8ನೇ ಆವೃತ್ತಿ ಕೆಪಿಎಲ್ ಟ್ರೋಫಿ ಅನಾವರಣ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್​ಸಿಎ) ಆಶ್ರಯದ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಯ ಟ್ರೋಫಿಯನ್ನು ಮಂಗಳವಾರ ಅನಾವರಣಗೊಳಿಸಲಾಯಿತು.

ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕ್ರಿಕೆಟ್ ದಿಗ್ಗಜ ಬಿಎಸ್ ಚಂದ್ರಶೇಖರ್, ರಾಷ್ಟ್ರೀಯ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ನಟ ಸುದೀಪ್ ಟ್ರೋಫಿ ಅನಾವರಣಗೊಳಿಸಿದರು.

ಜಾದೂಗಾರ ಆಕರ್ಷ್ ಎಸ್ ಭಟ್ ವಿಶಿಷ್ಟವಾಗಿ ನಡೆಸಿದ ಕೊಟ್ಟ ಟ್ರೋಫಿ ಅನಾವರಣದ ಕಾರ್ಯಕ್ರಮ ಗಮನಸೆಳೆಯಿತು. ‘ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಿಗಲಿ. ಐಪಿಎಲ್​ಗೆ ಪ್ರವೇಶ ಪಡೆಯಲು ರಾಜ್ಯದ ಆಟಗಾರರಿಗೆ ಕೆಪಿಎಲ್ ವೇದಿಕೆಯಾಗಿದೆ’ ಎಂದು ಬಿಎಸ್ ಚಂದ್ರಶೇಖರ್ ಹೇಳಿದರು.

ಕೆಪಿಎಲ್ 3 ಆವೃತ್ತಿಗಳಲ್ಲಿ ರಾಕ್​ಸ್ಟಾರ್ಸ್ ತಂಡ ಮುನ್ನಡೆಸಿದ ನಟ ಸುದೀಪ್, ‘ಯುವ ಕ್ರಿಕೆಟಿಗರಿಗೆ ಉತ್ತೇಜನ ನೀಡುವ ಕೆಎಸ್​ಸಿಎ ಶ್ರಮ ನಿಜಕ್ಕೂ ಶ್ಲಾಘನೀಯ. ಇಂಥ ಲೀಗ್​ನಲ್ಲಿ ಆಡುವ ಅವಕಾಶ ಸಿಕ್ಕಿದ್ದೇ ನಮ್ಮ ಅದೃಷ್ಠ’ ಎಂದರು.

Leave a Reply

Your email address will not be published. Required fields are marked *