ವರ್ಷವಾದರೂ ಬಾಡಿಗೆ ನೀಡದ ಗ್ರಾಪಂ, ತಹಸೀಲ್ದಾರ್‌ಗೆ 30 ಟ್ರ್ಯಾಕ್ಟರ್ ಮಾಲೀಕರ ದೂರು

ಇಒ, ರಾಂಪುರ ಪಿಡಿಒಗೆ ಕರೆ ಮಾಡಿ ಪಾವತಿಸಲು ಸೂಚನೆ

ಕೊಟ್ಟೂರು: ರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ವರ್ಷವಾದರೂ ಬಾಡಿಗೆ ನೀಡಿಲ್ಲವೆಂದು ಆರೋಪಿಸಿ ಟ್ರ್ಯಾಕ್ಟರ್ ಮಾಲೀಕರು ಶನಿವಾರ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ದೂರು ನೀಡಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಕೊಟ್ಟೂರು ಕೆರೆ, ಭೀಮನ ಕೆರೆ ಹೂಳು ಎತ್ತಲು ಬೋರನಹಳ್ಳಿ, ರಾಂಪುರ, ಸುಂಕದಕಲ್ಲು, ಸುಟ್ಟಕೋಡಿಹಳ್ಳಿ ಗ್ರಾಮದ 30 ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ, ವರ್ಷದಿಂದ ಬಾಡಿಗೆ ನೀಡದೆ ಗ್ರಾಪಂ ಆಡಳಿತ ಸತಾಯಿಸುತ್ತಿದೆ. ಈ ಕುರಿತು ಕ್ರಮಕೈಗೊಳ್ಳದಿದ್ದರೆ ತಹಸಿಲ್ ಕಚೇರಿ ಮುಂದೆ ಸೆ.9ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ತಹಸೀಲ್ದಾರ್ ಅನಿಲ್‌ಕುಮಾರ್, ತಾಪಂ ಇಒ ಬಸಣ್ಣ ಹಾಗೂ ಗ್ರಾಪಂ ಪಿಡಿಒ ಶಶಿಧರ್‌ಗೆ ಕರೆ ಮಾಡಿ ಬಾಡಿಗೆ ಸಂದಾಯ ಮಾಡುವಂತೆ ಸೂಚಿಸಿದರು. ಸೋಮವಾರದೊಳಗೆ ಬಾಡಿಗೆ ಪಾವತಿಸದಿದ್ದರೆ ಸೆ.11ರಿಂದ ಧರಣಿ ನಡೆಸಲಾಗುವುದು ಎಂದು ಟ್ರಾೃಕ್ಟರ್ ಮಾಲೀಕರು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *