ಖೋಖೋ ಫೆಡರೇಷನ್ ಪರೀಕ್ಷೆ, ಕೊಟ್ಟೂರಿನ ಶಿಕ್ಷಕ ಟಿ.ಕರಿಬಸಪ್ಪ ಸಾಧನೆ 

ಕೊಟ್ಟೂರು: ರಾಷ್ಟ್ರ ಮಟ್ಟದ ಖೋಖೋ ಸ್ಪರ್ಧೆಯ ತೀರ್ಪುಗಾರರ ಆಯ್ಕೆಗೆ ಕೇಂದ್ರ ಸರ್ಕಾರದ ಖೋಖೋ ಫೆಡರೇಷನ್ ಆಫ್ ಇಂಡಿಯಾದಿಂದ ನಡೆದ ಪರೀಕ್ಷೆಯಲ್ಲಿ ಪಟ್ಟಣದ ರಾಜೀವ್‌ಗಾಂಧಿ ನಗರದ ಸಹಿಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಟಿ.ಕರಿಬಸಪ್ಪ ತೇರ್ಗಡೆಯಾಗಿದ್ದಾರೆ.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಪರೀಕ್ಷೆಗೆ ರಾಜ್ಯದ 600 ದೈಹಿಕ ಶಿಕ್ಷಣ ಶಿಕ್ಷಕರು ಹಾಜರಾಗಿದ್ದರು. ಈ ಪೈಕಿ 79 ದೈಹಿಕ ಶಿಕಣ ಶಿಕ್ಷಕರು ತೇರ್ಗಡೆಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ಏಕೈಕ ದೈಹಿಕ ಶಿಕ್ಷಣ ಶಿಕ್ಷಕ ಎಂಬ ಹಿರಿಮೆಗೆ ಟಿ.ಕರಿಬಸಪ್ಪ ಪಾತ್ರರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಶಿಕ್ಷಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖೋ ಖೋ ಸ್ಪರ್ಧೆಯ ತೀರ್ಪುಗಾರರಾಗಿ ಇಲ್ಲ ಕ್ರೀಡಾಧಿಕಾರಿಯಾಗಿ ನೇಮಕವಾಗುತ್ತಾರೆ. ಕೇಂದ್ರ ಸರ್ಕಾರ ನಾಲ್ಕು ವರ್ಷಕ್ಕೊಮ್ಮೆ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ಟಿ.ಕರಿಬಸಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *