ಮೈಸೂರು ವಾರಿಯರ್ಸ್​ ಬಳ್ಳಾರಿ ಟಸ್ಕರ್ಸ್​ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ

ಹುಬ್ಬಳ್ಳಿ: ಇಲ್ಲಿನ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್​ ಟೂರ್ನಿಯ ಬಳ್ಳಾರಿ ಟಸ್ಕರ್ಸ್​ ಹಾಗೂ ಮೈಸೂರು ವಾರಿಯರ್ಸ್​ ನಡುವಿನ ಪಂದ್ಯಕ್ಕೆ ಮಳೆರಾಯನ ಅಡ್ಡಿಯಾಗಿದೆ.

ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿತ್ತು. ಬ್ಯಾಟಿಂಗ್​ ಆರಂಭಿಸಿದ ಬಳ್ಳಾರಿ ಟಸ್ಕರ್ಸ್​ 8 ಓವರ್​ಗಳಲ್ಲಿ 1 ವಿಕೆಟ್​ ನಷ್ಟಕ್ಕೆ 60 ರನ್​ ಗಳಿಸಿತ್ತು. ಈ ವೇಳೆ ಆಗಮಿಸಿದ ಮಳೆರಾಯನಿಂದ ಪಂದ್ಯಕ್ಕೆ ಅಡ್ಡಿಯುಂಟಾಗಿದ್ದು, ಮಳೆ ನಿಂತ ಮೇಲೆ ಪಂದ್ಯ ಮುಂದುವರಿಯುವ ಸಾಧ್ಯತೆ ಇದೆ. ಭಾನುವಾರವು ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿತ್ತು.