ಶ್ಯಾಮ್‌ಪ್ರಕಾಶ್ ಮುಖರ್ಜಿ ತತ್ವಾದರ್ಶ ಪಾಲಿಸಿ

ಕೆ.ಆರ್.ನಗರ: ಶ್ಯಾಮ್‌ಪ್ರಕಾಶ್ ಮುಖರ್ಜಿ ಅವರ ತ್ಯಾಗ ಮತ್ತು ಬಲಿದಾನದಿಂದ ಬಿಜೆಪಿ ಇಂದು ಉನ್ನತ ಸ್ಥಾನಕ್ಕೇರಿದ್ದು, ಅವರ ಸೇವೆಯನ್ನು ನಾವೆಲ್ಲರೂ ನಿರಂತರವಾಗಿ ಸ್ಮರಿಸಬೇಕು ಎಂದು ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಶ್ಯಾಮ್‌ಪ್ರಕಾಶ್ ಮುಖರ್ಜಿ ಅವರ ಬಲಿದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ತತ್ವದಾರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.

ನೆಹರು ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಮುಖರ್ಜಿ ಅವರು ಆ ಸರ್ಕಾರದ ಎರಡು ಕಾನೂನುಗಳನ್ನು ವಿರೋಧಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಹುಟ್ಟಿಗೆ ಕಾರಣರಾದರು. ಇಂದು ಬಿಜೆಪಿಯು ದೇಶಾದ್ಯಂತ ಪ್ರಜ್ವಲಿಸುತ್ತಿದ್ದು, ಜಗತ್ತಿನ ಗಮನ ಸೆಳೆದಿದೆ. ದೇಶಕ್ಕಾಗಿ ತಮ್ಮ ಜೀವವನ್ನು ಬಲಿದಾನ ಮಾಡಿದ ಆ ಮಹಾತ್ಮನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ನಾವೆಲ್ಲರೂ ಸಂಕಲ್ಪ ತೊಡಬೇಕಿದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಮಾತನಾಡಿದರು. ಪುರಸಭಾ ಸದಸ್ಯೆ ಕೆ.ಬಿ. ವೀಣಾ, ಬಿಜೆಪಿ ಮುಖಂಡರಾದ ಕಗ್ಗುಂಡಿ ಕುಮಾರ್, ಗೋಪಾಲರಾಜು, ಸಾ.ರಾ. ತಿಲಕ್ ಮಾತನಾಡಿದರು. ಬಿಜೆಪಿ ಮುಖಂಡಾದ ಮಧುವನಹಳ್ಳಿ ತಮ್ಮಣ್ಣ, ವೃಷಭೇಂದ್ರ, ಮಾಕರ್ಂಡೇಯ, ನಂಜುಂಡ, ಪಿ. ಶಂಕರ್, ದಾಕ್ಷಾಯಿಣಿ, ನಂಜೇಶ್, ಅಶ್ವತ್ಥ್, ಸುರೇಶ್, ಪದ್ಮಾವತಿ, ಸಿದ್ದಯ್ಯ, ಕೃಷ್ಣಯ್ಯ, ಮುಕ್ಕೋಟಿ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *