ಕೆ.ಆರ್.ಸಾಗರ: ಮೊಗರಹಳ್ಳಿ ಗ್ರಾಮದ ಮನೆಯೊಂದರ ಬಾಗಿಲು ಮುರಿದು
ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ.
ವಿಕ್ರಾಂತ್ ನೌಕರರ ಬಡಾವಣೆಯಲ್ಲಿರುವ ಗುರುಪ್ರಸಾದ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, 1.75 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಡಿಸೆಂಬರ್ 27ರಂದು ಮನೆ ಮಾಲೀಕ ಗುರುಪ್ರಸಾದ್ ಕುಟುಂಬ ಸಮೇತ ಹೈದರಾಬಾದ್‌ಗೆ ತೆರಳಿದ್ದರು. 30ರಂದು ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಬಾಗಿಲ ಭದ್ರತೆಗೆ ಅಳವಡಿಸಿದ್ದ ಗ್ರಿಲ್ ಸರಳನ್ನು ಕಿತ್ತು, ಬಾಗಿಲು ಒಡೆದು ಕಳ್ಳತನ ಮಾಡಿದ್ದಾರೆ.
ಬೀರುವಿನಲ್ಲಿದ್ದ ಚಿನ್ನದ ಸರ, ಓಲೆಗಳು, ಬೆಳ್ಳಿ ಸಾಮಾನುಗಳು, ಎಲ್‌ಇಡಿ ಟಿ.ವಿ, ವಾಚು, ಸೀರೆಗಳು ಸೇರಿದಂತೆ ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾರೆ.
ಈ ಸಂಬಂಧ ಮನೆ ಮಾಲೀಕ ಗುರುಪ್ರಸಾದ್ ಕೆ.ಆರ್.ಸಾಗರ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ವೃತ ನೀರಿಕ್ಷಕ ಕೃಷ್ಣಪ್ಪ, ಪಿಎಸ್ಸೈ ನವೀನ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರೂ ಪರಿಶೀಲನೆ ನಡೆಸಿದರು.