ಸಮ್ಮೇಳನಗಳು ಭವಿಷ್ಯಕ್ಕೆ ದಿಕ್ಸೂಚಿಯಾಗಲಿ: ಡಾ.ಐ.ಜೆ.ಮ್ಯಾಗೇರಿ ಅಭಿಮತ

blank

ಕೊಪ್ಪಳ: ಸಮ್ಮೇಳನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಇತಿಹಾಸ, ವರ್ತಮಾನ ಹಾಗೂ ಭವಿಷ್ಯಕ್ಕೆ ಸಾಹಿತ್ಯ ದಿಕ್ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಸಮ್ಮೇಳನಗಳು ಆಯೋಜನೆಗೊಳ್ಳಬೇಕಿದೆ ಎಂದು ವಿಜಯಪುರ ಕೇಂದ್ರ ಕಾರಾಗೃಹ ಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ ಅಭಿಪ್ರಾಯಪಟ್ಟರು.

ನಗರದ ಸಾಹಿತ್ಯ ಭವನದಲ್ಲಿ ಕಸಾಪ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸದ್ಯ ವಿವಿಧ ಕಾರಣಗಳಿಂದ ಭಿನ್ನತೆ ವ್ಯಕ್ತವಾಗುತ್ತಿದೆ. ಅದಕ್ಕೆಲ್ಲ ಸಾಹಿತ್ಯ ಉತ್ತರವಾಗಬೇಕಿದೆ. ಚುನಾವಣೆ ಕಾಲಘಟ್ಟದಲ್ಲಿ ನಾವಿದ್ದೇವೆ. ನಾಡಿನ ಭವಿಷ್ಯ ನಮ್ಮ ಮತದ ಮೇಲೆ ನಿರ್ಧಾರವಾಗುತ್ತದೆ. ರಾಜಕಾರಣಿಗಳು ಮತದಾರನನ್ನು ಕತ್ತೆಗಿಂತ ಕೀಳಾಗಿ ಕಾಣುತ್ತಿದ್ದಾರೆ. ಅದನ್ನು ನಾವೆಲ್ಲ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಿದೆ. ನಾನು ಮೂಲತಃ ಕೊಪ್ಪಳದವ. ಕಲ್ಯಾಣ ಕರ್ನಾಟಕ ಭಾಗದ ಎರಡನೇ ಶಕ್ತಿ ಕೇಂದ್ರ ಕೊಪ್ಪಳ. ಕೋಟೆ, ಗವಿಮಠ, ಮಳೇಮಲ್ಲೇಶ್ವರ, ಅಶೋಕನ ಶಾಸನ ಪವಿತ್ರ ತಾಣಗಳಿವೆ. ಜೈನ, ಬೌದ್ಧರ ಕಾಶಿ. ಇಲ್ಲಿನ ಸಾಂಸ್ಕೃತಿಕ ವೈಭವ ಬೇರೆಲ್ಲೂ ಇಲ್ಲ. ತಿರುಳ್ಗನ್ನಡನಾಡು. ಅತ್ಯಂತ ಸರಳ, ಸ್ವಚ್ಛ ಕನ್ನಡದ ನಾಡು. ಇತಿಹಾಸ, ಪುರಾಣದಿಂದಲೂ ಇದು ತಿಳಿದು ಬರುತ್ತದೆ. ಅದು ನಮ್ಮ ಹೆಮ್ಮೆ. ಇಂಥ ನಾಡಿನಲ್ಲಿ ಸಮ್ಮೇಳನ ಉದ್ಘಾಟಿಸಿದ್ದು ಸಂತಸ ನೀಡಿದೆ. ಸಮ್ಮೇಳನಗಳು ಭವಿಷ್ಯಕ್ಕೆ ನಾಂದಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಪನ್ಮೂಲ ಬಳಸಿ ಕೊಪ್ಪಳ ಅಭಿವೃದ್ಧಿ ಕಾಣಲಿ: ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳಕ್ಕೆ ತನ್ನದೇ ಐತಿಹ್ಯವಿದೆ. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಗತಿ ಕಾಣಬೇಕಿದೆ. ಈ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಅರ್ಥಪೂರ್ಣ ನಿರ್ಣಯಗಳು, ಚರ್ಚೆಗಳು ಬರಬೇಕಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಶರಣಪ್ಪ ಬಾಚಲಾಪುರ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ಭಾಷಣದಲ್ಲಿ ಮಾತನಾಡಿ, ಜೈನರ ಕಾಶಿ ಕೊಪ್ಪಳಕ್ಕೆ ತನ್ನದೇ ಶ್ರೀಮಂತಿಕೆಯಿದೆ. ಅಖಂಡ ರಾಯಚೂರಿನಿಂದ ಬೇರ್ಪಟ್ಟ ನಂತರ ಆಗಬೇಕಿದ್ದ ಅಭಿವೃದ್ಧಿ ಆಗಿಲ್ಲ. ತುಂಗಭದ್ರೆ ಇಲ್ಲೇ ಹರಿದರೂ ನಿರೀಕ್ಷಿತ ಮಟ್ಟದಲ್ಲಿ ನೀರಾವರಿಯಾಗಿಲ್ಲ. ಸಿಂಗಟಾಲೂರು, ಕೊಪ್ಪಳ ಏತ ನೀರಾವರಿ ಅನುಷ್ಠಾನವಾಗಿಲ್ಲ. ಹಿರೇಹಳ್ಳ ಯೋಜನೆ ಲೋಕಾರ್ಪಣೆಯಾದರೂ ನೀರಾವರಿ ಸೌಲಭ್ಯ ರೈತರಿಗೆ ದಕ್ಕಿಲ್ಲ. ಸಾಕಷ್ಟು ಕಾರ್ಖಾನೆಗಳಿದ್ದರೂ ಸ್ಥಳೀಯರಿಗೆ ಉದ್ಯೋಗವಕಾಶ ಅಷ್ಟಕ್ಕಷ್ಟೆ ಎಂಬಂತಿದೆ. ರಾಜಕೀಯ ಪ್ರಾತಿನಿಧ್ಯ ಸಿಕ್ಕರೂ ಕೊಪ್ಪಳ ಕ್ಷೇತ್ರದರಿಗೆ ಈವರೆಗೆ ಸಚಿವರಾಗುವ ಯೋಗ ಕೂಡಿ ಬಂದಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಿನ್ನೆಡೆಯಾಗಿರಬಹುದು ಎಂದರು.

ಈವರೆಗೆ ಆಯ್ಕೆಯಾದವರೂ ಅನೇಕ ಅಭಿವೃದ್ಧಿ ಕೆಸಲಗಳನ್ನು ಮಾಡಿದ್ದಾರೆ. ಆದರೆ, ಜನರ ನಿರೀಕ್ಷೆಗೆ ತಕ್ಕಂತೆ ಆಗಿಲ್ಲವೆಂಬ ಅಭಿಪ್ರಾಯವಿದೆ. ಮುಂದೆ ಬರುವವರು ಇದನ್ನು ಅರಿತು ನಡೆಯಲಿ. ಕೈಗಾರಿಕೆಗಳಿಗೆ ಜನರಿಂದ ವಶಪಡಿಸಿಕೊಂಡ ಭೂಮಿ ನಿರುಪಯುಕ್ತವಾಗಿದ್ದು, ಅದನ್ನು ರೈತರಿಗೆ ವಾಪಸ್ ಕೊಡಿಸಬೇಕಿದೆ. ಸಾಕಷ್ಟು ಕೋಳಿ ಫಾರ್ಮ್‌ಗಳಿದ್ದು, ಜನರಿಗೆ ನೊಣಗಳ ಕಾಟ ಹೆಚ್ಚಿದೆ. ಇದನ್ನು ನಿಯಂತ್ರಿಸುವ ಕೆಲಸವಾಗಬೇಕಿದೆ. ವೈಭವದ ಇತಿಹಾಸ, ಧಾರ್ಮಿಕ ಸ್ಥಳವಾಗಿರುವ ಕೊಪ್ಪಳ ತಾಲೂಕು ಈಗ ಜಿಲ್ಲಾ ಕೇಂದ್ರವಾಗಿದ್ದು ಇಲ್ಲಿನ ಜನರು ಸ್ನೇಹ ಪರರು. ಹನುಮಸಾಗರದಿಂದ ಬಂದ ನನ್ನನ್ನು ತಮ್ಮವರೇ ಎಂಬಂತೆ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಅವರ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದರು.

ಸಮ್ಮೇಳನಗಳು ಭವಿಷ್ಯಕ್ಕೆ ದಿಕ್ಸೂಚಿಯಾಗಲಿ: ಡಾ.ಐ.ಜೆ.ಮ್ಯಾಗೇರಿ ಅಭಿಮತ
Share This Article

ಬೇಯಿಸಿದ ಆಲೂಗಡ್ಡೆಯನ್ನು ಹೆಚ್ಚು ಕಾಲ ಬಳಸಲು ಫ್ರಿಡ್ಜ್‌ನಲ್ಲಿ ಇಡಬಹುದೇ; ತಜ್ಞರು ಹೇಳುವುದೇನು? | Health Tips

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಅನೇಕ ಜನರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಅವುಗಳನ್ನು ಸಂಗ್ರಹಿಸಲು ಇದು…

ಈ ಕೆಟ್ಟ ಅಭ್ಯಾಸಗಳಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವಾಗುವುದಿಲ್ಲ; ತಿಳಿದುಕೊಳ್ಳಲೇಬೇಕಾದ ಮಾಹಿತಿ |Health Tips

ಥೈರಾಯ್ಡ್, ಪಿಸಿಓಎಸ್ ಮತ್ತು ಇತರ ಹಾರ್ಮೋನುಗಳ ಬದಲಾವಣೆಗಳಂತಹ ಹಲವು ಕಾರಣಗಳಿಂದ ಮಹಿಳೆಯರ ಬಂಜೆತನ ಉಂಟಾಗಬಹುದು. ಇದು…

ಇಲ್ಲಿ ಮಹಿಳೆಯರು ಬಿಕಿನಿ ಧರಿಸುವಂತಿಲ್ಲ; ಉಲ್ಲಂಘನೆ ಮಾಡಿದ್ರೆ ಆಗುತ್ತೆ ಕಠಿಣ ಶಿಕ್ಷೆ; ಎಲ್ಲಿ ಗೊತ್ತೆ? | Bikinis

Bikinis : ಸಾಮಾನ್ಯವಾಗಿ ಬೀಚ್​ಗಳಲ್ಲಿ ಯುವತಿಯರು ಸೇರಿದಂತೆ ಮಹಿಳೆಯರು ಬಿಕಿನಿ ಧರಿಸಿ ಓಡಾಡುತ್ತಾರೆ. ಅಲ್ಲದೆ, ನಮ್ಮದೆ…