ಲಿಂಗ ತಾರತಮ್ಯ ಸಲ್ಲದು

ಉಜ್ಜಯಿನಿ ಶ್ರೀಗಳ ಹೇಳಿಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 34 ಜೋಡಿ
ಕೊಟ್ಟೂರು:
ನಿಮಗೆ ಸಂಸ್ಕಾರವಂತ ಮಗ-ಮಗಳು ಜನಿಸಲಿ. ಹೆಣ್ಣು-ಗಂಡು ಎಂಬ ಭೇದ ಮಾಡದೆ ಸಮಾಜಕ್ಕೆ ಸತ್ಪ್ರಜೆ ಹಾಗೂ ದೇಶ ಭಕ್ತ ಮಕ್ಕಳು ನಿಮ್ಮವಾಗಲಿ ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ನೂತನ ದಂಪತಿಗಳಿಗೆ ಆಶೀರ್ವದಿಸಿದರು.

ಉಜ್ಜಯನಿ ಸದ್ಧರ್ಮ ಪೀಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಮಾತನಾಡಿದರು. ಶ್ರೀಗಳು, ಪಂಚ ಪೀಠಾಧೀಶ್ವರರು ಹಾಗೂ ಶಾಖಾಪೀಠಾಚಾರ್ಯರ ಆಶೀರ್ವಾದ ನಿಮ್ಮ ಮೇಲಿದೆ ಎಂದರು.

ಕಲ್ಕೇರಿ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರು ಬಡವರು ಎಂಬ ಮೂದಲಿಕೆ ಇದೆ. ಇದು ತಪ್ಪು ಕಲ್ಪನೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರು ಸೌಭಾಗ್ಯವಂತರು ಎಂದರು. ಕೊಟ್ಟೂರು ತಾಲೂಕು ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಉಜ್ಜಯಿನಿ ರುದ್ರಪ್ಪ ಮತ್ತು ಹಾಸ್ಯ ಸಾಹಿತಿ ಜಗನ್ನಾಥ ಮಾತನಾಡಿದರು.
ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಠದ ಮಲ್ಲಿಕಾರ್ಜುನ ಸ್ವಾಮಿ, ಚಾಮರಾಜ ನಗರದ ಶಿವಮೂರ್ತಿ ಸ್ವಾಮೀಜಿ, ಮಹಾರಾಷ್ಟ್ರದ ದಂಡಗುಂಡ ಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರದ ಮನೀಂದ್ರ ಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.
ತಾಪಂ ಸದಸ್ಯೆ ಅಕ್ಕಮ್ಮ ರಂಗಪ್ಪ, ಗ್ರಾಪಂ ಅಧ್ಯಕ್ಷ ಮರಿಯಮ್ಮ ಅಂಜಿನಪ್ಪ, ಗ್ರಾಪಂ ಉಪಾಧ್ಯಕ್ಷೆ ಕಜ್ಜೆರ್ ಗೌರಮ್ಮ, ವಕೀಲ ಮರುಳ ಸಿದ್ದಪ್ಪ, ಎ.ಎಂ.ಚನ್ನವೀರಸ್ವಾಮಿ, ಮಠದ ಸಹ ವ್ಯವಸ್ಥಾಪಕ ವೀರೇಶ್, ನಟರಾಜ್, ರವಿಕುಮಾರ್ ಇದ್ದರು. ಶಿಕ್ಷಕ ಜೋಷಿ ನಿರೂಪಿಸಿ ವಂದಿಸಿದರು.
ಕೋಟ್=========
ಮಹಿಳೆಯರು ಹೊಸ್ತಿಲು ದಾಟಿದ ಮನೆಗೆ ಹಣ್ಣಾಗಬೇಕೆ, ಹೊರತು ಹುಣ್ಣಾಗಬಾರದು ಎಂದು ಜಾನಪದ ನುಡಿಯಿದೆ. ಅತ್ತೆ ಮನೆಗೆ ಬರುವ ಸೊಸೆ ಮನೆಯ ಭಾಗವಾಗಿ ಇರಬೇಕೆ ಹೊರತು ಮನೆ ಭಾಗ ಮಾಡುವಂತಿರಬಾರದು. ಮನೆಗೆ ಬಂದ ಸೊಸೆ ಅತ್ತೆ ಮಾವನನ್ನು ತಂದೆ-ತಾಯಿಯಂತೆ ನೋಡಿಕೊಂಡಾಗ ಆಕೆಯ ಹೆತ್ತವರಿಗೆ ಕೀರ್ತಿ ಬರುತ್ತದೆ.
ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ
ಉಜ್ಜಯಿನಿ ಪೀಠ