ಆಗಸ್ಟ್ 15ರಿಂದ 7ನೇ ಕೆಪಿಎಲ್

ಬೆಂಗಳೂರು: 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಗೆ ದಿನಗಣನೆ ಆರಂಭಗೊಂಡಿದೆ. ಆಗಸ್ಟ್ 15ರಿಂದ ಸೆಪ್ಟೆಂಬರ್ 9ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಪ್ರತಿ ಫ್ರಾಂಚೈಸಿಗೆ ಈ ಬಾರಿ ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಜತೆಗೆ ಹೊರ ರಾಜ್ಯದ ಆಟಗಾರರನ್ನು ಆಡಿಸುವ ಕುರಿತು ಬಿಸಿಸಿಐನಿಂದ ಅನುಮತಿ ಕೋರಲಾಗಿದೆ ಎಂದು ಕೆಎಸ್​ಸಿಎ ತಿಳಿಸಿದೆ. ಈ ಬಾರಿಯೂ ಹಿಂದಿನ ವರ್ಷ ಆಡಿದ 7 ಫ್ರಾಂಚೈಸಿಗಳೇ ಕಣಕ್ಕಿಳಿಯುತ್ತಿವೆ. ಜುಲೈ 20 ಅಥವಾ 21ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ ವಿಜಯವಾಣಿಗೆ ತಿಳಿಸಿದರು.