ಕೊಟ್ಟೂರು: ಬಂಜಾರ ಸಮುದಾಯದವರು ಇಲ್ಲಿನ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಮಂಗಳವಾರ ಸಂಭ್ರಮದಿಂದ ಸಾತಿಯಾಡಿರ ಸಿತ್ಲಾ ಹಬ್ಬ ಆಚರಿಸಿದರು. ಸಂಪ್ರಾದಾಯದಂತೆ ಏಳು ದೇವತೆಗಳಿಗೆ ಪೂಜೆ ಸಲ್ಲಿಸಿ, ಸಕಾಲಕ್ಕೆ ಮಳೆ ಬಂದು, ಸಮೃದ್ಧ ಬೆಳೆಯಾಗಿ ರೈತರಿಗೆಲ್ಲ ಸುಖ-ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪಟ್ಟಣದಲ್ಲಿ ನೆಲೆಸಿರುವ ಸುಮಾರು 60 ಬಂಜಾರ ಕುಟುಂಬಗಳು ಈ ಹಬ್ಬದಲ್ಲಿ ಪಾಲ್ಗೊಂಡು, ಮನೆಯಿಂದ ವಿವಿಧ ಸಿಹಿ ತಿನಿಸುಗಳನ್ನು ತಂದು ಹಂಚಿಕೊಂಡು ಊಟ ಮಾಡಿ ಸಂಭ್ರಮಿಸಿದರು. ಪ್ರತಿ ವರ್ಷ ಈ ಹಬ್ಬದಲ್ಲಿ ಸಮುದಾಯದಲ್ಲಿ ನಿವೃತ್ತಿ ಹೊಂದಿದವರಿಗೆ ಸನ್ಮಾನಿಸಿ ಶುಭಹಾರೈಸಲಾಗುತ್ತಿದೆ. ಈ ವರ್ಷ ನಿವೃತ್ತ ಶಿಕ್ಷಕ ಲೋಕನಾಯ್ಕ ಇವರನ್ನು ಸನ್ಮಾನಿಸಲಾಯಿತು. ಕೆಎಸ್ ಜಯಪ್ರಕಾಶ, ಭೀಮನಾಯ್ಕ, ಜಯಪ್ರಕಾಶ ನಾಯ್ಕ, ದೇವೇಂದ್ರನಾಯ್ಕ, ಮಧು ನಾಯ್ಕ, ಕೂಬ್ಯಾ ನಾಯಕ, ಬೆಂಕ್ಯಾ ನಾಯ್ಕ, ಪತಿನಾಯ್ಕ, ಚಂದ್ರು, ಸುರೇಶ ನಾಯ್ಕ, ಎಸ್.ಎಸ್. ನಾಯ್ಕ, ನೀಲಾನಾಯ್ಕ, ಸಾಮ್ಯಾನಾಯ್ಕ, ರವಿ ನಾಯ್ಕ, ಶೇಖರನಾಯ್ಕ, ಲೋಕ್ಯ ನಾಯ್ಕ ಮುಂತಾದವರಿದ್ದರು.