24.9 C
Bangalore
Wednesday, December 11, 2019

ಕೊಟ್ಟಾರ ಮುಳುಗಡೆ ಭೀತಿ

Latest News

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಹುಣಸೂರು ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ಮೊದಲೇ ಘೋಷಿಸಿದ್ದೆ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್​.ವಿಶ್ವನಾಥ್​ ಅವರನ್ನು ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ ಎಂದು ಶಾಸಕ...

ವೇಣುವಿನೋದ್ ಕೆ.ಎಸ್ ಮಂಗಳೂರು

ಭರ್ಜರಿ ಮಳೆಯಾದಾಗ ಕೃತಕ ನೆರೆ ಉಂಟಾಗುವ ನಗರದ ಮುಖ್ಯ ಪ್ರದೇಶ ಕೊಟ್ಟಾರ ಚೌಕಿ. ಈ ಭಾಗದಲ್ಲಿ ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಚರಂಡಿಗಳ ಹೂಳೆತ್ತುವ ಕೆಲಸವನ್ನೇನೋ ಮನಪಾ ತಂಡಗಳು ಕೈಗೊಂಡಿದ್ದವು. ಆದರೆ ಈ ಚಟುವಟಿಕೆಗಳು ಮೇಲ್ನೋಟಕ್ಕೆ ಸರಿಯಾದಂತೆ ಕಂಡರೂ ಮಳೆ ಸುರಿಯುವಾಗ ಈ ಬಾರಿಯೂ ಕೊಟ್ಟಾರ ಮುಳುಗುವುದು ಗ್ಯಾರಂಟಿ!

ಕೊಟ್ಟಾರದಿಂದ ಕೂಳೂರು ಕಡೆಗೆ ಹೋಗುವಾಗ ಹೋಟೆಲ್ ಜಿಂಜರ್‌ನಿಂದ ತೊಡಗಿ ಫೋರ್ತ್‌ಮೈಲ್‌ವರೆಗೂ ಅಲ್ಲಲ್ಲಿ ತೋಡು ಕಿರಿದಾಗಿರುವುದು ಸಮಸ್ಯೆಗೆ ಮೂಲ ಕಾರಣ. ಜಿಂಜರ್ ಎದುರು ಅಗಲವಾಗಿರುವ ತೋಡು, ಯಮಹಾ ಮೋಟಾರ್ಸ್‌ ಬಳಿ ಕಿರಿದಾಗುತ್ತದೆ. ನೇರವಾಗಿಲ್ಲದೆ ಎಡಕ್ಕೆ ತಿರುವು ಪಡೆಯುತ್ತಾ ಕಿರಿದಾಗುವ ಕಾರಣ ಮಳೆಯಾಗಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವಾಗ ನ್ಯಾಷನಲ್ ಸ್ಟೋರ್ ಮುಂಭಾಗ, ಕೊಟ್ಟಾರ ಚೌಕಿ ಜಂಕ್ಷನ್‌ನಲ್ಲಿ ಈ ಬಾರಿಯೂ ನೆರೆಯಾಗುವ ಸಾಧ್ಯತೆ ಜಾಸ್ತಿ. ಮುಂದೆ ಕೋಡಿಕಲ್ ಕ್ರಾಸ್ ಬಳಿಯಿಂದ ಫೋರ್ತ್‌ಮೈಲ್ ಕಡೆಗೆ ಸಾಗುವಾಗಲೂ ಪೆಟ್ರೋಲ್‌ಬಂಕ್ ಮುಂಭಾಗದಲ್ಲಿ, ಕರಾವಳಿ ಕಾಲೇಜಿನ ಬಳಿ ಮತ್ತೆ ತೋಡು ಅಗಲ ಕಿರಿದಾಗುತ್ತದೆ. ಮುಂದೆ ಫೋರ್ತ್ ಮೈಲ್ ಬಳಿ ದೊಡ್ಡ ತೋಡಿಗೆ ಸೇರುವ ಮೊದಲು ಎಡಕ್ಕೆ ತಿರುಗುವ ತೋಡು ತೀರಾ ಕಿರಿದಾಗಿರುವುದರಿಂದ ಇಡೀ ಚರಂಡಿಯುದ್ದಕ್ಕೂ ಬ್ಲಾಕ್ ಸಾಮಾನ್ಯ.

ಹೂಳು ಬಾಕಿ
ಕೊಟ್ಟಾರ ಚೌಕಿ ಜಂಕ್ಷನ್ ಬಳಿ ಮಂಗಳೂರಿಗೆ ಹೋಗುವ ಬದಿಯಲ್ಲಿನ ಮೋರಿಯ ಅಡಿಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ಉಳಿದುಕೊಂಡಿದೆ. ಈ ಮೋರಿಗೆ ನೀರು ತರುವ ಚರಂಡಿಯ ಹೂಳು ತೆರವು ಮಾಡಲಾಗಿದೆ. ಆದರೆ ಮೋರಿಯ ಒಳ ಭಾಗದಲ್ಲಿ ಹೂಳು ತೆರವುಗೊಳಿಸುವುದು ಆಗುತ್ತಿಲ್ಲ. ಇಲ್ಲೂ ಕೂಡಾ ಭಾರಿ ಪ್ರಮಾಣದಲ್ಲಿ ನೀರು ಬಂದಾಗ ರಸ್ತೆ ಮೇಲೆ ಹರಿಯುವ ಸಾಧ್ಯತೆ ಹೆಚ್ಚು.

ಸುಬ್ರಹ್ಮಣ್ಯಪುರ ನಿವಾಸಿಗಳ ಅಳಲು
ಕೊಟ್ಟಾರದ ತೋಡಿನಲ್ಲಿ ನೀರು ಹರಿಯದೆ ಓವರ್ ಫ್ಲೋ ಆದರೆ ಕೊಟ್ಟಾರ ಸುಬ್ರಹ್ಮಣ್ಯಪುರ ನಿವಾಸಿಗಳಿಗೆ ಆತಂಕ. ಕಾರಣ ಪ್ರತಿ ವರ್ಷವೂ ಮಳೆಗಾಲದಲ್ಲಿ ಇಲ್ಲಿನ 250ರಷ್ಟು ಮನೆಗಳಿಗೆ ನೀರು ನುಗ್ಗುತ್ತದೆ. ಮನೆಯ ಪೀಠೋಪಕರಣ, ಇಲೆಕ್ಟ್ರಾನಿಕ್ ಉಪಕರಣಗಳು ನೀರಿನಿಂದಾಗಿ ಕೆಡುತ್ತದೆ. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತದೆ, ಈ ಬಗ್ಗೆ ಜಿಲ್ಲಾಧಿಕಾರಿ, ಶಾಸಕರು, ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ರಾಜಾರಾಮ ಕಾಮತ್, ಪ್ರಶಾಂತ್ ಕಲ್ಕೂರ ಹಾಗೂ ಜಗಜೀವನ ರಾವ್ ಹೇಳುತ್ತಾರೆ.

ತೋಡುಗಳು ಅಲ್ಲಲ್ಲಿ ಕಿರಿದಾಗಿದ್ದರಿಂದ ನೀರು ಹರಿಯದೆ ಬ್ಲಾಕ್ ಆಗುತ್ತದೆ. ಅದರೊಂದಿಗೆ ಮಡಲು, ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿ ಸೇರಿಕೊಂಡು ಈ ವರ್ಷವೂ ಕೃತಕ ನೆರೆ ಉಂಟಾಗಬಹುದು. ಅದಕ್ಕಾಗಿ ಮನಪಾ ಅಧಿಕಾರಿಗಳು ತಕ್ಷಣ ಗಮನಹರಿಸಿ ಸಪುರವಾದ ಭಾಗವನ್ನು ಅಗಲಗೊಳಿಸಲು ಕ್ರಮ ಕೈಗೊಳ್ಳಬೇಕು.
ಶಿವಾನಂದ ಶೇಟ್, ಕೊಟ್ಟಾರ

ಕೆಲವೆಡೆ ಯಂತ್ರೋಪಕರಣ ಬಳಸಿ ಹೂಳು ತೆಗೆಯುವುದು ಅಸಾಧ್ಯ. ಮುಂದಿನ ವಾರದಿಂದ ಕಾರ್ಮಿಕರನ್ನು ಬಳಸಿಕೊಂಡು ಹೂಳೆತ್ತುವ ಕೆಲಸ ಕೈಗೊಳ್ಳಲಾಗುತ್ತದೆ. ಒಂದು ಮಳೆ ಉತ್ತಮವಾಗಿ ಬಂದಾಗ ಮೋರಿ ಅಡಿಯಲ್ಲಿ ಸಿಲುಕಿರುವ ಹೂಳು ಹೊರಗೆ ಬರುತ್ತದೆ, ಆಗ ಕೆಲಸ ಸುಲಭವಾಗಲಿದೆ.
ಗುರುರಾಜ ಮರಳಹಳ್ಳಿ, ಎಇಇ, ಮನಪಾ

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...