ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

Sangolli Rayanna

ಮಂಜುನಾಥ ಗದಗಿನ ಬೆಳಗಾವಿ
ಬಿಟ್ರಿಷರ ವಿರುದ್ಧ ಘರ್ಜಿಸಿ ತಾಯ್ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ವೀರಸೇನಾನಿ ಸಂಗೊಳ್ಳಿ ರಾಯಣ್ಣ. ಅವನ ಹೆಸರು ಕೇಳಿದರೆ ಸಾಕು, ಬ್ರಿಟಿಷ್ ಸರ್ಕಾರ ನಡುಗುತ್ತಿತ್ತು. ಕಿತ್ತೂರು ರಾಣಿ ಚನ್ನಮ್ಮನ ಬಲಗೈಬಂಟನಾಗಿದ್ದ ಆತ ತನ್ನ ಗೆರಿಲ್ಲಾ ಯುದ್ಧ ತಂತ್ರದ (ಶತ್ರುವಿಗೆ ಸಿಗದೇ, ಶತ್ರುಗಳ ಚಲನವಲನ ಅರಿತು ಯುದ್ಧ ಮಾಡುವುದು) ಮೂಲಕ ಆಂಗ್ಲರ ನಿದ್ದೆಗೆಡಿಸಿದ್ದ.

ಇಡೀ ದೇಶದಲ್ಲಿ ಆಂಗ್ಲರ ಅಧಿಪತ್ಯ ಸ್ಥಾಪನೆಯಾಗಿ, ಸಣ್ಣಪುಟ್ಟ ಸಂಸ್ಥಾನಗಳನ್ನು ತಮ್ಮ ಅಧೀನಕ್ಕೆ ಪಡೆಯಬೇಕೆಂದು ಬ್ರಿಟಿಷರು ಕಾಯ್ದುಕುಳಿತಿದ್ದರು. ಇದೇ ವೇಳೆ ಸಮೃದ್ಧ ಕಿತ್ತೂರು ಸಂಸ್ಥಾನದ ಮೇಲೆ ಅವರ ಕಣ್ಣು ಬಿತ್ತು. ಕಪ್ಪ ಕೊಟ್ಟು ಶರಣಾಗಬೇಕು ಎಂದು ಚನ್ನಮ್ಮನಿಗೆ ತಾಕೀತು ಮಾಡಿದರು. ಚನ್ನಮ್ಮ ‘ನಾವೇಕೆ ನಿಮಗೆ ಕೊಡಬೇಕು ಕಪ್ಪ’ ಎಂದು ಘರ್ಜಿಸಿದ್ದಳು. ಇದರಿಂದ ಕುಪಿತರಾದ ಆಂಗ್ಲರು 1824ರ ಅ. 21ರಂದು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಮುಂದಾಳತ್ವದಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ಆಂಗ್ಲರ ಮೇಲೆ ರಾಯಣ್ಣ ನೇತೃತ್ವದಲ್ಲಿ ಕಿತ್ತೂರಿನ ಸೈನಿಕರು ಮುನ್ನುಗ್ಗಿದ್ದರು. ಇದೇ ವೇಳೆ ಅಮಟೂರು ಬಾಳಪ್ಪ ತಮ್ಮ ಖಡ್ಗದಿಂದ ಥ್ಯಾಕರೆಯ ರುಂಡ ಚೆಂಡಾಡಿದ. ಆಂಗ್ಲರು ಕಾಲ್ಕಿತ್ತರು. ಅಷ್ಟಕ್ಕೆ ಸುಮ್ಮನಾಗದೆ ಮತ್ತೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಆದರೆ ತಮ್ಮವರ ಮೋಸದಿಂದಲೇ ಕಿತ್ತೂರಿಗೆ ಸೋಲಾಯಿತು. ಚನ್ನಮ್ಮ ಮತ್ತು ರಾಯಣ್ಣ ಬ್ರಿಟಿಷರ ವಶವಾದರು. ಆದರೆ, ಕೆಲವು ದಿನಗಳ ನಂತರ ರಾಯಣ್ಣ ಬಿಡುಗಡೆಯಾದ.

ಸಿಡಿದೆದ್ದ ರಾಯಣ್ಣ: ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧ ರಾಯಣ್ಣ ಸಿಡಿದೆದ್ದ. ಸ್ವತಃ ಅವನ ಜಮೀನನ್ನು ಕೂಡ ಬ್ರಿಟಿಷರು ಕಿತ್ತುಕೊಂಡಿದ್ದರು. ಭೂಮಿಯ ಮೇಲಿನ ತೆರಿಗೆ ಹೆಚ್ಚಿಸಿದ್ದರು. ಇದರ ವಿರುದ್ಧ ರಾಯಣ್ಣ ತನ್ನದೇ ಸೈನ್ಯ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ. ಭೂಮಾಲೀಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡು ಸುಟ್ಟುಹಾಕಿದ. ಅವರಿಂದ ಕಿತ್ತುಕೊಂಡ ಹಣವನ್ನು ನಿರ್ಗತಿಕರಿಗೆ ಹಂಚಿದ.

ಬೆಟ್ಟಗುಡ್ಡಗಳೇ ಅಡಗುತಾಣ: ಚನ್ನಮ್ಮನ ದತ್ತುಪುತ್ರನನ್ನು ಕಿತ್ತೂರಿನ ಉತ್ತರಾಧಿಕಾರಿಯನ್ನಾಗಿಸುವ ಛಲ ಹಾಗೂ ಬ್ರಿಟಿಷ್ ಸರ್ಕಾರದ ಸೊಕ್ಕಡಗಿಸಲು ರಾಯಣ್ಣ ತನ್ನ ಸೈನ್ಯದೊಂದಿಗೆ ದಟ್ಟಡವಿಯಲ್ಲಿ ಅಡಗಿಕೊಂಡು ರಣತಂತ್ರ ಹೆಣೆದು ಯುದ್ಧ ಸಾರುತ್ತಿದ್ದ. ಖಾನಾಪುರ ತಾಲೂಕಿನ ಹಂಡಿಭಡಗನಾಥ, ಸಂಪಗಾಂವ, ನಂದಗಡ ಕಾನನದಲ್ಲಿಯೂ ಇದ್ದ. ರಾಯಣ್ಣನ ಸೈನ್ಯ ರಾತ್ರಿ ಹೊತ್ತಿನಲ್ಲಿ ಹೆಚ್ಚು ಕಾರ್ಯಾಚರಣೆ ಮಾಡುತ್ತಿತ್ತು.

ಮೋಸದಿಂದ ಸೆರೆ: ಯುದ್ಧ ಮಾಡಿ ರಾಯಣ್ಣನನ್ನು ಗೆಲಲ್ಲು ಅಸಾಧ್ಯವೆಂದು ತಿಳಿದ ಬ್ರಿಟಿಷರು ಕುತಂತ್ರ ಬುದ್ಧಿ ಪ್ರಯೋಗಿಸಿದರು. ರಾಯಣ್ಣನ ಸ್ವಂತ ಮಾವ ಲಕ್ಷ್ಮಣನನ್ನು ದಾಳವನ್ನಾಗಿಸಿಕೊಂಡರು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಬ್ರಿಟಿಷ್ ಸೈನಿಕರು ಆಕ್ರಮಣ ಮಾಡಿದರು. ಆಗ ರಾಯಣ್ಣನ ಖಡ್ಗ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ಕೊಡು ಎಂದು ಕೇಳಿದರೂ ಲಕ್ಷ್ಮಣ ಕೊಡಲಿಲ್ಲ. ಹೀಗಾಗಿ ರಾಯಣ್ಣ ಮೋಸದಿಂದ ಬ್ರಿಟಿಷರ ವಶವಾದ.

ನಂದಗಡದಲ್ಲಿ ಸಮಾಧಿ: ಸೆರೆಯಾಗಿದ್ದ ರಾಯಣ್ಣನ ಆಶಯದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ 1831ರ ಜ. 26ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಅದಕ್ಕೆ ಮುನ್ನ ‘ನಿನ್ನ ಕೊನೆಯಾಸೆ ಏನು’ ಎಂದು ಕೇಳಿದಾಗ ರಾಯಣ್ಣ ‘ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು’ ಎಂದು ಘರ್ಜಿಸಿದ್ದ. ರಾಯಣ್ಣನನ್ನು ಗಲ್ಲಿಗೇರಿಸಿದ ನಂತರ ನೆಟ್ಟ ಆಲದ ಮರ ಇನ್ನೂ ಇದೆ. ನಿತ್ಯ ನೂರಾರು ಜನ ಬಂದು ಸಮಾಧಿ ದರ್ಶನ ಪಡೆದು ಹೋಗುತ್ತಾರೆ.

ವಿಶೇಷ ದಿನಗಳಂದೇ ಜನನ, ಮರಣ: ರಾಯಣ್ಣ ಜನಿಸಿದ್ದು 1798ರ ಆ. 15ರಂದು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತದ್ದೂ ಅದೇ ದಿನ. ಅವನ ನಿಧನವು ಜ. 26ರಂದು ಆಯಿತು. ನಂತರ ಭಾರತವು ಗಣರಾಜ್ಯವೆಂದು ಘೊಷಣೆಯಾಗಿದ್ದು ಅದೇ ದಿನ. ಇದು ಕಾಕತಾಳೀಯವಾದರೂ ಅಚ್ಚರಿಯ ಸತ್ಯ.

ಆತ ವೈಟ್​ಬಾಲ್​ ಕ್ರಿಕೆಟ್​ನ… Virat Kohli ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್​ ಆಟಗಾರ

ಸ್ಯಾಂಡಲ್​ವುಡ್​ನ ಹಿರಿಯ ನಟ ಅನಂತ್​​ನಾಗ್​ಗೆ Padma Bhushan ಪ್ರಶಸ್ತಿ

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…