More

    15 ಸಹಕಾರ ಸಂಘಗಳ ಸಮಾಪನೆಗೆ ಪ್ರಸ್ತಾವನೆ

    ಕೊಟ್ಟೂರು: ತಾಲೂಕಿನ ನಾಲ್ಕು, ಹರಪನಹಳ್ಳಿ ತಾಲೂಕಿನ 11 ಸಹಕಾರ ಸಂಘಗಳು (ಒಟ್ಟು 15) ಸ್ಥಗಿತಗೊಂಡಿವೆ.

    ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಗೊಂಡು ಬೈಲಾ ಉಲ್ಲಂಘಿಸಿದ್ದರಿಂದ ಸಮಾಪನೆಗೆ ಕ್ರಮವಹಿಸಲು ಬಳ್ಳಾರಿಯ ಸಹಕಾರ ಸಂಘಗಳ ಉಪ ನಿಬಂಧಕಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹರಪನಹಳ್ಳಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ.ಎಂ.ಗ್ಯಾನಪ್ಪ ತಿಳಿಸಿದರು.

    ಪಟ್ಟಣದಲ್ಲಿ ಗುರುವಾರ ವಿಜಯವಾಣಿಯೊಂದಿಗೆ ಮಾತನಾಡಿ, ಹರಪನಹಳ್ಳಿ ತಾಲೂಕಿನ ಕಡಬಗೆರೆಯ ಹಾಲು ಉತ್ಪಾದಕರ ಸಹಕಾರ ಸಂಘ, ಹೊಸಕೋಟೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಚಿಗಟೇರಿಯ ನಾರದಮುನಿ ಪಾದಗಟ್ಟೆ ಆಂಜನೇಯಸ್ವಾಮಿ ವಿವಿಧೋದ್ದೇಶ ಸಹಕಾರ ಸಂಘ, ಹರಪನಹಳ್ಳಿಯ ಸಂಸ್ಕಾರ ವಿವಿಧೋದ್ದೇಶ ಸಹಕಾರ ಸಂಘ, ಹಿರೇಮೆಗಳಗೇರಿಯ ಅಕ್ಕಮಹಾದೇವಿ ಮಹಿಳಾ ವಿವಿಧೋೀದ್ದೇಶ ಸಹಕಾರ ಸಂಘ, ಅರಸಿಕೇರೆಯ ಎಸ್ಸಿ ಮಹಿಳಾ ವಿವಿಧೋದ್ದೇಶ ಕೈಗಾರಿಕೆ ಸಹಕಾರ ಸಂಘ, ಆಲದಹಳ್ಳಿಯ ಮಹಿಳಾ ವಿವಿಧೋದ್ದೇಶ ಕೈಗಾರಿಕೆ ಸಹಕಾರ ಸಂಘ, ಮತ್ತಿಹಳ್ಳಿಯ ಸಿಸ್ಟರ್ ನಿವೇದಿತಾ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಕಡತಿಯ ಮಹೇಶ್ವರಿ ಮಹಿಳಾ ವಿವಿಧೋದ್ದೇಶ ಕೈಗಾರಿಕೆ ಸಹಕಾರ ಸಂಘ, ಹೊಂಬಳಗಟ್ಟೆಯ ಕಾಳಿಕಾಂಬಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಕೊಟ್ಟೂರು ತಾಲೂಕಿನ ದೂಪದಹಳ್ಳಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಕೊಟ್ಟೂರು ಕೋಳಿ ಸಾಕಣೆದಾರರ ಮತ್ತು ಮಾರಾಟಗಾರರ ಸಹಕಾರ ಸಂಘ, ರಾಂಪುರದ ಸಾಲೇಶ್ವರ ರೇಷ್ಮೆ ಮತ್ತು ಹತ್ತಿ ಕೈಮಗ್ಗ ನೇಕಾರರ ಉತ್ಪತ್ತಿ ಮತ್ತು ಮಾರಾಟಗಾರರ ಸಹಕಾರ ಸಂಘ, ನಿಂಬಳಗೇರೆ ಚೌಡೇಶ್ವರಿ ಮಹಿಳಾ ವಿವಿಧೋದ್ದೇಶ ಕೈಗಾರಿಕೆ ಸಹಕಾರ ಸಂಘ ಸ್ಥಗಿತಗೊಂಡ ಸಂಘಗಳ ಪಟ್ಟಿಯಲ್ಲಿವೆ ಎಂದರು.

    See also  ಎಳ್ಳು ಬೆಲ್ಲ ತಿಂದು ಒಳ್ಳೆ ಆರೋಗ್ಯ ನಮ್ಮದಾಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts