ಚಿಕ್ಕಪಡಸಲಗಿ: ಕೃಷ್ಣಾ ಪ್ರವಾಹದಿಂದಾಗಿ ಆಲಗೂರ, ಸನಾಳ, ಚಿಕ್ಕಪಡಸಲಗಿ, ಹಿರೇಪಡಸಲಗಿ ಗ್ರಾಮಗಳ ಗಡ್ಡೆಗಳು ಹಾಗೂ ನದಿ ಪಕ್ಕದಲ್ಲಿರುವ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಆಲಗೂರ ಗಡ್ಡಿಯಲ್ಲಿರುವ ಹತ್ತಕ್ಕೂ ಹೆಚ್ಚು ಕುಟುಂಬಗಳ ವಸತಿಗಳು ಕೃಷ್ಣಾರ್ಪಣವಾಗಿವೆ.
ನದಿ ತೀರದ ಜನರು ನೀರನ್ನು ಕಾಯಿಸಿ, ಸೋಸಿ ಕುಡಿಯಬೇಕು. ಸಾರ್ವಜನಿಕರು ನದಿ ಪಾತ್ರಕ್ಕೆ ಇಳಿಯಬಾರದು ಎಂದು ನದಿ ತೀರದ ಗ್ರಾಮಗಳಲ್ಲಿ ಪ್ರತಿದಿನ ಡಂಗುರ ಸಾರಿ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.