Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕೆಪಿಸಿಸಿ ನೂತನ ಸಾರಥಿಯಾಗಿ ದಿನೇಶ್ ಗುಂಡೂರಾವ್​ ಪದಗ್ರಹಣ

Wednesday, 11.07.2018, 4:42 PM       No Comments

<< ಸಂವಿಧಾನ ಬದಲಿಸುವ ಮಾತಾಡುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು: ಪರಂ >>

ಬೆಂಗಳೂರು: ಕೋಮು ಪ್ರಚೋದನೆ ನೀಡುವ, ಸಂವಿಧಾನವನ್ನೇ ಬದಲು‌ ಮಾಡುತ್ತೇನೆ ಎನ್ನುವ ಬಿಜೆಪಿಯನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್‌ನನ್ನು ಅಧಿಕಾರಕ್ಕೆ ತರುವ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಅರಮನೆ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ದೇಶ ಅಭದ್ರತೆಗೆ ಸಿಲುಕಿದೆ. ಕೇಂದ್ರದಲ್ಲಿ ಬಿಜೆಪಿ ಬಂದ ಮೇಲೆ ಸಾಮಾನ್ಯ ಪ್ರಜೆ ನೋವುಣ್ಣುತ್ತಿದ್ದಾನೆ.‌ ಮನಮೋಹನ್ ಸಿಂಗ್ ಅವರು ಆರ್ಥಿಕ‌ ಸ್ಥಿತಿಯನ್ನು ಸುಭದ್ರಗೊಳಿಸಿದ್ದರು. ಈಗ ಆರ್ಥಿಕತೆಯ ಬುನಾದಿಯೇ ಅಲ್ಲಾಡುವಂತಾಗಿದೆ. ಜಿಎಸ್‌ಟಿ, ನೋಟು‌ ಅಮಾನ್ಯೀಕರಣ, ಕಪ್ಪು ಹಣ ತರುವಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ವಿಫಲರಾಗಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕು,”ಎಂದರು.

ಐದು ಬಾರಿ ಶಾಸಕರಾಗಿ, ಸಚಿವರಾಗಿ, ಯುವ ಕಾಂಗ್ರೆಸ್, ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ದಿನೇಶ್​ ಗುಂಡೂರಾವ್‌ ಅವರು ಹೆಚ್ಚು ಅನುಭವ ಹೊಂದಿದ್ದಾರೆ. ಈಶ್ವರ್ ಖಂಡ್ರೆ ಕೂಡ ಶಾಸಕರಾಗಿ ಸಚಿವರಾಗಿ ಜಿಲ್ಲಾಧ್ಯಕ್ಷರಾಗಿ ಕೆಲಸ‌ ಮಾಡಿದ್ದಾರೆ. ಈ ಇಬ್ಬರು ಯುವನಾಯಕರು ಕೆಪಿಸಿಸಿ ನಾಯಕತ್ವ ವಹಿಸಿರುವುದು ಸಂತಸ ತಂದಿದೆ. ಅಷ್ಟೆ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ವಚು ಸ್ಥಾನ ಗೆಲ್ಲಿಸಿಕೊಂಡು ಬರಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ನಮ್ಮೆಲ್ಲರ ಶಕ್ತಿ, ಲಕ್ಷಾಂತರ ಕಾರ್ಯಕರ್ತರ ಶಕ್ತಿ ನಿಮಗಿಬ್ಬರಿಗೆ ಕೊಟ್ಟಿದ್ದೇವೆ. ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿ‌ ಕಟ್ಟಿ ಎಂದು ಪರಮೇಶ್ವರ್​ ಸಲಹೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್​ ಗುಂಡೂರಾವ್​, ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಅವರು ಅಧಿಕಾರ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್​, ಸಚಿವ ಡಿ.ಕೆ ಶಿವಕುಮಾರ್​, ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​ ಅವರು ಪಕ್ಷದ ಧ್ವಜ ನೀಡಿ ಇಬ್ಬರೂ ನೂತನ ನಾಯಕರಿಗೆ ಅಧಿಕಾರ ವಹಿಸಿದರು.

ಸೋನಿಯಾ ಕರೆ ಮಾಡಿದ್ದರು

2010ರ ಅಕ್ಟೋಬರ್ 19 ರಂದು ಸೋನಿಯಾ ಗಾಂಧಿ ಅವರು ಕರೆ ಮಾಡಿ, ಕೆಪಿಸಿಸಿ ಅಧ್ಯಕ್ಷ ಹುದ್ದೆ ವಹಿಸುತ್ತಿದ್ದೇನೆ. ಜವಾಬ್ದಾರಿ ಹೊತ್ತು ಪಕ್ಷ ಸಂಘಟನೆ ಮಾಡಿ ಎಂದರು. ನನಗೆ ನಂಬಲು ಆಗಲಿಲ್ಲ‌. ಈಗ ಏಳು ವರ್ಷ ಎಂಟು ತಿಂಗಳು ಹುದ್ದೆ ನಿಭಾಯಿಸಿದ್ದೇನೆ. ಎರಡು ಬಾರಿ ವಿಧಾನಸಭೆ, ಲೋಕಸಭೆ, ಸ್ಥಳೀಯ ಚುನಾವಣೆ, ಮರುಚುನಾವಣೆಯನ್ನು ಎದುರಿಸಿ ಹಲವು ಏಳುಬೀಳು ಕಂಡಿದ್ದೇವೆ. ಲಕ್ಷಾಂತರ ಕಾರ್ಯಕರ್ತರು , ನಾಯಕರು ನನಗೆ ಸಹಕಾರ ಕೊಟ್ಟಿದ್ದಾರೆ ಎಂದು ಪರಮೇಶ್ವರ್​ ತಿಳಿಸಿದರು.

ಮುಂದಿನ ಲೋಕಸಭೆಯಲ್ಲಿ‌ ಹೆಚ್ಚು ಸ್ಥಾನ ಗೆದ್ದು ರಾಹುಲ್ ಪ್ರಧಾನಿಯಾಗಲಿದ್ದಾರೆ ಎಂದೂ ಪರಮೇಶ್ವರ್​ ಅವರು ಭವಿಷ್ಯ ನುಡಿದರು.

ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿರ್ವಹಿಸಿದ ಡಾ.ಜಿ. ಪರಮೇಶ್ವರ್ ಅವರನ್ನು ಇದೇವೇಳೆ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

Back To Top