾರ್ದನರೆಡ್ಡಿ ಗೆಲುವಿಗೆ ಶ್ರಮಿಸಿದ್ದಾರೆ.

    2023 ಮತ್ತು 2024 ಚುನಾವಣೆ ಪರ್ವವಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಲೋಕಸಭೆವರೆಗೂ ಮಹಿಳಾ ಕಾರ್ಯಕರ್ತರು ವಿಶ್ರಮಿಸಬಾರದು. ತಾಪಂ, ಜಿಪಂ ಚುನಾವಣೆಯಲ್ಲೂ ಕೆಆರ್‌ಪಿಪಿ ಜಯಭೇರಿಗೆ ಸನ್ನದ್ಧರಾಗಬೇಕು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರುತ್ತಿದ್ದು, ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಿದ್ದರೂ ಸ್ಪಂದಿಸಲಾಗುವುದು ಎಂದರು.

    ಗ್ರಾಮೀಣ ಘಟಕದ ಅಧ್ಯಕ್ಷೆ ಸುಧಾ ಮಂಜುನಾಥ, ನಗರ ಘಟಕದ ಅಧ್ಯಕ್ಷೆ ಭಾರತಿ ಆಗಲೂರು, ವಿವಿಧ ಘಟಕಗಳ ಪದಾಧಿಕಾರಿಗಳಾದ ಕಾರಟಗಿಯ ಮಾಲತಿ ಶ್ರೀನಿವಾಸ, ಮಲ್ಲಮ್ಮ, ವಿಜಯಲಕ್ಷ್ಮೀ, ಮಾಲಾನಾಯ್ಕ, ಮಹಾಂತಮ್ಮ, ಸುನಂದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts