More

    ಕೊಟ್ಟೂರು ಅಂಚೆ ಕಚೇರಿಗೆ 3500 ರಾಷ್ಟ್ರಧ್ವಜ ಬುಕ್ಕಿಂಗ್

    ಕೊಟ್ಟೂರು: ಪಟ್ಟಣದ ನಗರ ಬಿಜೆಪಿ ಘಟಕ ಜನರಿಗೆ ಸ್ವಾತಂತ್ರ್ಯೋತ್ಸವದ ಜಾಗೃತಿ ಮೂಡಿಸಲು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಸದುದ್ದೇಶದಿಂದ ಚಿತವಾಗಿ ಹಂಚಲು ಇಲ್ಲಿನ ಮುಖ್ಯ ಅಂಚೆ ಕಚೇರಿಯಲ್ಲಿ 3500 ರಾಷ್ಟ್ರ ಧ್ವಜಗಳನ್ನು ಖರೀದಿಸಲು ಬೇಡಿಕೆ ಇಟ್ಟಿದೆ.

    ಒಂದು ಧ್ವಜಕ್ಕೆ 25 ರೂ. ಒಟ್ಟು 3500 ರಾಷ್ಟ್ರ ಧ್ವಜಕ್ಕೆ 75 ಸಾವಿರ ರೂ.ನಗರ ಬಿಜೆಪಿ ಘಟಕದಿಂದ ಹಣ ಸಂಗ್ರಹಿಸಿ ಅಂಚೆ ಕಚೇರಿಗೆ ಸಂದಾಯ ಮಾಡಲಾಗಿದೆ.

    ನಗರ ಬಿಜೆಪಿ ಅಧ್ಯಕ್ಷ ನಂದಿ ಬಿ.ಆರ್. ವಿಕ್ರಂ, ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಗಸ್ಟ್ 14ರಂದು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 100 ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಬೈಕ್ ರ‌್ಯಾಲಿಯು ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತೇರು ಬಯಲು ಬಸವೇಶ್ವರ ದೇವಸ್ಥಾನ ಮುಂದೆ ಮುಕ್ತಾಯಗೊಳ್ಳಲಿದೆ. ಪಟ್ಟಣದ 20 ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ಗೆ 50 ರಾಷ್ಟ್ರಧ್ವಜವನ್ನು ಆಸಕ್ತರಿಗೆ ವಿತರಿಸುತ್ತಿದ್ದು, ಅವರು ತಮ್ಮ ಮನೆಯ ಮೇಲೆ ಧ್ವಜವನ್ನು ಹಾರಿಸಲಿದ್ದಾರೆ ಎಂದರು.

    ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಎಂ. ರಾಜಶೇಖರ್, ಸಬ್ ಪೋಸ್ಟ್ ಮಾಸ್ಟರ್ ಸತೀಶ, ಅಂಚೆ ಇಲಾಖೆ ಆರಂಭದಲ್ಲಿ ಪ್ರಚಾರಕ್ಕೆ ಕೇವಲ ಆರು ರಾಷ್ಟ್ರಧ್ವಜಗಳನ್ನು ಕಳುಹಿಸಿತ್ತು. ನಂತರ 500 ಧ್ವಜಗಳನ್ನು ಕಳುಹಿಸಿತ್ತು. ಈಗ ಕೇವಲ ಐದು ಉಳಿದಿವೆ ಎಂದರು.

    ಚಪ್ಪರದಹಳ್ಳಿ ಸರ್ಕಾರಿ ಶಾಲೆಯಿಂದ 500 ಧ್ವಜಕ್ಕೆ ಬೇಡಿಕೆ ಬಂದಿದೆ. ಅಂಚೆ ಕಚೇರಿಯಲ್ಲಿ ಧ್ವಜ ಮಾರಾಟ ಯಶಸ್ವಿಯಾಗಿದ್ದು, ಬೇಡಿಕೆಯೂ ಹೆಚ್ಚಿದೆ. ಇಲಾಖೆಗೆ ಧ್ವಜ ಮಾರಾಟದಿಂದ ಹೆಚ್ಚಿನ ಲಾಭ ಬಾರದೇ ಇರಬಹುದು. ಆದರೆ ಜನರಿಗೆ ಸೇವೆ ಒದಗಿಸುವಲ್ಲಿ ಅಂಚೆ ಇಲಾಖೆಯೂ ತೃಪ್ತಿ ಪಡುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts