ಕೊಟ್ಟೂರು: ಪಟ್ಟಣದ ಬಿಕ್ಕಿ ಮರಡಿ ಜರುಮಲೆ ದುರ್ಗಾಂಬಿಕಾ ದೇವಿ ಉತ್ಸವಕ್ಕೆ ಸುಮಾರು 20 ಅಡಿ ಎತ್ತರದ ರಥ ನಿರ್ಮಾಣ ಕಾರ್ಯಕ್ಕೆ ಸಾರಂಗ ಮಠದ ರವೀಂದ್ರನಾಥ ಸ್ವಾಮಿ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಹಳೇ ರಥ ದುರಸ್ತಿಯಲ್ಲಿರುವ ಕಾರಣ ನೂತನ ಗಡ್ಡಿ ರಥ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿತ್ತು. ಅದರಂತೆ ಕೆಲಸ ಆರಂಭಿಸಲಾಗಿದೆ. ಮತ್ತಿಹಳ್ಳಿ ಗ್ರಾಮದ ವೀರಭದ್ರಾಚಾರಿ ಮತ್ತು ಮೊನಚಾರಿ ಅವರಿಗೆ ರಥ ನಿರ್ಮಾಣದ ಕೆಲಸ ವಹಿಸಲಾಗಿದೆ. ಪ್ರತಿ ವರ್ಷ ಆಗಿ ಹುಣ್ಣಿಮೆಗೆ ದೇವಿ ರಥೋತ್ಸವ ನಡೆಯಲಿದೆ. ಈ ಬಾರಿ ಪಟ್ಟಣದಲ್ಲಿ ನೂತನ ರಥದೊಂದಿಗೆ ಜಾತ್ರೆ ನಡೆಯಲಿದೆ ಎಂದು ದೈವಸ್ಥರು ತಿಳಿಸಿದರು. ಕೂಡ್ಲಿಗಿ ಮುದ್ದಪ್ಪ, ಪಾಪಜ್ಜರ ಮೂಗಪ್ಪ, ಪಕ್ಕೀರಪ್ಪ, ರಾಂಪುರ ಮೂಗಪ್ಪ, ಜಿ.ನಾಗರಾಜಪ್ಪ, ಬಿ.ಮಲ್ಲಿಕಾರ್ಜುನ, ಕುರುಬರ ಸಿದ್ಲಿಂಗಪ್ಪ, ಓಬಣ್ಣ, ಕೋವಿ ವೀರಣ್ಣ ಇತರರಿದ್ದರು.