More

    VIDEO | ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದಂತೆ ಮೊದಲು ಕಬ್ಬಿನ ಜ್ಯೂಸ್ ಕುಡಿದೆ! ಸಂತಸ ಹಂಚಿಕೊಂಡ ಕೊರಿಯನ್ ಬ್ಲಾಗರ್

    ಮಹಾರಾಷ್ಟ್ರ: ಯಾವುದೇ ಪ್ರದೇಶಕ್ಕಾದರೂ ಸರಿ, ಪ್ರವಾಸ ತೆರಳಿದಾಗ ಅಲ್ಲಿನ ವಿಶೇಷತೆಗಳನ್ನು ಅನುಭವಿಸಬೇಕು. ಅದರಲ್ಲೂ ಆಹಾರ ಪ್ರಿಯರು ಹೊಸ ಪ್ರದೇಶಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಊಟ-ತಿಂಡಿಗಳನ್ನು ಸವಿಯಲು ಬಯಸುತ್ತಾರೆ. ಅಂತೆಯೇ ಇದೀಗ ಕೊರಿಯನ್ ಬ್ಲಾಗರ್ ಮೊದಲ ಭಾರಿ ಭಾರತಕ್ಕೆ ಭೇಟಿ ನೀಡಿದ್ದು, ಕಬ್ಬಿನ ಜ್ಯೂಸ್ ಕುಡಿದು ಎಂಜಾಯ್ ಮಾಡಿದ್ದಾರೆ.

    ಕಬ್ಬಿನ ಜ್ಯೂಸ್ ಕುಡಿದ ಅನುಭವದ ವಿಡಿಯೋ ಮಾಡಿರುವ ಕೊರಿಯನ್ ಬ್ಲಾಗರ್ ಕಿಮ್ ಜೇಹಿಯೋನ್, ಅದನ್ನು ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ವಿದೇಶಿ ಪ್ರಜೆಗಳು ಕಬ್ಬಿನ ಜ್ಯೂಸ್ ಹೇಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಇನ್​​ಟಾಗ್ರಾಂನಲ್ಲಿ ಈ ವಿಡಿಯೋವನ್ನು 10 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 1.30 ಲಕ್ಷ ಜನರು ಲೈಕ್ ಮಾಡಿದ್ದಾರೆ.

    ವಿಡಿಯೋ ಜತೆಗೆ “ನಾನು ಭಾರತಕ್ಕೆ ಭೇಟಿ ನೀಡಿದಾಗ ಮೊದಲು ಮಾಡಿದ ಕೆಲಸ” ಎಂದು ಬರೆದುಕೊಂಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬ್ಲಾಗರ್ ಕಿಮ್ ಜೇಹಿಯೋನ್ ವಿಮಾನದಿಂದ ಇಳಿದು ಬಸ್ ಮತ್ತು ಬೈಕ್‌ನಲ್ಲಿ ಮಹಾರಾಷ್ಟ್ರದ ಗಲ್ಲಿಗಳಲ್ಲಿ ಸುತ್ತಾಡಿ ಕಬ್ಬು ಜ್ಯೂಸ್ ಕುಡಿಯುತ್ತಿರುವುದನ್ನು ಕಾಣಬಹುದು.

    ಕೊರಿಯನ್ ಬ್ಲಾಗರ್ ಅಪ್ಲೋಡ್ ಮಾಡಿರುವ ಈ ವಿಡಿಯೋಗೆ ಒಬ್ಬರು ಕಮೆಂಟ್ ಮಾಡುತ್ತಾ, ಇದೊಂದು ಉತ್ತಮ ಪಾನೀಯವಾಗಿದೆ. ಭಾರತೀಯರು ಕೊರಿಯಾಕ್ಕೆ ಗುಳೆ ಹೋಗುತ್ತಿದ್ದರೆ, ಕೊರಿಯನ್ನರು ಭಾರತಕ್ಕೆ ಬರುತ್ತಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)

    https://www.instagram.com/reel/Cnmi_pWAAd0/?igshid=YmMyMTA2M2Y=

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts