Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಹಿಂದುಗಳಿಗೆ ಧಾರ್ವಿುಕ ಶಿಕ್ಷಣ

Wednesday, 11.07.2018, 5:25 AM       No Comments

ಬಾಗಲಕೋಟೆ: ಮಧ್ವಾಚಾರ್ಯರ ಜನ್ಮಸ್ಥಳವಾದ ಪಾಜಕದಲ್ಲಿ ಆನಂದತೀರ್ಥ ಮಹಾವಿದ್ಯಾಲಯ ಮೂಲಕ ಹಿಂದು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಕಾಲೇಜುವರೆಗೂ ಉಚಿತ ಧಾರ್ವಿುಕ ಹಾಗೂ ಲೌಕಿಕ ಶಿಕ್ಷಣ ನೀಡಲಾಗು ವುದೆಂದು ಉಡುಪಿ ಕೃಷ್ಣಮಠದ ಪೂಜ್ಯ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು.

ಬಾಗಲಕೋಟೆಯ ನವನಗರದ ಕೃಷ್ಣ ಮಠಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈಗಾಗಲೇ ಹತ್ತನೇ ತರಗತಿವರೆಗೂ ಶಿಕ್ಷಣ ನಡೆದಿದೆ. ಇದನ್ನು ಕಾಲೇಜು ಹಂತದವರೆಗೂ ವಿಸ್ತರಿಸಲಾಗುವುದು ಎಂದರು.

ಶಿಕ್ಷಣ ಬಯಸಿ ಬರುವ ಹಿಂದುಗಳಿಗೆ ಧಾರ್ವಿುಕ ಶಿಕ್ಷಣ ಜತೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಲೌಕಿಕ ಶಿಕ್ಷಣ ನೀಡಲಾಗುವುದು. ಹಾಗೆಯೇ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವೈದಿಕ ಶಿಕ್ಷಣ ನೀಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸ ಲಾಗುವುದು. ತಮ್ಮ ಆರ್ಥಿಕ ಸಂಪನ್ಮೂಲ ಆಧರಿಸಿ ಶಿಕ್ಷಣ ಕಾರ್ಯ ನಡೆಸುತ್ತಿದ್ದೇವೆ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲೂ ಶಿಕ್ಷಣ ಸಂಸ್ಥೆ ಕಾರ್ಯ ನಡೆದಿದೆ ಎಂದು ಹೇಳಿದರು.

ಶ್ರೀಮಠದಲ್ಲಿ ಪರ್ಯಾಯ ಪೂರ್ವದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆದಿದ್ದವು. ಇದೀಗ ಪರ್ಯಾಯದ ನಂತರದಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಸರ್ವಪಕ್ಷ ಆಡಳಿತ ಬರಲಿ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಗಳು, ರಾಜಕೀಯವಾಗಿ ತಾವು ಏನನ್ನೂ ಮಾತನಾಡಲ್ಲ. ಅದು ಬೇರೆ ಅರ್ಥ ಕಲ್ಪಿಸುತ್ತದೆ. ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ಅದು ಭಗ್ನವಾಗಲಿ ಎಂದು ತಾವು ಹೇಳುವುದಿಲ್ಲ. ಜನರಿಗೆ ಒಳ್ಳೆಯದಾಗುವ ಕೆಲಸವನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸರ್ವಪಕ್ಷ ಸರ್ಕಾರ ರಚನೆ ಆಗಲಿ ಎನ್ನುವ ಹೇಳಿಕೆ ನೀಡಿದ್ದೆ. ಈ ವ್ಯವಸ್ಥೆ ಹಲವು ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕೂಡಿಕೊಂಡು ಸರ್ಕಾರ ಮಾಡಿದ್ದರಿಂದ ಅವರಿಬ್ಬರ ನಡುವೆ ಜಗಳ ಇಲ್ಲವಾಗಿದೆ. ಈ ಸರ್ಕಾರದಲ್ಲಿ ಬಿಜೆಪಿಯೂ ಸೇರಿಕೊಂಡಲ್ಲಿ ಎಲ್ಲರೂ ಕೂಡಿಕೊಂಡು ಉತ್ತಮ ಆಡಳಿತ ನೀಡಬಹುದು ಎನ್ನುವುದು ತಮ್ಮ ಸೂಚನೆ ಆಗಿತ್ತು. ಹಾಗಂತ ಇದು ಜಾರಿಗೆ ಬರುವುದಿಲ್ಲ ಎನ್ನುವುದು ತಮಗೆ ಗೊತ್ತಿದೆ. ಹೀಗಾದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯ ತಮ್ಮದಾಗಿದೆ ಎಂದು ಪೂಜ್ಯರು ಹೇಳಿದರು.

ಸಿ.ಎನ್.ದಾಸ, ಕೆ.ಎಸ್.ದೇಶಪಾಂಡೆ, ರಘೊತ್ತಮಚಾರ್ಯ ನಾಗಸಂಪಗಿ, ಬಾಲಕೃಷ್ಣ ಮಾರಕೋಡ ಇತರರಿದ್ದರು.

Leave a Reply

Your email address will not be published. Required fields are marked *

Back To Top