More

    ಎಲ್ಲ ಸಮುದಾಯಗಳು ಸಮಾನ, ಯಾರ ವಿರುದ್ಧವೂ ಟೀಕೆ ಇಲ್ಲ

    ಕೋಲಾರ: ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಜಾತಿ ಪ್ರಮಾಣಪತ್ರ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದ್ದ ಕಾರಣ ಯಾವುದಾದರು ಒಂದು ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದಕ್ಕಾಗಿ ಕಾಂಗ್ರೆಸ್​ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ, ಎಲ್ಲ ಸಮುದಾಯಗಳನ್ನೂ ಗೌರವಿಸುತ್ತೇನೆ. ಆಕಾಶ, ಭೂಮಿ, ತಂದೆ & ತಾಯಿ, ಗಾಳಿ ಮತ್ತು ನೀರು ನನ್ನ ಕುಲವಾಗಿದೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.
    ತಾಲೂಕಿನ ದನಮಟ್ಟನಹಳ್ಳಿ, ತಲಗುಂದ, ಸಿಂಗನಹಳ್ಳಿ, ಪೆರ್ಜೇನಹಳ್ಳಿ, ಕುರುಬರಹಳ್ಳಿಗಳಲ್ಲಿ ಮಂಗಳವಾರ ಮತ ಯಾಚನೆ ಮಾಡಿ ಮಾತನಾಡಿದರು.
    ಸಿದ್ದರಾಮಯ್ಯ ಅವರು 2013ರಲ್ಲಿ ವರುಣಾದಿಂದ ಸ್ಪರ್ಧೆ ಮಾಡಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದ ಕಾರಣ ವರುಣಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬೇಕೆಂದು ಕೆಲವರು ಪಟ್ಟು ಹಿಡಿದಿದ್ದರೆ, ಇತ್ತ ಹೈಕಮಾಂಡ್​ ಸಹ ಅದೇ ಕ್ಷೇತ್ರದಿಂದಲೆ ಸ್ಪರ್ಧೆ ಮಾಡುವಂತೆ ಸೂಚಿಸಿದ್ದರಿಂದ ಕೋಲಾರದಿಂದ ನನ್ನನ್ನು ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರೇ ಸೂಚಿಸಿದ್ದರು. ಕುರುಬ ಸಮುದಾಯ ಸೇರಿ ಎಲ್ಲ ಸಮುದಾಯದವರು ಸಿದ್ದರಾಮಯ್ಯ ಅವರ ಮೇಲೆ ಇಟ್ಟಿರುವ ಗೌರವವನ್ನು ನನ್ನ ಮೇಲೂ ಇಟ್ಟು ಇಲ್ಲಿಂದ ಗೆಲ್ಲಿಸಿದರೆ ಸಿದ್ದರಾಮಯ್ಯನವರನ್ನೇ ಗೆಲ್ಲಿಸಿದಂತಾಗುತ್ತದೆ ಎಂದರು.
    ಕುರುಬ ಸಮುದಾಯದವರು ವರ್ತೂರು ಪ್ರಕಾಶ್​ಗೆ ಮತ ನೀಡಿದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಕುರಿತು ಕಾರ್ಯಕ್ರಮವೊಂದರಲ್ಲಿ ನೀಡಿದ ಭರವಸೆಗಳನ್ನು ನಾನು ಈಡೇರಿಸುತ್ತೇನೆ. ರಿಂಗ್​ರೋಡ್​, ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ, ಕೆ.ಸಿ.ವ್ಯಾಲಿ 3ನೇ ಹಂತದ ಶುದ್ಧೀಕರಣ, ಎತ್ತಿನಹೊಳೆ ಯೋಜನೆ ಸೇರಿ ಎಲ್ಲ ಭರವಸೆಗಳನ್ನು ಈಡೇರಿಸುವ ಜತೆಗೆ ಕೋಲಾರ ನಗರವನ್ನು ಹೈಟೆಕ್​ ಸಿಟಿಯಾಗಿ ಮಾಡುವುದಾಗಿ ಭರವಸೆ ನೀಡಿದರು. ನಾನು ಈಗಾಗಲೇ ಮುಳಬಾಗಿಲು ಕ್ಷೇತ್ರದಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ ಮುಳಬಾಗಿಲು ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿಪಡಿಸಿದ್ದೇನೆಯೋ ಅದೆೇ ರೀತಿ ಕೋಲಾರವನ್ನು ಅಭಿವೃದ್ಧಿಪಡಿಸಲಾಗುವುದು, ಶಾಸಕನಾಗಿಲ್ಲದ ಅವಧಿಯಲ್ಲೂ ಮುಳಬಾಗಿಲು ನಗರವನ್ನು ಅಭಿವದ್ಧಿಪಡಿಸಿದ್ದೇನೆ ಎಂದರು. ಕಾಂಗ್ರೆಸ್​, ಜೆಡಿಎಸ್​ ವಿನಾಕಾರಣ ನನ್ನ ಬಗ್ಗೆ ಟೀಕೆಗಳನ್ನು ಮಾಡುತ್ತಿವೆ. ನಾನು ಅವರ ಟೀಕೆಗಳಿಗೆ ಉತ್ತರ ನೀಡುವುದಿಲ್ಲ, ಜನರೇ ಮೇ 10ರಂದು ಉತ್ತರ ನೀಡುತ್ತಾರೆ. ತಳ ಸಮುದಾಯಗಳೊಂದಿಗೆ ಬೆಳೆದು ಬಂದವನು, ಹಾಗಾಗಿ ಎಲ್ಲ ಸಮುದಾಯಗಳನ್ನು ಗೌರವದಿಂದ ಕಾಣುತ್ತೇನೆ ಎಂದರು.
    ಡಿಸಿಸಿ ಬ್ಯಾಂಕ್​ ನಿರ್ದೇಶಕ ನಾಗನಾಥ ಸೋಮಣ್ಣ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಉದಯ ಶಂಕರ್​, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್​, ವೇಮಗಲ್​
    ಚಿಕ್ಕಣ್ಣ, ಶಾಸಕ ಶ್ರೀನಿವಾಸಗೌಡರ ಪುತ್ರ ಮಂಜುನಾಥ್​, ಚೋಡದೇನಹಳ್ಳಿ ಸಂತೋಷ್​, ವೇಮಗಲ್​ ವೆಂಕಟೇಶ್​ಗೌಡ, ಪೆರ್ಜೇನಹಳ್ಳಿ ನಾಗೇಶ್​, ಕುರುಬರಹಳ್ಳಿ ಕೃಷ್ಣಪ್ಪ, ಶಿಂಗೇಹಳ್ಳಿ ಮೂರ್ತ್ಯಪ್ಪ ಇದ್ದರು.

    ಕ್ಷೇತ್ರದಲ್ಲಿ ಕಾಂಗ್ರೆಸ್​ ಬಲಿಷ್ಠ: ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್​ ಬಲಿಷ್ಠವಾಗಿದೆ. ಸಿದ್ದರಾಮಯ್ಯನವರೇ ಕೊತ್ತೂರು ಮಂಜುನಾಥ್​ ಅವರನ್ನು ಅಭ್ಯರ್ಥಿಯಾಗಿ ಕೋಲಾರಕ್ಕೆ ಕಳುಹಿಸಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಬೇಕು. ಕಾಂಗ್ರೆಸ್​ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಿದೆ ಎಂದು ಎಂಎಲ್​ಸಿ ಎಂ.ಎಲ್​.ಅನಿಲ್​ಕುಮಾರ್​ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts