More

    ಕೃಷಿ ಉತ್ಪನ್ನ ಸಂಘಕ್ಕೆ ಗೋದಾಮು ಒಪ್ಪಿಸಿ

    ಕೊಟ್ಟೂರು: ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಒಳಪಟ್ಟ ಇಲ್ಲಿನ ಎಪಿಎಂಸಿ ಆವರಣದ ಒಳಗಿರುವ ಎರಡು ಗೋದಾಮುಗಳನ್ನು ತಕ್ಷಣವೇ ನಮ್ಮ ಸುಪರ್ದಿಗೆ ನೀಡಬೇಕೆಂದು ಸಂಘದ ಅಧ್ಯಕ್ಷ ಕೆ.ಎಸ್.ಈಶ್ವರಗೌಡ ಒತ್ತಾಯಿಸಿದರು.

    ಪಟ್ಟಣದ ಸಂಘದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೂರನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

    ಈ ಮೊದಲು ಕೂಡ್ಲಿಗಿ ತಾಲೂಕಿಗೆ ಕೊಟ್ಟೂರು ಸೇರಿದ್ದಾಗ ಮೂರೂವರೆ ದಶಕಗಳ ಹಿಂದಿದ್ದ ಕೂಡ್ಲಿಗಿ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಕೊಟ್ಟೂರು ಎಪಿಎಂಸಿ ಆವರಣದಲ್ಲಿ ಬೃಹತ್ ಎರಡು ಗೋದಾಮುಗಳನ್ನು ನಿರ್ಮಿಸಿತ್ತು. ಕಾರಣಾಂತರದಿಂದ ಸಂಘ 1982/83ರಲ್ಲಿ ರದ್ದಾದ ಪ್ರಯುಕ್ತ ಸರ್ಕಾರ ವಶಪಡಿಸಿಕೊಂಡಿತು. ಆಹಾರ ಧಾನ್ಯಗಳ ಸಂಗ್ರಹಕ್ಕೆ ಇಲಾಖೆಗೆ ಮಾಸಿಕ ಕೇವಲ 1200 ರೂ. ಬಾಡಿಗೆ ನೀಡಿದ್ದು. ಈಗಲೂ ಅದೇ ಬಾಡಿಗೆ ಮುಂದುವರೆದಿದೆ.

    ಇದನ್ನೂ ಓದಿ: ವಾರದ ಏಳೂ ದಿನ ಕೃಷಿ ಉತ್ಪನ್ನ ಖರೀದಿಸಿ: ಕುಕನೂರಿನಲ್ಲಿ ಎಪಿಎಂಸಿ ಅಧಿಕಾರಿಗೆ ರೈತ ಸಂಘ ಮನವಿ

    ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗೋದಾಮುಗಳ ಮುಂದೆ ನಿರಶನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೆ ಸದಸ್ಯರಿಂದ ಒಕ್ಕೊರಲಿನ ಒಪ್ಪಿಗೆ ದೊರೆಯಿತು. ಅಲ್ಲದೆ ಸಭೆಯಲ್ಲಿ ಗೊತ್ತುವಳಿ ಮಂಡಿಸಲಾಯಿತು.

    ಸಂಘದ ಮೂಲಕ 2021-22ನೇ ಸಾಲಿನಲ್ಲಿ ರಸಗೊಬ್ಬರ ಮಾರಾಟದಿಂದ 1.26 ಲಕ್ಷ ರೂ. ಲಾಭ ಬಂದಿದೆ. ಮುಂದಿನ ವರ್ಷ ಈ ಲಾಭ ಹೆಚ್ಚಾಗಲಿದೆ ಎಂದ ಅವರು. ಸಂಘದಿಂದ ಪೆಟ್ರೋಲ್ ಬಂಕ್. ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗುವುದು ಎಂದು ಈಶ್ವರಗೌಡ ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

    ಸಂಘದ ಉಪಾಧ್ಯಕ್ಷ ನಿಂಬಳಗೆರೆ ಕಲ್ಲೇಶಪ್ಪ. ನಿರ್ದೇಶಕರಾದ ಬೇಲಿಗೌಡ್ರ ನಾಗರಾಜ, ಕಡ್ಲಿ ವೀರಣ್ಣ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts