More

  ಕೊಟ್ಟೂರಿನಲ್ಲಿ ಪಾಲಿಷ್ ಮಾಡುವ ನೆಪದಲ್ಲಿ ಏಳು ತೊಲ ಚಿನ್ನ ಮಾಯ

  ಕೊಟ್ಟೂರು: ಪಾಲಿಷ್ ಮಾಡುವ ನೆಪದಲ್ಲಿ ಕಳ್ಳರಿಬ್ಬರು ಗುರುವಾರ ಏಳು ತೊಲ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹತ್ತಿರ ದಾಕ್ಷಾಯಿಣಮ್ಮ ಮೋಸ ಹೋದವರು. ಬುಧವಾರ ಪಾತ್ರೆಗಳನ್ನು ಪಾಲಿಷ್ ಮಾಡುವ ಪೌಡರ್ ಮಾರುತ್ತ ಬಂದ ಇಬ್ಬರು, ದಾಕ್ಷಾಯಿಣಮ್ಮ ಮನೆಯ ಕೆಲ ಪಾತ್ರೆ ಪಾಲಿಷ್ ಮಾಡಿ ನಾಳೆ ಮತ್ತೆ ಬರುವುದಾಗಿ ತಿಳಿಸಿ ಹೋಗಿದ್ದಾರೆ. ಮರುದಿನ ಬಂದವರಿಗೆ ದಾಕ್ಷಾಯಿಣಮ್ಮ ಪಾತ್ರೆಗಳೊಂದಿಗೆ ಐದು ತೊಲ ಚಿನ್ನದ ಸರ, ಎರಡು ತೊಲ ಬಂಗಾದ ಬಳೆ ನೀಡಿದ್ದಾರೆ. ಕಳ್ಳರು ಪಾಲಿಷ್ ಮಾಡುತ್ತಿರುವಂತೆ ನಟಿಸಿ ಮಾಲೀಕರ ಗಮನ ಬೇರೆಡೆ ಸೆಳೆದು, ನಕಲಿ ಚಿನ್ನ ಹಾಕಿ ನೀರು ಬಿಸಿ ಮಾಡಿ ಸ್ವಲ್ಪ ಹೊತ್ತಿನ ನಂತರ ತೆಗೆದು ನೋಡಿ ಎಂದು ತಿಳಿಸಿದ್ದಾರೆ. ಇದನ್ನು ನಂಬಿ ನೀರು ಬಿಸಿ ಮಾಡಲು ದಕ್ಷಾಯಿಣಮ್ಮ ಒಳ ಹೋಗುತ್ತಿದ್ದಂತೆ ಇಬ್ಬರು ಖದೀಮರು ಅಸಲಿ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts