More

    ಅಳು ಬಂದಾಗ ಅಳಬೇಕು; ಸೋಲಿನ ಕುರಿತು ಕೃತಿ ಮಾತು

    ಕೃತಿ ಸನಾನ್ ಇತ್ತೀಚೆಗೆ ಒಪ್ಪಿಕೊಂಡ ಯಾವೊಂದು ಸಿನಿಮಾ ಸಹ ಯಶಸ್ವಿಯಾದ ಉದಾಹರಣೆ ಇಲ್ಲ. ‘ಹೀರೋಪಂತಿ 2’, ‘ಬಚ್ಚನ್ ಪಾಂಡೆ’, ‘ಹಮ್ ದೋ ಹಮಾರೆ ದೋ’ … ಹೀಗೆ ಎಲ್ಲವೂ ಸೋಲಿನ ಪಟ್ಟಿ ಸೇರಿದಂತ ಚಿತ್ರಗಳೇ. ಈ ಚಿತ್ರಗಳ ಬಗ್ಗೆಯೂ ಕೃತಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲ ಚಿತ್ರಗಳ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಆದರೆ, ಈ ಯಾವ ಚಿತ್ರವೂ ಗೆಲ್ಲಲಿಲ್ಲ. ಇಂಥ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಸೋಲನ್ನು ಹೇಗೆ ಸ್ವೀಕರಿಸುತ್ತೀರಾ? ಎಂಬ ಪ್ರಶ್ನೆ ಕೃತಿಗೆ ಎದುರಾಗಿದೆ.

    ಅದಕ್ಕೆ ಉತ್ತರಿಸಿರುವ ಅವರು, ‘ನಾನು ಮೇಲ್ನೋಟಕ್ಕೆ ಬಹಳ ಗಟ್ಟಿಗಿತ್ತಿಯಾಗಿ ಕಾಣಿಸಿಕೊಳ್ಳಬಹುದು. ಆದರೆ, ನಾನೂ ಮನುಷ್ಯಳಲ್ಲವೇ? ಅಂತರಂಗದಲ್ಲಿ ನನಗೂ ದುಃಖವಾಗುತ್ತದೆ. ಅಳು ಬಂದಾಗ ಅಳುತ್ತೇನೆ. ನಗು ಬಂದಾಗ ನಗುತ್ತೇನೆ. ಅದು ಹೊರಜಗತ್ತಿಗೆ ಕಾಣದಿರಬಹುದು. ಅದು ನನ್ನ ಶಕ್ತಿ. ಆದರೆ, ನೋವಾದಾಗ ಖಂಡಿತಾ ಅಳುತ್ತೇನೆ. ಅತ್ತು ಹಗುರಾಗುತ್ತೇನೆ. ನಾವು ಒಂದೇ ಚಿತ್ರದ ಬಗ್ಗೆ ಅಳುತ್ತಾ ಕೂರುವುದಕ್ಕೆ ಸಾಧ್ಯವಿಲ್ಲ. ಮುಂದುವರೆಯುತ್ತಿರಬೇಕು. ಎಲ್ಲಿ ಏನು ತಪ್ಪಾಗಿದೆ ಎಂಬುದನ್ನು ಅರಿತುಕೊಂಡು ಮುನ್ನಡೆಯುತ್ತಿರಬೇಕು. ಮುಂದೆ ಖಂಡಿತಾ ಒಂದೊಳ್ಳೆಯ ಸಮಯ ಬರುತ್ತದೆ ಎಂಬ ನಂಬಿಕೆಯೊಂದಿಗೆ ಹೆಜ್ಜೆ ಹಾಕಬೇಕು’ ಎನ್ನುತ್ತಾರೆ ಕೃತಿ. – ಏಜೆನ್ಸೀಸ್

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಕಾಮನ್​ವೆಲ್ತ್​ ಗೇಮ್ಸ್​ ಮುಕ್ತಾಯ; ಭಾರತಕ್ಕೆ 4ನೇ ಸ್ಥಾನ: ಗಳಿಸಿದ ಪದಕಗಳ ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts