ಮೇವು ಬ್ಯಾಂಕ್‌ಗೆ ತಹಸೀಲ್ದಾರ್ ಚಾಲನೆ: ಕೊಟ್ಟೂರಿಗೆ 8 ಟನ್ ಮೇವು ಪೂರೈಕೆ

ಕೊಟ್ಟೂರು : ಬರಗಾಲ ಹಿನ್ನೆಲೆಯಲ್ಲಿ ಕೊಟ್ಟೂರು ತಾಲೂಕಿನ ಜಾನುವಾರುಗೆ 800 ಟನ್ ಮೇವಿನ ಅಗತ್ಯವಿದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು.

ಪಟ್ಟಣದ ರಾಜೀವ್ ನಗರದ ಪಂಪ್ ಹೌಸ್‌ನಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಸದ್ಯ ಬ್ಯಾಂಕ್‌ಗೆ 8 ಟನ್ ಮೇವು ಪೂರೈಕೆಯಾಗಿದ್ದು, ಇನ್ನೂ ಬರಲಿದೆ. ಒಂದು ಜಾನುವಾರುಗೆ ದಿನಕ್ಕೆ ಐದು ಕೆಜಿಯಂತೆ ಮೇವು ವಿತರಿಸಲಾಗುವುದು. ಒಂದು ಕೆಜಿಗೆ ರೈತರು 2 ರೂ. ಪಾವತಿಸಬೇಕು. ಕೊಟ್ಟೂರು ಪಟ್ಟಣ ಸೇರಿ ಹೋಬಳಿ ವ್ಯಾಪ್ತಿ ರೈತರು ಮೇವಿನ ಅರ್ಜಿಯಲ್ಲಿ ಜಾನುವಾರು ಸಂಖ್ಯೆ ನಮೂದಿಸಿ ಪಶು ವೈದ್ಯರಿಂದ ದೃಢೀಕರಿಸಿ ಮೇವು ಬ್ಯಾಂಕ್‌ಗೆ ನೀಡಿದರೆ, ಮೇವು ನೀಡಲಾಗುವುದು. ಮೇ 20 ರಂದು ಉಜ್ಜಯಿನಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲಾಗುವುದು ಎಂದರು.

ಪಶು ವೈದ್ಯಾಧಿಕಾರಿ ರವಿಪ್ರಕಾಶ ಕಿತ್ತೂರು. ಕಂದಾಯ ಪರಿವೀಕ್ಷಕ ನಾಗರಾಜ್, ಗ್ರಾಮ ಲೆಕ್ಕಾಧಿಕಾರಿ ತಿಪ್ಪಜ್ಜಿ ಶರಣಪ್ಪ, ಬಸಮ್ಮ, ಪಶು ಇಲಾಖೆಯ ಯೋಗೀಶ್ವರ ದಿನ್ನೆ, ಮಲ್ಲಿಕಾರ್ಜುನ ಇತರರಿದ್ದರು.

Leave a Reply

Your email address will not be published. Required fields are marked *