ಫೇಸ್​ಬುಕ್​ನಲ್ಲಿ ಅವಹೇಳನ ಕಳಸದಲ್ಲಿ ದೂರು ದಾಖಲು

ಕಳಸ: ಜಿಪಂ ಸದಸ್ಯ ಕೆ.ಆರ್.ಪ್ರಭಾಕರ್ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಆಧಾರ ರಹಿತ ಆರೋಪ ಮಾಡಿದ ವ್ಯಕ್ತಿ ಮೇಲೆ ಕಳಸ ಬ್ಲಾಕ್ ಯೂತ್ ಕಾಂಗ್ರೆಸ್ ಸಮಿತಿ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ.

ಡಿ. 27 ರಂದು ಜಿಪಂ ಸದಸ್ಯ ಕೆ.ಆರ್.ಪ್ರಭಾಕರ್ ಅವರು ಜಯಪುರದಿಂದ ಬಾಳೆಹೊಳೆ ಹೆದ್ದಾರಿ ಅಗಲೀಕರಣ ಹಾಗೂ ಮರು ಡಾಂಬರೀಕರಣಕ್ಕೆ ಚಾಲನೆ ನೀಡಿದ ಚಿತ್ರವನ್ನು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಆ ಚಿತ್ರಕ್ಕೆ ಪ್ರತಿಯಾಗಿ ರಘು ಗೌಡ ಎಂಬುವವರು ಕೆ.ಆರ್.ಪ್ರಭಾಕರ್ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದು ಇದರಿಂದಾಗಿ ಅವರ ಘನತೆಗೆ ಧಕ್ಕೆ ಉಂಟಾಗಿರುತ್ತದೆ. ಆದ್ದರಿಂದ ರಘು ಗೌಡ ಎಂಬುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೇಸ್ ಯೂತ್ ಅಧ್ಯಕ್ಷ ವೀರೇಂದ್ರ ಮತ್ತು ಐಟಿ ಸೆಲ್ ವಿಭಾಗದ ಅಧ್ಯಕ್ಷ ಕೆ.ಸಿ.ರಜಿತ್ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ: ಡಿಸೆಂಬರ್ 29ರ ಬೆಳಗ್ಗಿನ ಜಾವ ಕಳಸದ ಪ್ರಿನ್ಸ್ ಆಪ್ ಕಳಸ ಸಮೀಪ ಜಾನುವಾರು ಕಳವು ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕಳಸ ಯೂತ್ ಕಾಂಗ್ರೆಸ್ ಅಧ್ಯಕ್ಷ ವೀರೇಂದ್ರ ಜೈನ್ ಒತ್ತಾಯಿಸಿದ್ದಾರೆ.

ಕಳಸ ಸಮೀಪದ ಅಂಬಾತೀರ್ಥಕ್ಕೆ ಹೋಗುವ ರಸ್ತೆಯ ಅಂಚಿನಲ್ಲಿ ಮಲಗಿಕೊಂಡಿದ್ದ ಜಾನುವಾರುಗಳನ್ನು ಐಶಾರಾಮಿ ಕಾರುಗಳನ್ನು ಬಂದ ಆರೋಪಿಗಳು ನಾಲ್ಕು ಜಾನುವಾರುಗಳನ್ನು ಕಾರುಗಳಲ್ಲಿ ಹಾಕಿಕೊಂಡು ಹೋಗಿದ್ದಾರೆ. ಈ ದೃಶ್ಯಗಳು ಸಮೀಪದಲ್ಲೇ ಇದ್ದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಕಳಸ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.