ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕೊಟ್ಟೂರು: ಸಮೀಪದ ಮಂಗನಹಳ್ಳಿ ರೈತ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಡ್ಡಿಜಾತಪ್ಪ(48)ಮೃತ. ಟ್ರಾೃಕ್ಟರ್ ಖರೀದಿಗೆ ಗಡ್ಡಿಜಾತಪ್ಪ ತೂಲಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು. ಅದಾಗಲೇ ಜಮೀನು ಬ್ಯಾಂಕ್‌ಗೆ ವರ್ಗಾವಣೆಯಾಗಿತ್ತು. ಖಾಸಗಿಯಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು. ಸತತ 5 ವರ್ಷದಿಂದ ಆವರಿಸಿದ ಬರದಿಂದ ಸಾಲದ ಮೊತ್ತ 20 ಲಕ್ಷ ರೂ.ಗೆ ತಲುಪಿತ್ತು. ಬ್ಯಾಂಕ್ ನೀಡಿದ ಸಾಲ ಮರು ಪಾವತಿ ನೊಟೀಸ್‌ಗೆ ಹೆದರಿ ಸೋಮವಾರ ಮಧ್ಯೆ ರಾತ್ರಿ ಜಮೀನಿಗೆ ತೆರಳಿ ಗಡ್ಡಿಜಾತಪ್ಪ ನೇಣು ಹಾಕಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಹೊಲಕ್ಕೆ ಹೋದವರು ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಮೃತರ ಪತ್ನಿ ಗಡ್ಡಿ ಕೊಟ್ರಮ್ಮ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತರಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಮಂಗಳವಾರ ಮೃತರ ಅಂತ್ಯಕ್ರಿಯೆ ನಡೆದಿದೆ.