ಭಕ್ತರು ಪ್ರಸಾದ ಸ್ವೀಕರಿಸಲು ಸ್ಥಳದ ಕೊರತೆ

ಕೊಟ್ಟೂರು: ಭೀಮನ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದ ಬಳಿಕ ಪ್ರಸಾದ ಸ್ವೀಕರಿಸಲು ಸ್ಥಳದ ಕೊರತೆಯಿಂದ ನೂಕುನುಗ್ಗಲು ಉಂಟಾಗಿ ತೊಂದರೆ ಅನುಭವಿಸಿದರು.

ಅಮಾವಾಸ್ಯೆ ಹಾಗೂ ಭಾನುವಾರ ರಜೆ ಕಾರಣಕ್ಕೆ ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ದೇವಾಲಯ ಹಿಂಭಾಗ ದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದು, ಸ್ಥಳ ಚಿಕ್ಕದಾಗಿರುವುದರಿಂದ ತಟ್ಟೆ ಹಿಡಿದು ನಿಲ್ಲುವ ಮಕ್ಕಳು, ಮಹಿಳೆಯರು, ಪುರುಷರು ಮಧ್ಯೆ ತಳ್ಳಾಟ ನೂಕಾಟ ಏರ್ಪಟ್ಟಿತ್ತು.

ಪ್ರತಿ ಸೋಮವಾರ, ಗುರುವಾರ, ಅಮಾವಾಸ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ನೂರಾರು ಜನರು ಸೇರಬೇಕಾದ ಜಾಗದಲ್ಲಿ ಐದರಿಂದ ಹತ್ತು ಸಾವಿರ ಭಕ್ತರು ಆಗಮಿಸುವುದರಿಂದ ಕುಳಿತು ಊಟ ಮಾಡಲು ಸ್ಥಳವಿಲ್ಲದೆ ನಿಂತುಕೊಂಡೇ ಪ್ರಸಾದ ಸ್ವೀಕರಿಸಬೇಕಿದೆ.

ಭಾನುವಾರ ಬೆಳಗ್ಗೆ ಭಕ್ತರು ಫರ್ಲಾಂಗ ದೂರ ಸರದಿಯಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ದೇವಾಲಯದ ಎಡಭಾಗದಲ್ಲಿ ಮಹಿಳೆಯರು ಸಾಲಾಗಿ ಬರಲು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಬಲಭಾಗದ ಪುರಷರ ಸರದಿಯಲ್ಲಿ ನೆರಳಿನ ವ್ಯವಸ್ಥೆ ಇಲ್ಲವಾಗಿದ್ದು, ಅವ್ಯವಸ್ಥೆ ಕೂಡಿದೆ.

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಾಲಯ ಎ ಶ್ರೇಣಿಗೆ ಸೇರಿದ್ದಾಗಿದೆ. ಪ್ರತಿ ವರ್ಷ ಕೋಟಿ ರೂ. ಹೆಚ್ಚು ಕಾಣಿಕೆ ಬರುತ್ತದೆ. ಆದರೆ ಸ್ವಾಮಿ ದರ್ಶನ ಪಡೆದು ನೆಮ್ಮದಿಯಾಗಿ ಪ್ರಸಾದ ಸ್ವೀಕರಿಸಲು ಸ್ಥಳ ಇಲ್ಲವಾಗಿದ್ದು, ತಕ್ಷಣ ವ್ಯವಸ್ಥೆ ಮಾಡಬೇಕೆಂಬ ಒತ್ತಾಯ ಭಕ್ತರದ್ದಾಗಿದೆ.

ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ಸೋಮವಾರ ಮತ್ತು ಗುರುವಾರ ನಾಲ್ಕೈದು ಸಾವಿರ ದಾಟಿದರೆ, ಅಮಾವಾಸ್ಯೆಗೆ ಎಂಟರಿಂದ ಹತ್ತು ಸಾವಿರ ಭಕ್ತರು ಆಗಮಿಸುತ್ತಾರೆ. ಧಾರ್ಮಿಕ ದತ್ತಿ ಇಲಾಖೆಯಿಂದ ಭಕ್ತರಿಗೆ ಪ್ರತಿ ದಿವಸ ಎರಡು ಸಾರಿ ಪ್ರಸಾದ ವ್ಯವಸ್ಥೆ ಇರುತ್ತದೆ. ಆದರೆ ಪ್ರಸಾದ ವಿತರಿಸಲು ಸ್ಥಳದ ಕೊರತೆ ಇದ್ದು, ಜಿಲ್ಲಾಧಿಕಾರಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರ ಗಮನಕ್ಕೆ ತರಲಾಗಿದೆ.
ಪಿ.ಶಾಂತಮ್ಮ
ಇಒ, ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…