ಪ್ರಯಾಣಿಕರ ದಾಹ ತಣಿಸುವ ಆಟೋ ಚಾಲಕ

ಎರಡು ವರ್ಷದಿಂದ ಕೊಟ್ರೇಶ ಅಳಿಲು ಸೇವೆ

ಕೊಟ್ಟೂರು: ಬಿಸಿಲಿನಲ್ಲಿ ಬಸವಳಿದು ಬಂದು ಆಟೋ ಹತ್ತುವ ಪ್ರಯಾಣಿಕರಿಗೆ ಸಿಹಿ ನೀರು ನೀಡಿ, ದಾಹ ತಣಿಸುವ ಆಟೋ ಚಾಲಕ ಬೂದಿ ಕೊಟ್ರೇಶ ಇತರ ಚಾಲಕರಿಗೆ ಮಾದರಿಯಾಗಿದ್ದಾರೆ. ಎರಡು ವರ್ಷಗಳಿಂದ ನಗರದಲ್ಲಿ ಆಟೋ ಓಡಿಸುವ ಬೂದಿ ಕೊಟ್ರೇಶ ಬೇಸಿಗೆ ಸಂದರ್ಭದಲ್ಲಿ ತನ್ನ ಆಟೋದಲ್ಲಿ ಸಿಹಿ ನೀರಿನ ಕ್ಯಾನ್ ಇಟ್ಟಿಕೊಂಡಿರುತ್ತಾರೆ. ಪ್ರಾಯಾಣಿಕರು ಅಷ್ಟೇ ಅಲ್ಲ, ನೀರಿನ ದಾಹ ಎಂದವರಿಗೆ ಕರೆದು ನೀರು ಕೊಡುತ್ತಾರೆ.

ಪ್ರತಿ ದಿನ ಶುದ್ಧ ಕುಡಿವ ನೀರಿನ ಘಟಕಕ್ಕೆ ಹೋಗಿ, ಹಣ ನೀಡಿ ನೀರಿನ ಕ್ಯಾನ್‌ನ್ನು ತುಂಬಿಸಿಕೊಂಡು ಬರುತ್ತಾರೆ. ದಿನಕ್ಕೆ ಕನಿಷ್ಠ ಹತ್ತು ಕ್ಯಾನ್ ನೀರು ಖಾಲಿಯಾಗುತ್ತದೆ. ಪ್ರಯಾಣಿಕರನ್ನು ಆಟೋದಲ್ಲಿ ಕರೆದುಕೊಂಡು ಹೋಗುವಾಗ ಬಾಯಾರಿಕೆ ಎಂದರೆ ಅವರಿಗೆ ನೀರು ಕೊಟ್ಟು ದಾಹ ತಣಿಸುತ್ತಾರೆ. ತಮ್ಮ ಈ ವಿಶಿಷ್ಟ ಸೇವೆಯಿಂದಾಗಿ ನೀರ್ ಕೊಟ್ರೇಶ ಎಂದು ಪಟ್ಟಣದಲ್ಲಿ ಮನೆ ಮಾತಾಗಿದ್ದಾರೆ.